Headlines

ಅಂತರಾಜ್ಯ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್; 8 ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ಮಾಹಿತಿ

ಅಂತರಾಜ್ಯ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್; 8 ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ಮಾಹಿತಿ


ನೈರುತ್ಯ ರೈಲ್ವೇಸ್ ನಿಂದ ವಿಶೇಷ ರೈಲು ಸೇವೆ ಆರಂಭ

ಬೆಂಗಳೂರು, ಡಿಸೆಂಬರ್ 07: ಇಂಡಿಗೋ ಫ್ಲೈಟ್ಸ್ ಕ್ಯಾನ್ಸಲ್ (ಇಂಡಿಗೋ ವಿಮಾನ) ಹೆಚ್ಚುವರಿ ಎಸಿ ಬೋಗಿಗಳ ಸೇವೆಯನ್ನ ಆರಂಭಿಸಿದ್ದು, ಬೆಂಗಳೂರಿನಿಂದ ಚೆನ್ನೈ, ಪುಣೆ, ದೆಹಲಿಗೆ ವಿಶೇಷ ರೈಲು ಸಂಚಾರವನ್ನು ಘೋಷಿಸಲಾಗಿದೆ. ಬೆಂಗಳೂರಿನ ನೈರುತ್ಯ ವಿಭಾಗದಿಂದ ಇಂದಿನಿಂದ ದೆಹಲಿ, ಪುಣೆ ಮತ್ತು ಚೆನ್ನೈಗೆ ಹೆಚ್ಚುವರಿಯಾಗಿ 8 ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಇಂದಿನಿಂದ ಮೂರು ದಿನಗಳ ವರೆಗೆ ವಿಶೇಷ ರೈಲು ಸೌಲಭ್ಯ

ಕೆಎಸ್ಆರ್ ಬೆಂಗಳೂರು ಟು ಪುಣೆ, ಕೆಎಸ್ಆರ್ ಬೆಂಗಳೂರು ಟು ಚೆನ್ನೈ, ಯಶವಂತಪುರ ಟು ದೆಹಲಿ, ಹೀಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಟೇಷನ್, ಕಂಟೋನ್ಮೆಂಟ್ ಸ್ಟೇಷನ್ ಸ್ಟೇಷನ್, ಯಶವಂತಪುರ ಸ್ಟೇಷನ್ ನಿಲ್ದಾಣದಿಂದ ಈ ವಿಶೇಷ ರೈಲುಗಳು ಸಂಚರಿಸಲಿವೆ. ಇಂದು ಬೆಳಗ್ಗೆ 7 ಗಂಟೆಗೆ ಮೊದಲ ವಿಶೇಷ ರೈಲು ಯಶವಂತಪುರ ಸ್ಟೇಷನ್ ನಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ಗೆ ಸಂಚಾರ ಆರಂಭವಾಗಿದೆ. ಚೆನೈಗೆ ಎರಡನೇ ರೈಲು ಬೆಳಗ್ಗೆ 8-05 ಗಂಟೆಗೆ ಹೊರಟಿದೆ. ಇನ್ನು ಮೂರನೇ ರೈಲು ಕೆಎಸ್ಆರ್ ಬೆಂಗಳೂರಿನಿಂದ ರಾತ್ರಿ 7-30ಕ್ಕೆ ಪುಣೆಗೆ ಸಂಚಾರ ನಡೆಯಲಿದೆ. ನಾಳೆಯೂ ಕೂಡ ಚೆನ್ನೈಗೆ ವಿಶೇಷ ರೈಲಿನ ಸೇವೆ ಇರಲಿದೆ, ಬೆಂಗಳೂರಿನಿಂದ ಹೊರಡುವ ವಿಶೇಷ ರೈಲುಗಳು ಮತ್ತೆ ಬೆಂಗಳೂರಿಗೆ ಮರಳಲಿವೆ.

