ಇದ್ದ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೆ ವರ್ಗಾವಣೆ: ಸಚಿವರ ಆಪ್ತ ಕಾರ್ಯದರ್ಶಿ ಪತ್ನಿಗೆ ಒಲಿದ ಡಿಸಿ ಭಾಗ್ಯ

ಇದ್ದ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೆ ವರ್ಗಾವಣೆ: ಸಚಿವರ ಆಪ್ತ ಕಾರ್ಯದರ್ಶಿ ಪತ್ನಿಗೆ ಒಲಿದ ಡಿಸಿ ಭಾಗ್ಯ


ಬೆಂಗಳೂರು, (ಫೆಬ್ರವರಿ 27): ಬೆಂಗಳೂರು ಗ್ರಾಮಾಂತರ (ಬೆಂಗಳೂರು ಗ್ರಾಮಾಂತರ) ಜಿಲ್ಲೆ ಸಿಟಿ ಔಟ್ ಸ್ಕಟ್ಸ್ ನಲ್ಲಿ ಕೆಂಪೇಗೌಡ ಏರ್ಪೋಟ್ ನಿಂದ ಪ್ರಸಿದ್ದಿಯಾಗಿರುವ ಪ್ಯೂಚರ್ ಬೆಂಗಳೂರು (ಬೆಂಗಳೂರು) ಅಂತಲೆ ಕರೆಸಿಕೊಳ್ಳುವ ಜಿಲ್ಲೆ. ಹೀಗಾಗಿ ಜಿಲ್ಲೆಗೆ ಬರಲು ಅಧಿಕಾರಿಗಳು ತುದ್ದಿಗಾಲಲ್ಲಿ ನಿಲ್ಲುತ್ತಿದ್ದಾರೆ, ಡಿಮ್ಯಾಂಡ್ ಸಹ ಹಚ್ಚಿದೆ. ಇಷ್ಟು ಡಿಮ್ಯಾಂಡ್ ನಡುವೆಯೂ ಸಿಐಒ ಆಗಿ ಎರೆಡೂವರೆ ವರ್ಷದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನುರಾಧ ಕೆ ಎನ್ ಡಿಸಿಯಾಗಿ ಮುಂಬಡ್ತಿ ಪಡೆದಿದ್ದಾರೆ, ಬಂದ ಒಂದು ವರ್ಷಕ್ಕೆ ಜಿಲ್ಲಾಧಿಕಾರಿ ಬಸವರಾಜ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಅಚ್ಚರಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೇ ದಿಢೀರ್ ವರ್ಗಾವಣೆ ಮಾಡಿರುವುದಾಗಿದೆ, ಈ ಜಾಗಕ್ಕೆ ಇದೀಗ ಸಚಿವ ಆಪ್ ಕಾರ್ಯದರ್ಶಿ ಸಿಐಒ ಆಗಿದ್ದ ಅನುರಾಧ ಅವರನ್ನೇ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಚಿವರ ಆಪ್ತ ಕಾರ್ಯದರ್ಶಿಗೆ ಎರಡು ಹುದ್ದೆ

ಹೌದು..ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾ ಪಂಚಾಯತಿ ಸಿಇಒ ಆಗಿ ಕಳೆದ ಎರಡೂವರೆ ವರ್ಷದಿಂದ ಕೆ ಎನ್ ಅನುರಾಧ ಅವರು ಅಧಿಕಾರ ಸ್ವೀಕರಿಸಿದ್ದರು. ಜೊತೆಗೆ ಕಳೆದ ಒಂದು ವರ್ಷದಿಂದ ಜಿಲ್ಲೆಗೆ ಡಿಸಿಯಾಗಿ ಎ ಬಿ ಬಸವರಾಜ್ ಅವರು ಬಂದಿದ್ದರು. ಡಿಸಿ ಮತ್ತು ಸಿಇಒ ಇಬ್ಬರು ಜಿಲ್ಲೆಯಲ್ಲಿ ಆಕ್ಟೀವ್ ಆಗಿ ಆಯ್ಕೆಯಾಗಿ ಕೆಲಸ ಮಾಡುತ್ತಾ ಜನಮನ್ನಣೆ ಗಳಿಸಿದ್ದರು. ಆದರೆ ಇದೀಗ ಡಿಸಿಯಾಗಿ ಬಂದ ಒಂದು ವರ್ಷಕ್ಕೆ ಬಸವರಾಜ್ ಅವರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ನೂತನ ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಳೆದ ಎರೆಡೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಐಒ ಅನುರಾಧ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಜಿಲ್ಲಾ ಪಂಚಾಯತಿಯ ಪ್ರಭಾರ ಸಿಇಒ ಆಗಿಯೂ ಅನುರಾಧ ಅವರನ್ನೇ ಮುಂದುವರೆಸಿದೆ. ಅನುರಾಧ ಅವರು ಸಚಿವ ಕೆ.ಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಪತ್ನಿ. ಹೀಗಾಗಿ ಅವರಿಗೆ ಈ ಭಾಗ್ಯ ದೊರೆತಿದೆ ಎಂದು ಜಿಲ್ಲೆಯಲ್ಲಿ ಚರ್ಚೆ ಆರಂಭವಾಗಿದೆ.

