ಬೆಂಗಳೂರು, (ಡಿಸೆಂಬರ್ 16): ಆಸ್ಪತ್ರೆಗೆ ಹೋಗುವಾಗ ಅಪಘಾತ (ಅಪಘಾತ) ಸಂಭವಿಸಿದ್ದು, ಎದೆನೋವು ಎಂದು ಆಸ್ಪತ್ರೆಗೆ ತೆರಳುತ್ತಿದ್ದ ವೆಂಕಟರಮಣ್ ಎಂಬವರು ಸಾವನ್ನಪ್ಪಿದ್ದಾರೆ.ಈ ಹೃದಯವಿದ್ರಾವಕ ಬೆಂಗಳೂರಿನ ಘಟನೆ (ಬೆಂಗಳೂರು) ಇಟ್ಟುಮಡುವಿನ ಬಾಲಾಜಿನಗರದಲ್ಲಿ ನಡೆದಿದ್ದು, ವ್ಯಕ್ತಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರಿಂದಲೂ ಸಹಾಯ ಬಂದಿಲ್ಲ. ಕಾಪಾಡಿ ಎಂದು ಪತ್ನಿ ಅಂಗಲಾಚಿ ಬೇಡಿಕೊಂಡರೂ ಸಹ ಯಾರು ಸಹ ಮುಂದೆ ಬರುವ ಮನಸ್ಸು ಮಾಡಿಲ್ಲ. ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದು, ಗಂಡನ ಸಾವಿನ ಬಗ್ಗೆ ಹೆಂಡ್ತಿ ರೂಪ ಎನ್ನುವರು ಕಣ್ಣೀರಿಟ್ಟಿದ್ದಾರೆ. ಸೇರ್ಪಡೆಗೆ ಸಹಾಯ ಎಂದು ಕೈಮುಗಿದು ಬೇಡಿಕೊಂಡಿದ್ದಾಳೆ.
ಆಗಿದ್ದೇನು?
ಇಂದು (ಡಿಸೆಂಬರ್ 16) ಬೆಳಗಿನ ಜಾವ 3.30 ರ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಪತ್ನಿಯ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ. ಅವರು ಮೇಜರ್ ಆರ್ಟ್ ಅಟ್ಯಾಕ್ ಆಗಿದ್ದಾರೆ ಜಯದೇವ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ. ಅದರಂತೆ ಬೈಕಿನಲ್ಲಿ ಹೋಗುವಾಗ ವೆಂಕಟರಮಣನಿಗೆ ಮತ್ತೆ ಎದೆ ನೋವು ಹೆಚ್ಚಾಗಿದ್ದು, ನಿಯಂತ್ರಣ ತಪ್ಪಿ ಮತ್ತೊಂದು ಬೈಕ್ ಗೆ ಗುದ್ದಿದ್ದಾರೆ. ಪರಿಣಾಮ ವೆಂಕಟರಮಣ್ ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ. ಆ ವೇಳೆ ಪತ್ನಿ ರೂಪ, ಕಾಪಾಡಿ ಕಾಪಾಡಿ ಎಂದು ಅಂಗಲಾಚಿದ್ದಾರೆ. ಆದರೂ ಯಾ ಸಹಾಯಕ್ಕೆ ಬಂದಿಲ್ಲ. ಕೊನೆಗೆ ವೆಂಕಟರಮಣನ್ ಸಾವನ್ನಪ್ಪಿದ್ದಾರೆ. ಸದ್ಯ ಮೃರ ವೆಂಕಟರಮಣನ ಕಣ್ಣುಗಳನ್ನು ದಾನ ಮಾಡಲಾಗಿದೆ.
