ಬೆಂಗಳೂರು, ಡಿ.1: ಬೆಂಗಳೂರಿನಲ್ಲಿ ವಾತಾರವಣ ತುಂಬಾ ಬದಲಾವಣೆ ಆಗಿದೆ. ಚಳಿ ಶುರುವಾಗಿದೆ (ಬೆಂಗಳೂರಿನಲ್ಲಿ ಚಳಿಯ ವಾತಾವರಣ) ಇನ್ನು ಈ ವೀಕೆಂಡ್ ನಲ್ಲಿ ಜನರ ಚಳಿಗೆ ಹೊರಗೆ ಬರಲೇ ಇಲ್ಲ. ಇದೀಗ ಈ ವಾತಾವರಣದ ಬಗ್ಗೆ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶನಿವಾರದಂದು (ನ.29) ಬೆಂಗಳೂರಿನಲ್ಲಿ ದಾಖಲೆಯ ಚಳಿಯ ವಾತಾವರಣ ಇತ್ತು. ತಾಪಮಾನ 21.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಚಳಿಯಿಂದ ಜನರ ಹೊರಗೆ ಬರಲು ಮನಸ್ಸೇ ಮಾಡಿಲ್ಲ. ಈ ಹವಾಮಾನದ ನಡುವೆ ಮಹಿಳೆಯೊಬ್ಬರು ಸೆರೆ ಹಿಡಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶನಿವಾರದಂದು ಬೆಳಗಿನ ಹೊತ್ತು ಮೋಡದಿಂದ ಇಡೀ ವಾತಾವರಣ ಕತ್ತಲಾಗಿತ್ತು. ಇದು ಬೆಂಗಳೂರಿನ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ.
ಇನ್ನು ಈ ದಶ್ಯವನ್ನು ನೋಡಿ, “ಬೆಂಗಳೂರು ಫ್ರಿಡ್ಜ್ ಒಳಗೆ” ಎಂಬ ಶೀರ್ಷಿಕೆಯನ್ನು ನೀಡಿದೆ. ಬೆಂಗಳೂರಿನ ತೇವ, ಶೀತ ವಾತಾವರಣ ಹೇಗಿದೆ ಎಂದು ಈ ಪೋಸ್ಟ್‌ನಲ್ಲಿ ನೋಡಬಹುದು. ರಾಜಶ್ರೀ ಭುಯಾನ್ ಎಂಬ ಮಹಿಳೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇಡೀ ನಗರ ಮೂರು ನಾಲ್ಕು ದಿನಗಳಿಂದ ಚಳಿಯಿಂದ ನಡುಗುತ್ತಿದೆ. ಇದರ ಮಧ್ಯೆ ಇಂದು (ಶನಿವಾರ) ಬೆಂಗಳೂರಿನ ವಾತಾರವರಣ ಕಂಡು ಬಂದದ್ದು ಹೀಗೆ” ಎಂದು ಹೇಳಿದರು. ನವೆಂಬರ್‌ನಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನವು 23 ರಿಂದ 24 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಶನಿವಾರ ಮಾತ್ರ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಇದು ಇದೆ ಮೊದಲು ನೋಡುವುದು ಎಂದು ಹೇಳಿದರು.
ಇದನ್ನೂ ಓದಿ: ಥರಗುಟ್ಟುವ ಚಳಿ ಜನರಿಗೆ ತರಕಾರಿ ಬೆಲೆ ಏರಿಕೆ ಬಿಸಿ: ಯಾವುದರ ದರ ಎಷ್ಟಿದೆ?
ಪೋಸ್ಟ್ ಇಲ್ಲಿದೆ ನೋಡಿ:
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ , ಬೆಂಗಳೂರಿನ ಐಎಂಡಿಯ (ಭಾರತೀಯ ಹವಾಮಾನ ಇಲಾಖೆ) ಸಿಎಸ್ ಪಾಟೀಲ್ ಈ ತೀವ್ರ ಕುಸಿತದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. “ತಾಪಮಾನದಲ್ಲಿನ ಇಳಿಕೆ ಮೋಡ ಕವಿದ ವಾತಾವರಣ ಮತ್ತು ಗಾಳಿಯಲ್ಲಿ ಹೆಚ್ಚಿದ ತೇವಾಂಶವು ಹೆಚ್ಚಿದೆ. ಈ ಸಮಯದಲ್ಲಿ ಪಾದರಸದ ಮಟ್ಟವು 1 ಅಥವಾ 2 ಡಿಗ್ರಿ ಕಡಿಮೆಯಾಗುವುದು ಸಾಮಾನ್ಯವಾಗಿದೆ, ಆದರೆ ಈ ಸಮಯದಲ್ಲಿ 3 ರಿಂದ 4 ಡಿಗ್ರಿಗಳಷ್ಟು ಕುಸಿದಿದೆ ಅದರ ಪರಿಣಾಮವು ಹೆಚ್ಚಾಗಿ ಕಂಡುಬರುತ್ತದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