
ಬೆಂಗಳೂರು, ಮಾರ್ಚ್ 26: ಬೆಲೆ ಏರಿಕೆ ಎಂಬ ಪದ ಕೇಳಿದರೆ ಸಾಕು ಜನ ಸಾಮಾನ್ಯರು ಹೆದರಬೇಕಾದ ಸ್ಥಿತಿ ಸದ್ಯ ಕರ್ನಾಟಕದಲ್ಲಿದೆ. ನಾನಾ ಕಾರಣಗಳಿಂದ ಪ್ರತಿ ವಸ್ತುವಿನ ದರವೂ ಗಗನಕ್ಕೇರಿದೆ. ಈ ನಡುವೆ ಜನರಿಗೆ ಸೌಕರ್ಯಗಳನ್ನು ನೀಡಬೇಕಿದ್ದ ಇಲಾಖೆಗಳೇ ಜನರಿಂದ ಸುಲಿಗೆ ಮಾಡುತ್ತಿರುವ ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದ್ದು, ನಾಗರಿಕರ ಗಮನಕ್ಕೆ ಬಾರದಂತೆ ಜೇಬಿಗೆ ಕತ್ತರಿ ಹಾಕುತ್ತಿರುವ ವಿಚಾರ ಶಾಕ್ ನೀಡಿದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಜಲ ಮಂಡಳಿಯು ಸತತವಾಗಿ ನೀರಿನ ದರ ಏರಿಕೆ ಮಾಡುತ್ತಾ ಬಂದಿದ್ದರೂ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ.
BWSSB ಕಳೆದ ಎರಡು ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ದರ ಏರಿಕೆ, ನಾಲ್ಕು ಬಾರಿ ದರ ಏರಿಕೆ ಬರೆ ಹಾಕಿ ಜನರಿಂದ ವಸೂಲಿ ಮಾಡುತ್ತಿದೆ. ಪ್ರತಿ ಮೂರು ತಿಂಗಳಿಗೆ ಶೇಕಡಾ 3ರಷ್ಟು ಬೆಲೆಯಂತೆ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚುವರಿ ಹೊರೆ ಜನರ ಮೇಲೆ ಹಾಕಲಾಗುತ್ತಿಲ್ಲ. ಹೀಗಿದ್ದರೂ ಈ ಬಗ್ಗೆ ಯಾವುದೇ ಪ್ರಕಟಣೆ ನೀಡದೆ, ಸಾರ್ವಜನಿಕರ ಗಮನಕ್ಕೂ ತರದೆ ನಾಗರಿಕ ಸುಲಿಗೆ ಮಾಡುವ ಕೆಲಸ BWSSB ಕಡೆಯಿಂದ ಆಗ್ತಿದೆ ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಚಿನ್ನದ ಚಿನ್ನದ ದರ ಹಾವು-ಏಣಿ ಆಟದ ಮಧ್ಯೆ ಬೆಂಗಳೂರಿನಲ್ಲಿ ಈಗ ಅಕ್ಷಯ ತೃತೀಯಕ್ಕೆ ಗೋಲ್ಡ್ ಬುಕ್ಕಿಂಗ್ ಜೋರು! ಜ್ಯುವೆಲ್ಲರಿಗಳಲ್ಲಿ ಕ್ಯೂ
ಇನ್ನು ಉಪಕರವನ್ನು ಆಯಾ ತಿಂಗಳ ಕುಡಿಯುವ ನೀರಿನ ಶುಲ್ಕದಲ್ಲಿ ಶೇ. 31.25ರಷ್ಟು ಏರಿಕೆಯಾಗಿದೆ. ಜಲಮಂಡಳಿ ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಲು ಕುಡಿಯುವ ನೀರಿನ ಶುಲ್ಕದ ಏರಿಕೆ ಮತ್ತು ಇದಕ್ಕೆ ಉಪಕರದ ತುರ್ತು ಎಂಬ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದೆ. ಈಗ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ BWSSB ಆಡಳಿತ ಮಂಡಳಿಯು ಪ್ರತಿ ಮೂರು ತಿಂಗಳಿಗೊಮ್ಮೆ ಉಪಕರದ ಉನ್ನತಿ ಮಾಡುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿರುವ ನಡುವೆ ಅವರ ಜೊತೆ ನಿಲ್ಲಬೇಕಿದ್ದ ಸರ್ಕಾರ ಎಲ್ಲವನ್ನೂ ನೋಡಿ ಕಣ್ಮುಚ್ಚಿ ಕುಳಿತಿದೆ. ಜನರಿಗೆ ಮೂಲಸೌಕರ್ಯಗಳನ್ನು ನೀಡಬೇಕಿದ್ದ ಇಲಾಖೆಗಳು, ಅರಿವಿಲ್ಲದಂತೆ ಅವರ ಜೇಬಿಗೆ ಕತ್ತರಿ ಹಾಕುವ ಕೆಲಸಕ್ಕೆ ಮುಂದಾಗಿವೆ. ತಮ್ಮ ಗಮನಕ್ಕೆ ಬಾರದೇ ಜನರು ಅದಾಗಲೇ ಬೆಲೆ ಏರಿಕೆ ಹೊರೆ ಭರಿಸುತ್ತಿದ್ದರು, ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಗಳು ಕೇಳಿಬಂದಿವೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.