ಬೆಂಗಳೂರು, ಫೆಬ್ರವರಿ 16: ಆಯಪ್ ಬುಕಿಂಗ್ ಆಧಾರಿತ ಟ್ಯಾಕ್ಸಿಆಟೋ ಸೇವೆಗಳ ವೇಳೆ ಹೆಚ್ಚಿನ ಹಣಕ್ಕೆ ಚಾಲಕರು ಪ್ರಯಾಣಿಕರನ್ನು ಪೀಡಿಸುವ ಘಟನೆಗಳು ಬೆಂಗಳೂರಿನಲ್ಲಿ ಮೇಲಿಂದ ಮೇಲೆ ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಮತ್ತೊಂದು ಸೇರ್ಪಡೆ, ಸ್ಟಾರ್ಟ್ಅಪ್ ಒಂದರ ಸಂಸ್ಥಾಪಕ ಹಾಗೂ ಸಿಐಒ ಧನಂಜಯ್ ಯಾದವ್ ಎಂಬವರು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಕ್ಯಾಬ್ನಲ್ಲಿ ತಾವು ಸಂಭವಿಸಿದ ಆತಂಕಕಾರಿ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಯಾಣದ ವೇಳೆ ತಾನು ಬಂಧಿ ಎಂಬ ಭಾವನೆ ತನಗೆ ಮೂಡಿದ್ದು, ದೆಹಲಿಯ AI ಇಂಪ್ಯಾಕ್ಟ್ ಸಮಿಟ್ಗೆಂದು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿರೋದಾಗಿ ಅವರು ಆರೋಪಿಸಿದ್ದಾರೆ.
ಹೆಚ್ಚಿನ ಹಣಕ್ಕೆ ಡಿಮ್ಯಾಂಡ್
ಇಂದು ವಿಮಾನ ನಿಲ್ದಾಣಕ್ಕೆ ನನ್ನ ಕ್ಯಾಬ್ ರೈಡ್ನಲ್ಲಿ ಬಹುತೇಕ ಒತ್ತೆಯಾಳು ಎಂದು ಭಾವಿಸಿದೆ.
ಮೂಲಕ ಎಸಿ ಕ್ಯಾಬ್ ಬುಕ್ ಮಾಡಿದೆ @ನಮ್ಮಯಾತ್ರಿ ದೆಹಲಿಗೆ ನನ್ನ ವಿಮಾನಕ್ಕಾಗಿ (ಇಂಪ್ಯಾಕ್ಟ್ ಎಐ ಶೃಂಗಸಭೆ). ಆ್ಯಪ್ ಬೇರೆ ರೀತಿಯಲ್ಲಿ ತೋರಿಸುತ್ತಿದ್ದರೂ – ಇದು ನಾನ್-ಎಸಿ ರೈಡ್ ಎಂದು ಹೇಳಿಕೊಂಡು ಚಾಲಕ ಎಸಿ ಆನ್ ಮಾಡಲು ನಿರಾಕರಿಸಿದರು.
ನಂತರ ಅವರು ಪ್ರಯಾಣ ದರವನ್ನು ಪರಿಶೀಲಿಸಿದರು … pic.twitter.com/SXi2t2QkTw
— ಧನಂಜಯ್ ಯಾದವ್ (@imDhananjay) ಫೆಬ್ರವರಿ 15, 2026
ಅವರು ನೀಡಿರುವ ಮಾಹಿತಿ ಪ್ರಕಾರ ವಿಮಾನ ನಿಲ್ದಾಣಕ್ಕೆ ನಮ್ಮ ಯಾತ್ರಿ ಆಯಪ್ ಮೂಲಕ ಎಸ್ಸಿ ಕ್ಯಾಬ್ ಬುಕ್ ಮಾಡಲಾಗಿದೆ. ಆದರೆ ಪ್ರಯಾಣದ ವೇಳೆ ಚಾಲಕ ಎಸಿ ಆನ್ ಮಾಡಲು ನಿರಾಕರಿಸಿದೆ, ಇದು ನಾನ್-ಎಸಿ ಬುಕ್ಕಿಂಗ್ ಎಂದು ತಿಳಿಸಿದ್ದಾನೆ. ಆಪ್ನಲ್ಲಿ ಎಸಿ ರೈಡ್ ಎಂದು ಸ್ಪಷ್ಟವಾಗಿ ತೋರಿಸುತ್ತಿದೆ ಎಂದರೂ ಆತ ಅದನ್ನು ಅಲ್ಲಗಳೆದಿದ್ದಾನೆ. ಜೊತೆಗೆ ಆಯಪ್ ತೋರಿಸುತ್ತಿದ್ದ 844 ರೂಪಾಯಿ ಅಧಿಕ ಹಣ ನೀಡುವಂತೆ ಪೀಡಿಸಿದ್ದಾನೆ. ಇದು ಮೀಟರ್ ಟ್ಯಾಕ್ಸಿ ಆಗಿರುವ ಕಾರಣ, ಪ್ರತಿ ಕಿಲೋಮೀಟರಿಗೆ 24 ರೂ. ಶುಲ್ಕವಿದೆ ಎಂದು ತಿಳಿಸಿದ್ದಾನೆ. ಈ ವೇಳೆ ಯಾದವ್ ಅವರು ಆಯಪ್ನಲ್ಲಿ ತೋರಿಸಿದ ಮೊತ್ತವನ್ನೇ ಬಯಸಿದರೂ ಅವರು ಒಪ್ಪಲಿಲ್ಲ.
ಇದನ್ನೂ ಓದಿ: ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ
ಈ ರೀತಿಯಾಗಿ ಕ್ಯಾಬ್ ಬುಕ್ ಮಾಡಲು ವಾಹನ ನಿಲ್ಲಿಸುವಂತೆ ಕೇಳಿದಾಗ, 844 ರೂಪಾಯಿ ಹಣದ ಮೊತ್ತವನ್ನು ಪಾವತಿಸಿದರೆ ನೀವು ಮತ್ತೊಂದು ಇಳಿದಿದ್ದೀರಿ ಎಂದು ಹೇಳಿದರು, ಕೊನೆಗೆ ವಿಮಾನ ನಿಲ್ದಾಣವನ್ನು ತಲುಪಬೇಕಾದ ಕಾರಣ ಅವರು ಹೇಳಿದ್ದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಯಾದವ್ ಆರೋಪಿಸಿದ್ದಾರೆ. ಈ ಅನುಭವದಿಂದ ತಮಗೆ ಅಸುರಕ್ಷಿತ ಭಾವನೆ ಉಂಟಾಯಿತು. ಅವರ ಬಗ್ಗೆ ದೂರು ದಾಖಲಾಗಿರುವ ಅವರು, ಚಾಲಕರ ವಿರುದ್ಧ ಅಧಿಕಾರಿಗಳು ಹಾಗೂ ಕ್ಯಾಬ್ ಸೇವಾ ಸಂಸ್ಥೆಗಳ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅವರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಆಯಪ್ ಆಧಾರಿತ ಕ್ಯಾಬ್ ಸೇವೆಗಳ ಸುರಕ್ಷತೆ ಮತ್ತು ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.