ಬೈಕ್ ಸವಾರನಿಗೆ ಹೊಡೆದ ಟ್ರಾಫಿಕ್ ಪೊಲೀಸ್
ಬೆಂಗಳೂರು, ಅಕ್ಟೋಬರ್ 16: ಟ್ರಾಫಿಕ್ ಪೊಲೀಸ್ ಸಿಬ್ಬಂದಿ (ಸಂಚಾರ ಪೊಲೀಸ್) ಬೈಕ್ ಸವಾರನಿಗೆ ನಡು ರಸ್ತೆಯಲ್ಲೇ ಕಪಾಳಮೋಕ್ಷ (ಹೊಡೆಯುತ್ತಾನೆ) ಇಂತಹ ಘಟನೆಯೊಂದು ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ನಡೆದಿದೆ. ಸದ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಘಟನೆ ಆಗುತ್ತಿದೆ. ದರ್ಪ ತೋರಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಡೆದದ್ದೇನು?
ವೈರಲ್ ಆದ ವಿಡಿಯೋ ಪ್ರಕಾರ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಸವಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನೋಡನೋಡುತ್ತಿದ್ದಂತೆ ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡುತ್ತಾರೆ. ಈ ವಿಡಿಯೋವನ್ನು ಸ್ಥಳೀಯ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ಆಗಿರುವ ವಿಡಿಯೋ
“ಜವಾಬ್ದಾರಿ ಮತ್ತು ಗೌರವವು ಪರಸ್ಪರ ಕೈಜೋಡಿಸುತ್ತದೆ. ದುರ್ವರ್ತನೆಗಾಗಿ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ” https://t.co/Dlu3pPmhsE
— DCP ಸೌತ್ ಟ್ರಾಫಿಕ್ (@DCPSouthTrBCP) ಅಕ್ಟೋಬರ್ 15, 2025
ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಿರುದ್ಧ ನೆಟ್ಟಿಗರು ಆಕ್ರೋಶ
ವೈರಲ್ ವಿಡಿಯೋ ಬೆನ್ನಲ್ಲೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾನೂನು ಒಂದೇ ಆಗಿದ್ದರೆ, ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಇದು ಸಂಪೂರ್ಣವಾಗಿ ಅಧಿಕಾರದ ದುರುಪಯೋಗವಾಗಿದೆ. ಈ ಘಟನೆಯು ಪೊಲೀಸ್ ಇಲಾಖೆಯ ಹೊಣೆಗಾರಿಕೆ, ಶಿಸ್ತು ಮತ್ತು ಸಾರ್ವಜನಿಕ ನಂಬಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ.
ಇದನ್ನೂ ಓದಿ: ಬೆಂಗಳೂರು: ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದಕ್ಕೆ ಇಡೀ ಔಟರ್ ರಿಂಗ್ ರಸ್ತೆ ಫುಲ್ ಜಾಮ್!
ಪೀಕ್ ಸಮಯದಲ್ಲಿ ರಾಂಗ್ ರೂಟ್‌ನಲ್ಲಿ ಬರುವ ಆಟೋ ಚಾಲಕರು, ಟ್ಯಾಂಕರ್‌ಗಳು ಮತ್ತು ಭಾರೀ ಗಾತ್ರದ ವಾಹನ ಸವಾರರ ವಿರುದ್ಧ ಅದೇ ಧೈರ್ಯವನ್ನು ತೋರಿಸಿದರು. ನಾವು ಕಠಿಣ ಕ್ರಮಕ್ಕಾಗಿ ಕಾಯುತ್ತಿದ್ದೇವೆ ಎಂದು ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇತರ ಕೆಲ ನೆಟ್ಟಿಗರು ಕೂಡ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಬಂದಿದ್ದಾರೆ.
ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅಮಾನತು
ಘಟನೆ ಕುರಿತಾಗಿ ನೆಟ್ಟಿಗರ ಆಕ್ರೋಶ ಬೆನ್ನಲ್ಲೇ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ದಕ್ಷಿಣ ಸಂಚಾರ ಡಿಸಿಪಿ ಟ್ವೀಟ್ ಮಾಡಿದ್ದು, ಅನುಚಿತ ವರ್ತನೆಗಾಗಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 1:09 pm, ಗುರುವಾರ, 16 ಅಕ್ಟೋಬರ್ 25