ಇದನ್ನೂ ನೋಡಿ: ಮುಂದೆ ಕಾಂಗ್ರೆಸ್ ಸರ್ಕಾರ ಬರೋದು ಕಷ್ಟ! ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಶಾಸಕ ಬಾಲಕೃಷ್ಣ ಶಾಕಿಂಗ್ ಮಾತು

ಒಂದೇ ವರ್ಷಕ್ಕೆ ಆ ಸ್ಥಳವನ್ನು ತೋರಿಸದೇ ವರ್ಗಾವಣೆ ಮಾಡುವುದಕ್ಕೆ ಬಸವರಾಜ್ ಶಾಕ್ ಆಗಿದ್ದಾರೆ. ಜೊತೆಗೆ ನೂತನ ಡಿಸಿಯಾಗಿ ನೇಮಕಗೊಂಡ ಜೊತೆಗೆ ಜಿಲ್ಲಾ ಪಂಚಾಯತಿ ಸಿಇಒ ಆಗಿಯೂ ಅನುರಾಧ ಅವರ ಮುಂದುವರಿದಿರುವುದು ಜಲ್ಲೆಯಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಜೊತೆಗೆ ನೂತನ ಡಿಸಿ ಕೆ ಎನ್ ಅನುರಾಧ ಅವರು ಸಚಿವ ಕೆಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಪತ್ನಿ ಅನ್ನೋ ಕಾರಣಕ್ಕೆ ಎರೆಡೂವರೆ ವರ್ಷದಿಂದ ಜಿಲ್ಲೆಯಲ್ಲಿ ಉನ್ನತ ಸ್ಥಾನದಲ್ಲಿ ನಿಂತಿದ್ದು, ಇದೀಗ ಡಿಸಿಯಾಗಿ ಬಡ್ತಿ ಸಹ ಸಂಸ್ಥೆ ಎಂಬ ಮಾತು ಕೇಳಿ ಬರುತ್ತಿವೆ. ಇನ್ನೂ ಜಿಲ್ಲೆಯಲ್ಲಿ ಸಚಿವರ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಉನ್ನತ ಹುದ್ದೆಗಳಿಗೆ ನೇಮಕ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದ್ದು, ಇದೀಗ ಡಿಸಿ ದಿಡೀರ್ ವರ್ಗಾವಣೆ ಮಾಡಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಇತ್ತೀಚೆಗಷ್ಟೇ ಅಧಿಕಾರಿಗಳಿಗೆ ಸ್ಥಾನ ತೋರಿಸದೆ ಎತ್ತಂಗಡಿ ಮಾಡುತ್ತಿದ್ದಾರೆ ಅಂತ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿತ್ತು. ಇದರಲ್ಲೇ ಬೆಂಗಳೂರು ಗ್ರಾಮಾಂತರ ಡಿಸಿ ಬಸವರಾಜ್ ಗೆ ಯಾವುದೇ ಸ್ಥಾನ ನೀಡದೆ ವರ್ಗಾವಣೆ ಮಾಡಿರುವುದು ಸರ್ಕಾರದ ನಡೆ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *