Headlines

ಬೆಂಗಳೂರಿನಲ್ಲಿ 7.11 ಕೋಟಿ ರೂ.ದರೋಡೆ: ತಿರುಪತಿಯಲ್ಲಿ ಕಾರು ಪತ್ತೆ, ಇಬ್ಬರು ಶಂಕಿತರು ವಶಕ್ಕೆ

ಬೆಂಗಳೂರಿನಲ್ಲಿ 7.11 ಕೋಟಿ ರೂ.ದರೋಡೆ: ತಿರುಪತಿಯಲ್ಲಿ ಕಾರು ಪತ್ತೆ, ಇಬ್ಬರು ಶಂಕಿತರು ವಶಕ್ಕೆ


ಬೆಂಗಳೂರು, (ನವೆಂಬರ್ 20): ನಗರದ ಡೈರಿ ಸರ್ಕಲ್ ಬಳಿ ಎಂಟಿಎಂ ವಾಹನದಲ್ಲಿದ್ದ ಬರೋಬ್ಬರಿ 7.11 ಕೋಟಿ ರೂಪಾಯಿ ದರೋಡೆ ಪ್ರಕರಣ ಸಂಬಂಧ ಕಾರು ಇದೆ. ದರೋಡೆಗೆ ಬಳಸಲಾಗಿದ್ದ ಇನ್ನೋವಾ ಕಾರು ತಿರುಪತಿಯಲ್ಲಿ ಬೆಂಗಳೂರು ಪೊಲೀಸರು ಸೀಜ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲು ವಿಚಾರಣೆಗೊಳಪಡಿಸಿದ್ದಾರೆ. ಇನ್ನು ತಿರುಪತಿಯಲ್ಲಿ ಇನೋವಾ ಕಾರಿನಲ್ಲಿ ಹಣ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಕಾರಿನಲ್ಲೇ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಮಾರ್ಗ ಮಧ್ಯೆ ಬೇರೆ ಕಡೆ ಡೈವರ್ಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ತಿರುಪತಿ ಪೊಲೀಸರ ಜೊತೆ ದಕ್ಷಿಣ ವಿಭಾಗ ಪೊಲೀಸರಿಂದ ಶೋಧ ನಡೆಯುತ್ತಿದೆ. ಹೋಟೆಲ್, ಲಾಡ್ಜ್, ದೇವಸ್ಥಾನ ಬಳಿ ಶೋಧ ನಡೆಸಲಾಗುತ್ತಿದೆ.



Source link

Leave a Reply

Your email address will not be published. Required fields are marked *