ಸೈಕ್ಲೋನ್ ಎಫೆಕ್ಟ್ ಅಕಾಲಿಕ ಮಳೆ, ಅನೇಕ ವೆಜಿಟೇಬಲ್ ರೇಟ್ ಹೈಕ್!
ಬೆಂಗಳೂರು, ಅಕ್ಟೋಬರ್ 31: ನೆರೆ ರಾಜ್ಯಗಳಿಗೆ ಮೋಂತಾ ಚಂಡಮಾರುತ (ಮಾಂತಾ ಚಂಡಮಾರುತ) ಅಪ್ಪಳಿಸುವ ಬೆನ್ನಲ್ಲೇ ಕರ್ನಾಟಕದ ಹಲವು ಜಿಲ್ಲೆಗಳು ವರುಣಾರ್ಭಟಕ್ಕೆ ತತ್ತರಿಸಿದ್ದವು. ಈ ಹಿನ್ನೆಲೆ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಹೆಚ್ಚಾಗಿರುವ ತರಕಾರಿ ಬೆಲೆ (ತರಕಾರಿ ದರ) ಕೇಳಿದ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ, ವ್ಯಾಪಾರಿಗಳು ಖರೀದಿದಾರರಿಲ್ಲದೆ ನಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ತರಕಾರಿ ಕೊಳ್ಳಲು ಹಿಂಜರಿಯುತ್ತಿರುವ ಗೃಹಿಣಿಯರು
ಸೈಕ್ಲೋನ್ ಎಫೆಕ್ಟ್ನಿಂದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲ ಭಾಗದಲ್ಲೂ ಭಾರೀ ಮಳೆಯಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಅಕಾಲಿಕ ಮಳೆಯಾಗಿದೆ. ಇದರಿಂದ ತರಕಾರಿ ಬೆಳೆ ಹಾಳಾಗಿದ್ದು, ಸರಿಯಾಗಿ ಬೆಳೆ ಬಂದಿಲ್ಲ. ಬೆಳೆದ ಬೆಳೆ ಕೈಗೆ ಬರದ ಕಾರಣ ತರಕಾರಿಗಳ ಬೆಲೆ ಗಗನಕ್ಕೇರಿದೆ.ಯಾವ ತರಕಾರಿ ಬೆಲೆ ಕೇಳಿದರೂ ಗ್ರಾಹಕರು ಕಂಗಾಲಾಗಿದ್ದಾರೆ. ಇದರಿಂದ ಯಾರು ತರಕಾರಿ ಕೊಳ್ಳಲು ಬರುತ್ತಿಲ್ಲ, ವ್ಯಾಪಾರ ಸರಿಯಾಗಿ ನಡೆಯದೇ ಇದ್ದರೆ ಜೀವನ ಸಾಗಿಸುವುದು ಕಷ್ಟ ಎಂದು ತರಕಾರಿ ವ್ಯಾಪಾರಿಗಳು ತನ್ನ ನೋವು ತೋಡಿಕೊಂಡಿದ್ದಾರೆ.
ತರಕಾರಿ ಬೆಲೆ ಕೇಳಿ ಗೃಹಿಣಿಯರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಒಂದು ಕೆಜಿ ತರಕಾರಿ ಕೊಳ್ಳುವ ಮಹಿಳೆಯರು ಅರ್ಧ, ಕಾಲು ಕೆಜಿ ಕೊಳ್ಳಲು ಮುಂದಾಗುತ್ತಿದ್ದಾರೆ. ಈ ಬೆಲೆಯೇರಿಕೆಯ ಸಮಯದಲ್ಲಿ ತರಕಾರಿ ಕೊಂಡು ಅಡುಗೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.
ಬೆಂಳೂರಿನಲ್ಲಿ ಇವತ್ತಿನ ತರಕಾರಿ ಬೆಲೆ (ರೂಪಾಯಿಗಳಲ್ಲಿ)
- ನುಗ್ಗೆಕಾಯಿ-ಕೆಜಿ- 140 ರಿಂದ 150
- ಬಟಾಣಿ ಫಾರಂ- 260 ರಿಂದ 270
- ಬೀನ್ಸ್- 90 ರಿಂದ 100
- ಈರುಳ್ಳಿ- 40 ರಿಂದ 50
- ಜವಳಿಜಕಾಯಿ- 100 ರಿಂದ 120
- ಶುಂಠಿ- 100 ರಿಂದ 110
- ಕ್ಯಾರೆಟ್- 90 ರಿಂದ 100
- ತೊಗರಿಕಾಯಿ-80 ರಿಂದ 100
- ಹಸಿ ಮೆಣಸಿನಕಾಯಿ- 80 ರಿಂದ 100
- ಟೊಮೊಟೊ- 30 ರಿಂದ 40
- ಆಲೂಗಡ್ಡೆ- 50 ರಿಂದ 60
- ಹೀರೇಕಾಯಿ- 50 ರೂಪಾಯಿ 60
- ಬದನೆಕಾಯಿ- 60 ರಿಂದ 70
- ಬೆಂಡೆಕಾಯಿ- 70 ರಿಂದ 80
- ಬಿಟ್ರೂಟ್- 70 ರಿಂದ 80
- ಹುಕೋಸು- 80 ರಿಂದ 90
- ಕ್ಯಾಪ್ಸಿಕಂ- 80 ರಿಂದ 90
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.