ಮರಕ ಸಂಕಾಂತ್ರಿಗೆ ಸಿಲಿಕಾನ್​​ ಸಿಟಿ ದುಬಾರಿ: ಗಗನಕ್ಕೇರಿದ ಹೂವು, ಹಣ್ಣು, ಕಬ್ಬು, ಎಳ್ಳು ಬೆಲ್ಲ ಬೆಲೆ

ಮರಕ ಸಂಕಾಂತ್ರಿಗೆ ಸಿಲಿಕಾನ್​​ ಸಿಟಿ ದುಬಾರಿ: ಗಗನಕ್ಕೇರಿದ ಹೂವು, ಹಣ್ಣು, ಕಬ್ಬು, ಎಳ್ಳು ಬೆಲ್ಲ ಬೆಲೆ


ಬೆಂಗಳೂರು, ಜ.15: ಬೆಂಗಳೂರು ಮೊದಲೇ ದುಬಾರಿ, ಇನ್ನು ಹಬ್ಬ ದಿನ ಕೇಳಬೇಕಾ. ಮರಕ ಸಂಕಾಂತರಿಗೆ ಸಿಲಿಕಾನ್ ಸಿಟಿ (ಬೆಂಗಳೂರು ಸಂಕ್ರಾಂತಿ ಶಾಪಿಂಗ್) ದುಬಾರಿಯಾಗಿದೆ. ಎಲ್ಲಾ ದುಬಾರಿ ಗ್ರಾಹಕರು ಮುಖದಲ್ಲಿ ಹಬ್ಬದ ಖುಷಿಯೇ ಇಲ್ಲ. ಈ ಹಬ್ಬದಂದು ಹಿನ್ನಲೆಯಲ್ಲಿ ಗ್ರಾಹಕರು ಕಿಸೆ ಸುಡುವುದು ಖಂಡಿತ. ಕೆ.ಆರ್ ಮಾರುಕಟ್ಟೆಯಲ್ಲಿ ಕಬ್ಬುಗಳ ಜೊತೆಗೆ ಎಳ್ಳು ಬೆಲ್ಲ, ಕಡಲೆಕಾಯಿ, ಗೆಡ್ಡೆ ಗೆಣಸುಗಳು, ಹಣ್ಣು, ಹೂವುಗಳ ಕಾರುಬಾರು ಜೋರಾಗಿದೆ. ಇನ್ನು ವಿಶೇಷವೆಂದರೆ ಬೆಂಗಳೂರಿನ ಬೀದಿ.. ಬೀದಿಗಳಲ್ಲಿ ಕಬ್ಬುಗಳ ಮಾರಾಟ ಹೆಚ್ಚಿದೆ. ಎಳ್ಳು ಬೆಲ್ಲದ ಜೊತೆಗೆ ಈ ಬಾರಿ ಸಂಕಾಂತ್ರಿಗೆ ಕಬ್ಬು ಕೂಡ ಪೈಪೋಟಿ ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಸಂಕ್ರಾಂತಿಯ ಸುಗ್ಗಿ ಜೋರಾಗಿದ್ದರೆ, ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಕಬ್ಬು, ಗೆಣಸು ಹಾಗೂ ಅವರೆಕಾಯಿ ಖರೀದಿಯ ಭರಾಟೆ ಕಳೆದ ಎರಡು ದಿನಗಳಿಂದ ಜೋರಾಗಿದೆ.

