ಬೆಂಗಳೂರು, ಫೆ.5: ಬೆಂಗಳೂರಿನಲ್ಲಿ ಸೇರಿದಂತೆ ಇಂದಿನ ವಾತಾವರಣ (Karnataka Weathe) ಹೇಗಿದೆ? ಯಾವೆಲ್ಲ ಜನ ಎಚ್ಚರಿಕೆಯಿಂದ ಇರಬೇಕು ಎಂಬುದು ಇಲ್ಲಿದೆ ನೋಡಿ. ಇಂದು ಮುಂಜಾನೆ ದಟ್ಟವಾದ ಮಂಜು ಮುಸುಕಿದ ವಾತಾವರಣವಿತ್ತು. ದಿನವಿಡೀ ಆಕಾಶವು ಮೋಡದಿಂದ ಕೂಡಿರುತ್ತದೆ. ಗರಿಷ್ಠ ತಾಪಮಾನ 30°C ಮತ್ತು ಕನಿಷ್ಠ ತಾಪಮಾನ 17°C ಆಸುಪಾಸಿನಲ್ಲಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೈಸೂರು ಮತ್ತು ಹಾಸನ ಭಾಗದಲ್ಲಿ ಹವಾಮಾನವು ತುಂಬಾ ಪ್ರಶಾಂತವಾಗಿದ್ದು, ಸಂಜೆಯ ವೇಳೆಗೆ ತಂಪಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ನಡೆಯಲಿದೆ. ಗರಿಷ್ಠ ತಾಪಮಾನವು 33°C ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ, ಮಧ್ಯಾಹ್ನದ ಸಮಯದಲ್ಲಿ ಸೆಕೆ ಹೆಚ್ಚಾಗಲಿದೆ. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಇಳಿಕೆ, ಮುಂಜಾನೆ ಚಳಿಯ ಅನುಭವ. ಗರಿಷ್ಠ ತಾಪಮಾನವು 31°C – 33°C ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ: ಫೆ.4 ರಿಂದ 9 ರವರೆಗೆ ಈ ಪ್ರದೇಶಗಳಲ್ಲಿ ಪ್ರತಿದಿನ 4 ಗಂಟೆಗಳ ಕಾಲ ವಿದ್ಯುತ್ ಕಡಿತ
ರಾಜ್ಯದ ಕೆಲವು ಪ್ರಮುಖ ನಗರಗಳ ಹವಾಮಾನ ಮಾಹಿತಿ ಇಲ್ಲಿದೆ:
ಉತ್ತರ ಕರ್ನಾಟಕ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ಮುಂಜಾನೆ ದೃಷ್ಟಿಗೋಚರವಾಗಿ ಕಡಿಮೆ ಇರುತ್ತದೆ, ವಾಹನ ಸವಾರರು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ರಾಜ್ಯದ ಯಾವುದೇ ಭಾಗದಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಮುಂದುವರೆಯಲಿದೆ ಎಂದು ಹೇಳಲಾಗಿದೆ. ಫೆಬ್ರವರಿ ಮೊದಲ ವಾರ ಮುಗಿಯುವವರೆಗೆ ಹಗಲಿನ ತಾಪಮಾನವು ಕ್ರಮೇಣವಾಗಿ ಏರಿಕೆಯಾಗುತ್ತಿದೆ, ಆರಂಭ ಆಗುವ ಮುನ್ಸೂಚನೆ ಸಿಗುತ್ತಿದೆ ಎಂದು ಹೇಳಲಾಗಿದೆ. ಇಂದಿನಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತ. 4 ಗಂಟೆಗಳ ಕಾಲ ವಿದ್ಯುತ್ ವ್ಯಯ ಎಂದು ಬೆಸ್ಕಾಂ ಹೇಳಿದೆ. ಆ ಕಾರಣದಿಂದ ಬೆಂಗಳೂರಿನಲ್ಲಿ ಇಂದು ಸೆಕೆಯಿಂದ ಕೂಡಿದ್ದರೆ ಮುನ್ನೆಚ್ಚರಿಕೆ ವಹಿಸುವಂತೆ ಹೇಳಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