100 ಕ್ಕೂ ಅಧಿಕ ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ

  • ರೈಲು ಸಂಖ್ಯೆ 06259 ಯಶವಂತಪುರ- ಹಜರತ್ ನಿಜಾಮುದ್ದೀನ್ ವಿಶೇಷ ರೈಲು 07.12.2025 ರಂದು ಬೆಳಿಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಟು ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಹಜರತ್ ನಿಜಾಮುದ್ದೀನ್ ತಲುಪುತ್ತದೆ.
  • ರೈಲು ಸಂಖ್ಯೆ 06260 ಹಜರತ್ ನಿಜಾಮುದ್ದೀನ್- ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು 09.12.2025 ಮಂಗಳವಾರದಂದು ರಾತ್ರಿ 11.50ಕ್ಕೆ ಹಜರತ್ ನಿಜಾಮುದ್ದೀನ್ ನಿಂದ ಹೊರಟು ಗುರುವಾರ ರಾತ್ರಿ 7.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪುತ್ತದೆ.
  • ರೈಲು ಸಂಖ್ಯೆ 06263 ಕೆ.ಎಸ್.ಆರ್. ಬೆಂಗಳೂರು- ಪುಣೆ ವಿಶೇಷ ರೈಲು 07.12.2025 ರಂದು ರಾತ್ರಿ 7.30 ಗಂಟೆಗೆ ಕೆ.ಎಸ್.ಆರ್.ಬೆಂಗಳೂರು ನಿಲ್ದಾಣದಿಂದ ಹೊರಟು ಮರುದಿನ ಮಧ್ಯಾಹ್ನ 2.30 ಗಂಟೆಗೆ ಪುಣೆಯನ್ನು ತಲುಪುತ್ತದೆ.
  • ರೈಲು ಸಂಖ್ಯೆ 06264 ಪುಣೆ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು 08.12.2025 ಸೋಮವಾರದಂದು ಮಧ್ಯಾಹ್ನ 3.30ಕ್ಕೆ ಪುಣೆಯಿಂದ ಹೊರಟು ಮರುದಿನ ಬೆಳಿಗ್ಗೆ 09.30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪುತ್ತದೆ.
  • ರೈಲು ಸಂಖ್ಯೆ 06255 ಕೆ.ಎಸ್.ಆರ್. ಬೆಂಗಳೂರು- ಚೆನ್ನೈ ಎಗ್ಮೋರ್ ವಿಶೇಷ ರೈಲು 07.12.2025 ರಂದು ಬೆಳಗ್ಗೆ 08.05ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಚೆನ್ನೈ ಎಗ್ಮೋರ್ ತಲುಪುತ್ತದೆ.
  • ರೈಲು ಸಂಖ್ಯೆ 06256 ಚೆನ್ನೈ ಎಗ್ಮೋರ್- ಕೆ.ಎಸ್.ಆರ್. ಬೆಂಗಳೂರು ವಿಶೇಷ ರೈಲು 07.12.2025ರಂದು ಮಧ್ಯಾಹ್ನ 3.45ಕ್ಕೆ ಚೆನ್ನೈ ಎಗ್ಮೋರ್ ನಿಂದ ಹೊರಟು ರಾತ್ರಿ 10.45ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
  • ರೈಲು ಸಂಖ್ಯೆ 06255 ಕೆ.ಎಸ್.ಆರ್. ಬೆಂಗಳೂರು-ಚೆನ್ನೈ ಕೇಂದ್ರ ವಿಶೇಷ ರೈಲು 08.12.2025ರಂದು ಬೆಳಗ್ಗೆ 08.05ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಚೆನ್ನೈ ಸೆಂಟ್ರಲ್ ತಲುಪುತ್ತದೆ.
  • ರೈಲು ಸಂಖ್ಯೆ 06256 ಚೆನ್ನೈ ಸೆಂಟ್ರಲ್- ಕೆ.ಎಸ್.ಆರ್. ಬೆಂಗಳೂರು ವಿಶೇಷ ರೈಲು 08.12.2025ರಂದು ಸಂಜೆ 4.10ಕ್ಕೆ ಚೆನ್ನೈ ಸೆಂಟ್ರಲ್ ನಿಂದ ಹೊರಟು ರಾತ್ರಿ 10.45ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಇದನ್ನೂ ಓದಿ ಯಶವಂತ – ಕಾರವಾರದ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು: ಇಲ್ಲಿದೆ, ನಿಲುಗಡೆ ಇತ್ಯಾದಿ ವಿವರ

ಇಂಡಿಗೋದ ವಿಮಾನ ರದ್ದತಿ ಹಿನ್ನೆಲೆ ಖಾಸಗಿ ಬಸ್ ದರ ಗಗನಕ್ಕೆ

  1. ಬೆಂಗಳೂರು ಟು ಮುಂಬೈ ರೂ 3,000 – ರೂ 9,000
  2. ಬೆಂಗಳೂರು ಟು ಪುಣೆ ರೂ 2,800 – ರೂ 8,700
  3. ಬೆಂಗಳೂರು ಟು ಅಹಮದಾಬಾದ್ ರೂ 3,000 – ರೂ 7,000

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 12:39 pm, ಭಾನುವಾರ, 7 ಡಿಸೆಂಬರ್ 25



Source link

Leave a Reply

Your email address will not be published. Required fields are marked *