ಕಟ್ಟಡದ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪತ್ನಿ: ಜೀವ ತೆಗೆದ ಎರಡನೇ ಮದ್ವೆ

ಕಟ್ಟಡದ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪತ್ನಿ: ಜೀವ ತೆಗೆದ ಎರಡನೇ ಮದ್ವೆ


ಬೆಂಗಳೂರು, ನವೆಂಬರ್ 17: ಸೋದರ ಮಾವನ ಜತೆ ಸೇರಿ ಕಟ್ಟಡದ ಮೇಲಿಂದ ತಳ್ಳಿ ಪತಿಯನ್ನೇ ಪತ್ನಿ (ಹೆಂಡತಿ) ಕೊಂದಿರುವಂತಹ (ಕೊಲೆ) ಅಂದ್ರಹಳ್ಳಿಯ ಮಂಜುನಾಥ ಬಡಾವಣೆಯಲ್ಲಿ ಘಟನೆ ನಡೆದಿದೆ. ಪತಿ ವೆಂಕಟೇಶ್ (65) ನನ್ನನ್ನು ಕೊಂದ ಪತ್ನಿ ಪಾರ್ವತಿ. ಸದ್ಯ ಪಾರ್ವತಿ ಮತ್ತು ಆಕೆಯ ಸೋದರ ಮಾವ ರಂಗಸ್ವಾಮಿಯನ್ನು ಬಂಧಿಸಿರುವ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನಡೆದದ್ದೇನು?

ವೆಂಕಟೇಶ್ 10 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಬಿಟ್ಟಿದ್ದ. 6 ವರ್ಷಗಳ ಹಿಂದೆಯೇ ಪಾರ್ವತಿಯನ್ನ ಮದುವೆಯಾಗಿದ್ದ. ಮನೆಯನ್ನು ತನ್ನ ಹೆಸರಿಗೆ ಮಾಡುವಂತೆ, ಇಲ್ಲ ಅಂದರೆ 6 ಲಕ್ಷ ರೂ. ಕೊಡುವಂತೆ ಪತಿ ಜತೆ ಪಾರ್ವತಿ ಗಲಾಟೆ ಮಾಡಿದ್ದಳು. ಇದಕ್ಕೆ ಒಪ್ಪದ ವೆಂಕಟೇಶ್ 2.5 ಲಕ್ಷ ರೂ. ಹಣ ನೀಡೋದಾಗಿ ಹೇಳಿದ್ದ.

ಇದನ್ನೂ ಓದಿ: ಲಿವಿನ್ ರಿಲೇಷನ್ ಶಿಪ್ ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಹತ್ಯೆ: ಕಾರಣವೇನು?

ನಿನ್ನೆ ಇದೇ ವಿಚಾರವಾಗಿ ದಂಪತಿ ನಡುವೆ ಮತ್ತೆ ಜಗಳವಾಗಿದೆ. ರಾತ್ರಿ 9 ಗಂಟೆಗೆ ಪತ್ನಿಯನ್ನ ಮನೆಯಿಂದ ವೆಂಕಟೇಶ್ ಹೊರ ಹಾಕಿದ್ದ. ಸೋದರ ಮಾವ ರಂಗಸ್ವಾಮಿಗೆ ಕರೆ ಮಾಡಿ ಕರೆಸಿಕೊಂಡ ಪಾರ್ವತಿ, ಇಬ್ಬರು ಸೇರಿ ಕಟ್ಟಡದ ಮೇಲೆ ವೆಂಕಟೇಶ್ ಅವರನ್ನು ತಳ್ಳಿದ್ದಾರೆ. ತಲೆಗೆ ಪೆಟ್ಟಾಗಿದ್ದರೂ ಮತ್ತೆ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಕುಸಿದುಬಿದ್ದು ಸ್ಥಳದಲ್ಲೇ ವೆಂಕಟೇಶ್ ಅವರು ಇದ್ದಾರೆ.

ಅಪ್ಪನ ಮೇಲೆ ಹಲ್ಲೆ ಮಾಡಿದ ಮಗನಿಂದ ವ್ಯಕ್ತಿಯ ಕೊಲೆ

ಅಪ್ಪನ ಮೇಲೆ ಹಲ್ಲೆ ಮಾಡಿದ ಮಗನಿಂದ ವ್ಯಕ್ತಿಯ ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆ ಠಾಣಾ ನಡೆದಿದೆ. ತೀವ್ರ ಹಲ್ಲೆ ಮಾಡಿ ನಾರಾಯಣಸ್ವಾಮಿ(55) ಎಂಬುವವರನ್ನು ಅಜಯ್ ಕೊಲೆಗೈದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಾಲ ಪೊಲೀಸರು ಅಜಯ್ಯನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲೊಂದು ಭಯಾನಕ ಘಟನೆ: ಪತ್ನಿಗೆ ವಿಡಿಯೋ ಕರೆ ಮಾಡಿ ನೇಣು ಬಿಗಿದುಕೊಂಡು ಸತ್ತ ಪತಿ

ನ.11ರಂದು ಅಜಯ್ ತಂದೆ ಮುನಿವೆಂಕಟಪ್ಪ ಮತ್ತು ನಾರಾಯಣಸ್ವಾಮಿ ಕುಡಿದು ಗಲಾಟೆ ಮಾಡಿಕೊಂಡಿದ್ದರು. ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೋಪಗೊಂಡಿದ್ದ ಅಜಯ್, ಈ ಹಿನ್ನೆಲೆ ನಾರಾಯಣಸ್ವಾಮಿಗೆ ತೀವ್ರ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿದ್ದ ನಾರಾಯಣಸ್ವಾಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕಾಣಿಸಿಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 5:28 pm, ಸೋಮ, 17 ನವೆಂಬರ್ 25



Source link

Leave a Reply

Your email address will not be published. Required fields are marked *