ಬೆಂಗಳೂರು, ಫೆಬ್ರವರಿ 13: ನಾಳೆ ಫೆಬ್ರವರಿ 14. ಈ ದಿನ ಸಮಸ್ತ ಪ್ರೇಮಿಗಳ ಪಾಲಿಗೆ (ಪ್ರೇಮಿಗಳ ದಿನ) ಎಂದಿಗೂ ಮರೆಯಲಾಗದಂತಹ ಒಂದು ಅವಿಸ್ಮರಣೀಯ ದಿನ. ಪ್ರೇಮಿಗಳ ದಿನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಪ್ರಪಂಚದೆಲ್ಲೆಡೆ ಕಾವು ಪಡೆದುಕೊಳ್ಳುತ್ತಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ (ಬೆಂಗಳೂರು) ಸಹ ವ್ಯಾಲೆಂಟೆನ್ಸ್ ಡೇಗೆ ಪ್ರೇಮಿಗಳು ಸಜ್ಜಾಗಿದ್ದಾರೆ. ಪ್ರೇಮಿಗಳು ಜೊತೆಗೆ ವ್ಯಾಪಾರಿಗಳು ಉತ್ತಮ ತಯಾರಿಗಾಗಿ.
ಗಿಫ್ಟ್‌ಗಳ ಮೊರೆಹೋಗುತ್ತಿರುವ ಪ್ರೇಮಿಗಳು
ಫೆಬ್ರವರಿ 14 ನಾಳಿನ ವ್ಯಾಲೆಂಟೈನ್ಸ್ ಡೇಯನ್ನ ಅವಿಸ್ಮರಣೀಯ ಆಚರಿಸಲು ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ನೆಚ್ಚಿನ ಸಂಗಾತಿಯನ್ನ ಮೆಚ್ಚಿಸಲು ತರಹೇವಾರಿ ಗಿಫ್ಟ್‌ಗಳು ಮೊರೆಹೋಗುತ್ತಿವೆ. ಎಂದಿನಂತೆ ರೋಸ್ ಡಿಮ್ಯಾಂಡ್ ಹೆಚ್ಚಾಗಿದ್ದು, ಹೂಗಳ ವ್ಯಾಪಾರಿಗಳು ಬೇಡಿಕೆಗೆ ತಕ್ಕಂತೆ ಫ್ಲವರ್ ಡೆಕೋರೇಷನ್‌ಗಳಲ್ಲಿ ತೊಡಗಿದ್ದಾರೆ. ಟೆಡ್ಡಿಬೇರ್, ಚಾಕೊಲೇಟ್, ರೆಡ್ ಥೀಮ್ ಉಡುಗೆಗಳು ಕೂಡ ಮಾರಾಟ ಚುರುಕುಗೊಂಡಿವೆ.
ಪ್ರೇಮಿಗಳ ದಿನ ಹಿನ್ನೆಲೆ ಯುವ ಜನಾಂಗ ಮಿಶ್ರ ಪ್ರತಿಕ್ರಿಯೆ: ಕರಾಳ ದಿನವನ್ನ ಸ್ಮರಿಸುತ್ತೇವೆ ಎಂದ ಕಾಲೇಜ್ ವಿದ್ಯಾರ್ಥಿಗಳು
ಇನ್ನು ವ್ಯಾಲೆಂಟೈನ್ಸ್ ಡೇಗಾಗಿ ನಾನಾ ರೀತಿಯ ತಯಾರಿಯಲ್ಲಿ ಒಂದಷ್ಟು ಮಂದಿ ತೊಡಗಿದ್ದಾರೆ, ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಪುಲ್ವಾಮಾ ಅಟ್ಯಾಕ್‌ನಲ್ಲಿ ಹುತಾತ್ಮರಾದ ವೀರಯೋಧರನ್ನ ಸ್ಮರಿಸುವ ಮೂಲಕ ಕರಾಳ ದಿನವನ್ನು ಆಚರಿಸುತ್ತೇವೆ ಅಂತಿದ್ದಾರೆ. ಇನ್ನು ಕೆಲ ಮಂದಿ ಅರ್ಥಪೂರ್ಣವಾಗಿ ಆಚರಿಸುವುದು ಸಮಂಜಸ ಎನ್ನುತ್ತಿದ್ದಾರೆ.
ಇದನ್ನೂ ಓದಿ: ನಂದಿ ಬೆಟ್ಟಗಳು: ವ್ಯಾಲೆಂಟೈನ್ಸ್ ಡೇಗೆ ಲವರ್ಸ್‌ಗೆ ಶಾಕ್; ನಾಳೆ ನಂದಿ ಬೆಟ್ಟಕ್ಕೆ ಹೋಗೋ ಪ್ಲಾನ್ ಇದ್ದರೆ ಈ ವಿಚಾರ ಗಮನಿಸಿ
ಒಟ್ಟಾರೆ ಫೆಬ್ರುವರಿ ಎಂಬ ತಿಂಗಳೇ ಲವರ್ಸ್‌ಗಳಿಗೆ ಹೆಚ್ಚು ಫೇವರೆಟ್ ಎನ್ನಬಹುದು. ಸೇರಿದಂತೆ 14ರಂದು ಇನ್ನು ಪ್ರಿಯ. ವಿಶ್ವದೆಲ್ಲೆಡೆ ಈ ದಿನದಂದು ಆಚರಣೆ ಜೋರಾಗಿದೆ. ಆದರೆ ಭಾರತದಲ್ಲಿ ಮಾತ್ರ ಈ ದಿನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.