Headlines

ಬೆಂಗಳೂರಿಗರೇ ಗಮನಿಸಿ: ಈ ಮಾರ್ಗಗಳಲ್ಲಿ ಇಂದು ಹೆವಿ ಟ್ರಾಫಿಕ್; ಬದಲಿ ಮಾರ್ಗ ಇಲ್ಲಿವೆ

ಬೆಂಗಳೂರಿಗರೇ ಗಮನಿಸಿ: ಈ ಮಾರ್ಗಗಳಲ್ಲಿ ಇಂದು ಹೆವಿ ಟ್ರಾಫಿಕ್; ಬದಲಿ ಮಾರ್ಗ ಇಲ್ಲಿವೆ


ಬೆಂಗಳೂರು, ನವೆಂಬರ್ 19: ಪ್ಯಾಲೆಸ್ ಗ್ರೌಂಡ್ಸ್ ಕೃಷ್ಣ ವಿಹಾರ ಗೇಟ್ ಸಂಖ್ಯೆ 01 ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಗೋಲ್ಡನ್ ಜೂಬಿಲಿ ಕಾರ್ಯಕ್ರಮ ಇಂದು (ನ.19) ನಡೆಯಲಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 4 ಗಂಟೆವರೆಗೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಗಣ್ಯಾತಿ ಗಣ್ಯರು ಸೇರಿ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಲಿರುವ ಕಾರಣ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.

ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರು, ಗಣ್ಯರು, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿ ಸುಮಾರು 80,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 2,305 ವಾಹನಗಳಿಗೆ ಆಗಮಿಸಲಿದೆ, ಸುತ್ತಲಿನ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಆಗಲಿದೆ. ಕೃಷ್ಣ ವಿಹಾರ ಗೇಟ್ (ಪ್ಯಾಲೆಸ್ ಗ್ರೌಂಡ್ಸ್), ಬಳ್ಳಾರಿ ರಸ್ತೆ, ಸಿ.ವಿ. ರಾಮನ್ ರಸ್ತೆ ಮತ್ತು ಜಯಮಹಲ್ ರಸ್ತೆಗಳಲ್ಲಿ ಭಾರಿ ವಾಹನದಟ್ಟಣೆ ನಿರೀಕ್ಷೆ ಇದೆ.

ಇದನ್ನೂ ಓದಿ: ಮೆಟ್ರೋ ಮೂಲಕ ಜೀವಂತ ಹೃದಯ ಯಶಸ್ವಿ ರವಾನೆ

ಬದಲಿ ಮಾರ್ಗಗಳು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವವರು:

ಬಳ್ಳಾರಿ ರಸ್ತೆಯ ಬದಲಿಗೆ ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್ – ಕಲ್ಪನಾ ಜಂಕ್ಷನ್ – ಉದಯ ಟಿವಿ ಓಲ್ಡ್ ಜಂಕ್ಷನ್ – ಕ್ಯಾಂಟೋನ್ಮೆಂಟ್ ಸ್ಟೇಷನ್ – ಟ್ಯಾನರಿ ರಸ್ತೆ – ನಾಗವಾರ – ವಿಮಾನ ನಿಲ್ದಾಣ

ವಿಮಾನ ನಿಲ್ದಾಣದಿಂದ ನಗರದ ಕಡೆಗೆ

ಮಾರ್ಗ 1: ಹೆಬ್ಬಾಳ – ಎಡಕ್ಕೆ ತಿರುಗಿಕೆ – ನಾಗವಾರ ಜಂಕ್ಷನ್‌ನಲ್ಲಿ ಬಲದ ಕಡೆ – ಬಂಬೂ ಬಜಾರ್ – ಕ್ವೀನ್ಸ್ ರಸ್ತೆ – ನಗರ

ಮಾರ್ಗ 2: ಹೆಬ್ಬಾಳ ರಸ್ತೆ ರಿಂಗ್ – ಕುವೆಂಪು ವೃತ್ತ – ಗೊರ್ಗುಂಟೆ ಪಾಳ್ಯ ಜಂಕ್ಷನ್ – ಎಡಕ್ಕೆ – ಡಾ.ರಾಜ್ ಕುಮಾರ್ ರಸ್ತೆ – ನಗರ

ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ

ಮತ್ತಿಕೆರೆ ರಸ್ತೆ – ಬಿಐಎಲ್ ಸರ್ಕಲ್‌ನಲ್ಲಿ ಬಲಕ್ಕೆ – ರಿಂಗ್ ರೋಡ್ ಮೂಲಕ ವಿಮಾನ ನಿಲ್ದಾಣ

ಯಶವಂತಪುರದಿಂದ ನಗರ ಕಡೆ

ಡಾ.ರಾಜ್ ಕುಮಾರ್ ರಸ್ತೆ ಮೂಲಕ ಬೆಂಗಳೂರು ಪ್ರವೇಶಿಸಬಹುದು

ಬಳ್ಳಾರಿ ರಸ್ತೆಯ ಕಡೆಗೆ ಭಾರೀ ವಾಹನಗಳಿಗೆ ಅನುಮತಿ ಇಲ್ಲದ ಕಾರಣ ಆಟೋ ರಿಂಗ್ ರಸ್ತೆ ಬಳಸಬೇಕು. ಓಲ್ಡ್ ಹೈ ಗ್ರೌಂಡ್ಸ್ ಪೊಲೀಸ್ ಸ್ಟೇಷನ್ ಜಂಕ್ಷನ್ ಕಡೆಯಿಂದ ಬರುವ ವಾಹನಗಳನ್ನು ಕಲ್ಪನಾ ಜಂಕ್ಷನ್- ಉದಯ ಟಿವಿ ಓಲ್ಡ್ ಜಂಕ್ಷನ್ – ಕ್ಯಾಂಟೋನ್ಮೆಂಟ್ ಸ್ಟೇಷನ್ – ಟ್ಯಾನರಿ ರಸ್ತೆ – ನಾಗವಾರ ಕಡೆಗೆ ತೆರಳಬೇಕು. ಸಿ.ವಿ. ರಮಣ ರಸ್ತೆಯ ಕಡೆಗೆ ಹೋಗುವ ರಸ್ತೆಯಲ್ಲೂ ಭಾರೀ ವಾಹನಗಳಿಗೆ ನಿಷೇಧ ಇರಲಿದೆ. ಪ್ಯಾಲೇಸ್ ರಸ್ತೆ, ನಂದಿದುರ್ದಾ ರಸ್ತೆ, ಬಳ್ಳಾರಿ ರಸ್ತೆ, ಸಿ.ವಿ. ರಾಮನ್ ರಸ್ತೆ, ಜಯಮಹಲ್ ರಸ್ತೆ ಮತ್ತು ಗುಟ್ಟಹಳ್ಳಿ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:49 am, ಬುಧವಾರ, 19 ನವೆಂಬರ್ 25



Source link

Leave a Reply

Your email address will not be published. Required fields are marked *