ಕೆಆರ್ ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ವಿಜಯನಗರ, ಜಯನಗರ, ದಾಸರಹಳ್ಳಿ, ಕೆಆರ್ ಪುರ, ಮಲ್ಲೇಶ್ವರಂ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಕಬ್ಬು, ಖರೀದಿ ಭರಾಟೆ ಜೋರಾಗಿದೆ. ಬೆಂಗಳೂರಿನಲ್ಲಿ ಮರಕ ಸಂಕಾಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಕಾರಣ ಜನ ಖಂಡಿತ ಬೆಲೆ ಏರಿಕೆ ಆದ್ರೂ ಇವುಗಳನ್ನು ಖರೀದಿಸುತ್ತಾರೆ. ಇತರ ಮಾರುಕಟ್ಟೆಗಳಿಗೆ ಹೊಲಿಸಿದ್ರೆ ಕೆ.ಆರ್ ಮಾರ್ಕೆಟ್ ನಲ್ಲಿ ಸ್ವಲ್ಪ ಕಡಿಮೆ ಇದೆ ಎಂದು ಜನ ಹೇಳುತ್ತಿದ್ದಾರೆ. ಈ ಹೂ, ಹಣ್ಣುಗಳ ಬೆಲೆ ದುಬಾರಿಯಾಗಿದೆ. ಅದರಲ್ಲೂ ಕನಕಾಂಬರ, ಕಾಕಡ, ಮಲ್ಲಿಗೆ ಮತ್ತು ಸೇವಂತಿ ಹೂವುಗಳ ದರ ಹೆಚ್ಚಾಗಬಹುದು. ದಾಳಿಂಬೆ, ಕಡಲೆಕಾಯಿ, ಅವರೆಕಾಯಿ, ಬೆಲ್ಲ ಮತ್ತು ಕಬ್ಬಿನ ಬೆಲೆಗಳು ಏರಿಕೆಯಾಗಿವೆ. ಅದರೂ ಕೂಡ ಗ್ರಾಹಕರು ಮಾತ್ರ ಜೋರಾಗಿದೆ. ಈ ಬೆಲೆ ಏರಿಕೆಯಿಂದ ವ್ಯಾಪರಸ್ಥರ ಮೊಗದಲ್ಲಿ ಅಂದಹಾಸ ತಂದಿದೆ.

ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಕಳಪೆ ಗಾಳಿ ಗುಣಮಟ್ಟ, ಅಸ್ತಮಾ, ಉಸಿರಾಟಕ್ಕೆ ತೊಂದರೆಯಾಗಲಿದೆ

ಹೂಗಳ ಬೆಲೆ ಎಷ್ಟಿದೆ?

ಕನಕಾಂಬರ-700-800 ರೂ.

ಕಾಕಡ-500-600 ರೂ.

ಸೇವಂತಿ-70 ರೂ.

ಗುಲಾಬಿ-80 ರೂ.

ಚಂಡು- 30-40 ರೂ.

ಹಣ್ಣುಗಳ ಬೆಲೆ ಎಷ್ಟಿದೆ?

ಕಬ್ಬು ಜೋಡಿ- 120 -150 ರೂ.

ಬೆಲ್ಲ (ಒಂದು ಕೆ.ಜಿ.) -80 ರೂ.

ಸೇಬು ಹಣ್ಣು- 160 ರೂ.

ದಾಳಿಂಬೆ ಹಣ್ಣು- 140 ರೂ.

ಕಡಲೆಕಾಯಿ-100 ರೂ.

ಅವರೆಕಾಯಿ- 50 ರಿಂದ 60 ರೂ.

ಸಿಹಿ ಗೆಣಸು- 40 ರುಪಾಯಿ

ಇನ್ನು ಮಾವಿನಸೊಪ್ಪು ಕಟ್ಟು- 20 ರೂ, ರೆಡಿಮೇಡ್ ಎಳ್ಳು ಬೆಲ್ಲಕ್ಕೂ ಡಿಮ್ಯಾಂಡ್ ಇದೆ. ಇದಕ್ಕೂ 250 ರಿಂದ 300 ರೂಪಾಯಿ ಇದೆ. ಕಬ್ಬಿನ ಜೊತೆಗೆ ಗೆಡ್ಡೆ, ಗೆಣಸು ಅವರೆಕಾಳು, ನೆಲ ಕಡಲೆ, ಹಬ್ಬಕ್ಕೆ ಬಹು ಮುಖ್ಯವಾಗಿ ಬೇಕಾಗುವ ಹೂವಿನ ಎಲ್ಲದರ ಬೆಲೆ ಕೂಡ ಏರಿಕೆ ಕಂಡಿದೆ. ಇನ್ನು ವರ್ಷದ ಮೊದಲನೇ ಹಬ್ಬ ಆಗಿರುವ ಕಾರಣ ಎಷ್ಟೇ ಬೆಲೆ ಏರಿಕೆ ಆದ್ರೂ ಕೂಡ ಹಬ್ಬ ಮಾಡೋದು ಅನಿವಾರ್ಯ ಅಂತ ಸಿಲಿಕಾನ್ ಸಿಟಿ ಮಂದಿ ನಗುತ್ತಾಳೆ ಖರೀದಿ ಮಾಡ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *