ಬೆಂಗಳೂರು, ಜನವರಿ 24: ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂಬ ಟಾಮ್‌ಟಾಮ್ ವರದಿ ಬೆನ್ನಲ್ಲೇ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಹೊಸ ಪ್ಲ್ಯಾನ್‌ಗೆ ಮುಂದಾಗಿದೆ. ಪ್ರಮುಖವಾಗಿ ಕೆ.ಆರ್. ಪುರಂನಿಂದ ಇಬ್ಬಲೂರು 17 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 500 ಕಂಪನಿ ಕೆಲಸ ಮಾಡುವ 12 ಲಕ್ಷ ಉದ್ಯೋಗಿಗಳ ಓಡಾಟವನ್ನು ಸಾರ್ವಜನಿಕ ಸಾರಿಗೆಯತ್ತ ತಿರುಗಿಸುವ ಕುರಿತು ಸಭೆ ನಡೆಯಿತು. ಜೊತೆಗೆ, ಪೀಕ್ ಅವರ್‌ನಲ್ಲಿ ಸುಮಾರು 35-40 ಸಾವಿರ ಡೆಲಿವರಿ ವಾಹನಗಳಿಗಾಗಿ ಪರ್ಯಾಯ ಮಾರ್ಗಗಳನ್ನು ಗುರುತಿಸಲು ಗೂಗಲ್ ಜೊತೆ ಚರ್ಚಿಸುವ ಆಲೋಚನೆಯೂ ಇದೆ. ರಸ್ತೆ ಅಗೆತದಂತಹ ಮೂಲಭೂತ ಸಮಸ್ಯೆಗಳ ಮೇಲೂ ಗಮನ ಹರಿಸಲು ಸಂಚಾರ ವಿಭಾಗ ಮುಂದಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.