ಇದನ್ನೂ ಓದಿ: ಮಾನವೀಯತೆ ಮರೆತ ಬೆಂಗಳೂರಿನ ಜನ: ರಸ್ತೆಯಲ್ಲೇ ಒಡ್ಡಾಡಿ ಪ್ರಾಣಬಿಟ್ಟ
ಕೈಮುಗಿದು ಕೇಳಿಕೊಂಡ್ರೂ ಯಾರು ಬರಲಿಲ್ಲ
ಇನ್ನು ವೆಂಕಟರಮಣ ಮೃತ ವೆಂಕಟರಮಣ ಪತ್ನಿ ರೂಪ ಅವರು ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದಾರೆ, ಅವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಿಯ ಆಸ್ಪತ್ರೆಗೆ ಬೈಕಿನಲ್ಲೆ ಹೋದ್ವಿ. ಅವರು ಮೇಜರ್ ಇದೆ ಜಯದೇವಗೆ ಹೋಗಿ ಅಂತ ವೈದ್ಯರು ಹೇಳಿದ್ರು. ಒಂದು ಆಂಬುಲೆನ್ಸ್ ವ್ಯವಸ್ಥೆ ಕೂಡ ಆಸ್ಪತ್ರೆಯವರು ಮಾಡಿಲ್ಲ. ಜಯದೇವ ಆಸ್ಪತ್ರೆಗೆ ನಾವು ಬೈಕಿನಲ್ಲೆ ಹೊರಟ್ವಿ. ಅದ್ರೆ ಕದೇರನಹಳ್ಳಿ ಬಳಿ ಹೋಗುವಾಗ ಎದೆನೋವು ಜಾಸ್ತಿ ಇದ್ದರೆ, ಮತ್ತೊಂದು ಬೈಕ್ ಗೆ ಅಪಘಾತವಾಗಿ ರಸ್ತೆಯಲ್ಲಿ ಇಬ್ಬರೂ ಬಿದ್ವಿ.ನನಗೆ ಗಾಯವಾಗಿ ರಕ್ತ ಬರ್ತಿದ್ರೂ ಎಲ್ಲರ ಕೈ ಮುಗಿದು ಕೇಳಿಕೊಂಡೆ.ರಸ್ತೆಯಲ್ಲಿ ಹೋಗುವವರು ನಮ್ಮ ಕಡೆ ನೋಡಲೇ ಇಲ್ಲ ಎಂದು ಕಣ್ಣೀರಿಟ್ಟರು.
ಮಾನವೀಯತೆಯನ್ನೆ ಮರೆತಿದ್ದಾರೆ
ಯಜಮಾನ್ರು ಕಣ್ಣು ಬಿಟ್ಟು ತಲೆ ಎತ್ತಿ ನನ್ನನ್ನ ನೋಡುತ್ತಿದ್ರು. ಅವರಿಗೆ ಮಕ್ಕಳನ್ನ ನೋಡ್ಬೇಕು ಅನ್ನೋ ಆಸೆ ಇತ್ತು. 15 ನಿಮಿಷದ ಬಳಿಕ ಕ್ಯಾಬ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು. ಅವರು ತುಂಬಾ ಜನಕ್ಕೆ ಸಹಾಯ ಮಾಡಿದ್ರು. ಆದರೆ ಅವರ ಸಹಾಯಕ್ಕೆ ಯಾರೂ ಕೂಡ ಬಂದಿಲ್ಲ. ಕೈಮುಗಿದು ಕೇಳಿಕೊಂಡರೂ ವಾಹನ ಸವಾರರು ಸಹಾಯ ಮಾಡಿಲ್ಲ.ಜನ ಮಾನವೀಯತೆಯನ್ನೆ ಮರೆತಿದ್ದಾರೆ
ಒಬ್ಬರು ಯಾರಾದ್ರೂ ಸಹಾಯ ಮಾಡಿದ್ರೆ ಅವರ ಬದುಕುಳಿಯುವಂತೆ. ಇಬ್ಬರೂ ಸಣ್ಣ ಮಕ್ಕಳಿದ್ದಾರೆ,ಅವ್ರನ್ನ ಈಗ ನಾನೇ ನೋಡಿಕೊಳ್ಳಬೇಕು. ಸದ್ಯ ಪತಿಯ ಎರಡೂ ಕಣ್ಣನ್ನ ದಾನ ಮಾಡಿದ್ದೇವೆ. ಅದರಿಂದ ಯಾರಿಗಾದರೂ ದೃಷ್ಟಿ ಬಂದ್ರೆ ಅವರಿಗಾದರೂ ಉಪಯೋಗ ಆಗಲಿ. ಜನ ಸ್ವಲ್ಪನಾದ್ರೂ ಮಾನವೀಯತೆ ಹೊಂದಿರಬೇಕು.
ರಂದು ಪ್ರಕಟಿಸಲಾಗಿದೆ – 6:20 pm, ಮಂಗಳವಾರ, 16 ಡಿಸೆಂಬರ್ 25