Headlines

ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ: AI ಆಧಾರಿತ ಬಫೆ ಆ್ಯಪ್ ನಿರ್ಮಿಸಿದ ಬೆಂಗಳೂರಿನ ಟೆಕ್ಕಿಗೆ ಜೀವ ಬೆದರಿಕೆ

ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ: AI ಆಧಾರಿತ ಬಫೆ ಆ್ಯಪ್ ನಿರ್ಮಿಸಿದ ಬೆಂಗಳೂರಿನ ಟೆಕ್ಕಿಗೆ ಜೀವ ಬೆದರಿಕೆ


ಬೆಂಗಳೂರು, ಫೆ.11: ಬೆಂಗಳೂರಿನ ಟೆಕ್ಕಿ ಯಾರಾದರೂ ವಿವಾಹದ ಔತಣಕೂಟಗಳಿಗೆ (ವೆಡ್ಡಿಂಗ್ ಬಫೆ) ಐ ಆಧಾರಿತ ಆಯಪ್ (AI-ಆಧಾರಿತ ಅಪ್ಲಿಕೇಶನ್) ಒಂದನ್ನು ಸ್ಥಾಪಿಸಿದ್ದಾರೆ. ಇದೀಗ ಈ ಟೆಕ್ಕಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪಂಕಜ್ ಎಂಬ ಟೆಕ್ಕಿ, ಕೇವಲ ತಮಾಷೆಗಾಗಿ ಮದುವೆ ಸಮಾರಂಭಗಳನ್ನು ಬಫೆ ವ್ಯವಸ್ಥೆ ನಿರ್ವಹಿಸುವ ಎಐ ಆಯಪ್ ಒಂದನ್ನು ಸಿದ್ಧಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಆಯಪ್ ಬಗ್ಗೆ ಹಂಚಿಕೊಂಡ ನಂತರ ಪಂಕಜ್ ಅವರಿಗೆ ನೂರಾರು ದ್ವೇಷಪೂರಿತ ಸಂದೇಶಗಳು ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಈ ಎರಡು ಕಾರಣಕ್ಕೆ ಇವರಿಗೆ ಬೆದರಿಕೆ ಬಂದಿದೆ.

ಈ ಐ ಮಾದರಿಗಳನ್ನು (AI ಮಾದರಿಗಳು) ತರಬೇತುಗೊಳಿಸಲು ಹಾಗೂ ಹೆಚ್ಚಿನ ವಿದ್ಯುತ್ ಮತ್ತು ನೀರಿನ ಬಳಕೆ. ಇಂತಹ ಉಪಯೋಗವಿಲ್ಲದ ಆಯಪ್‌ಗಳಿಗಾಗಿ ಎಐ ಬಳಸುವ ಮೂಲಕ ಪರಿಸರಕ್ಕೆ ಹಾನಿ ಮಾಡುತ್ತಿದೆ ಎಂದು ಎಕ್ಸ್‌ನಲ್ಲಿ ಕಮೆಂಟ್ ಮಾಡಲಾಗಿದೆ. ಅಮೂಲ್ಯವಾದ ಐ ತಂತ್ರಜ್ಞಾನವನ್ನು ಇಂತಹ ಸಣ್ಣ ಕೆಲಸಗಳಿಗೆ ವ್ಯರ್ಥ ಮಾಡುತ್ತಿರುವಿರಿ ಎಂದು ಇನ್ನೂ ಕೆಲವರು ಹೇಳಿದ್ದಾರೆ. ನಾನು ಕೇವಲ ತಮಾಷೆಗಾಗಿ ಒಂದು ಆಯಪ್ ಮಾಡಿದ್ದೇನೆ, ಕ್ಯಾನ್ಸರ್ ಅನ್ನು ಕಂಡುಹಿಡಿಯುತ್ತಿಲ್ಲ. ಕೇವಲ ಒಂದು ಬಫೆ ಆಯಪ್‌ಗಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ನನ್ನ ಕುಟುಂಬವನ್ನು ಗುರಿಯಾಗಿಸಿ ಕೊಲೆ ಬೆದರಿಕೆ ಹಾಕುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್;

ಈ ಪೋಸ್ಟ್ ಅನ್ನು ನೋಡಿ ನೆಟ್ಟಿಗರು ತಮ್ಮಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾನಸಿಕವಾಗಿ ಅಸ್ವಸ್ಥರಾಗಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಒಂದು ಸಣ್ಣ ಪ್ರಾಜೆಕ್ಟ್‌ಗಾಗಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇಂತಹ ಬೆದರಿಕೆಗಳಿಗೆ ಕುಗ್ಗಬೇಡಿ, ಅದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ನೀವು ಇಂತಹ ಬೆದರಿಕೆ ಹಾಕುವವರನ್ನು ಮ್ಯೂಟ್ ಮಾಡಿ ಅಥವಾ ಬ್ಲಾಕ್ ಮಾಡಿ. ನಿಮ್ಮ ಕೆಲಸ ಉತ್ತಮವಾಗಿದೆ ಎಂದು ಮತ್ತೊಬ್ಬರು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಚಾಲಕನ ಪ್ರಾಮಾಣಿಕತೆ: ಕ್ಯಾಬ್‌ನಲ್ಲಿ ಬ್ಯಾಗ್ ಮರೆತ ಪ್ರಯಾಣಿಕನಿಗಾಗಿ ಮಧ್ಯರಾತ್ರಿ ಹುಡುಕಾಟ ನಡೆಸಿದ ಚಾಲಕ

ಪರಿಸರದ ಮೇಲೆ AI ಪ್ರಭಾವ:

ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಪ್ರಕಟಿಸಿದ 2025 ರ ವರದಿ ಪ್ರಕಾರ, ಶಕ್ತಿಯುತ ಉತ್ಪಾದಕ AI ಮಾದರಿಗಳನ್ನು ಅಭಿವೃದ್ಧಿಪಡಿಸಲು ವಿದ್ಯುತ್ ಬೇಡಿಕೆ ಮತ್ತು ನೀರಿನ ಬಳಕೆ ಸೇರಿದಂತೆ ಪರಿಸರದ ಅಂಶಗಳು. ಒಂದು ದೊಡ್ಡ AI ಮಾದರಿಯ ತರಬೇತಿಯು ನೂರಾರು ಅಮೆರಿಕನ್ ಮನೆಗಳು ಒಂದು ವರ್ಷಕ್ಕೆ ಬಳಸುವಷ್ಟು ವಿದ್ಯುತ್ ಅನ್ನು ಕೇವಲ ಕೆಲವು ವಾರಗಳಲ್ಲಿ ಬಳಸಬಹುದು. ಇದು ಇಂಗಾಲದ ಹೊರಸೂಸುವಿಕೆಗೆ (ಕಾರ್ಬನ್ ಹೆಜ್ಜೆಗುರುತು) ಇದೆ. ಸರ್ವರ್‌ಗಳು ಬಿಸಿಯಾಗದಂತೆ ತಡೆಯಲು ಲೀಟರ್ ಶುದ್ಧ ನೀರು. ಆ ಸರ್ವರ್ ತಂಪಾಗಿಸಲು ಸುಮಾರು 500 ಮಿಲಿ ನೀರು ಖರ್ಚಾಗುತ್ತದೆ. ಪರಿಸರದ ಬಗ್ಗೆ ಕಳವಳ ವ್ಯಕ್ತಪಡಿಸುವುದು ಸರಿಯೇ, ಆದರೆ ಕಳವಳ ಪಡುವಷ್ಟು ಪರಿಸರವನ್ನು ನಾಶಪಡಿಸಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *