ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು! | Bengaluru Wife Kills Husband For Lover Remarries Within 20 Days Arrested Sat Videoshow

ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು! | Bengaluru Wife Kills Husband For Lover Remarries Within 20 Days Arrested Sat Videoshow


ಪ್ರೀತಿ, ನಂಬಿಕೆ ಮತ್ತು ಸಂಸಾರ ಎಂಬ ಪವಿತ್ರ ಬಂಧಕ್ಕೆ ಕಳಂಕ ತರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ಸುಂದರ ಸಂಸಾರಕ್ಕೆ ತಾನೇ ಬೆಂಕಿ ಹಚ್ಚಿದ ಕಿರಾತಕಿ ಹೆಂಡತಿಯೊಬ್ಬಳು, ಅಕ್ರಮ ಸಂಬಂಧಕ್ಕಾಗಿ ಗಂಡನನ್ನೇ ಮುಗಿಸಿ, ಆತ ಸತ್ತ 20 ದಿನ ಕಳೆಯುವ ಮೊದಲೇ ಮತ್ತೊಬ್ಬನ ಜೊತೆ ಹಸೆಮಣೆ ಏರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಇದು ಯಾವುದೇ ಸಿನೆಮಾ ಕಥೆಯಲ್ಲ, ಬೆಂಗಳೂರಿನಲ್ಲಿ ನಡೆದ ನೈಜ ಕ್ರೈಮ್ ಸ್ಟೋರಿ!

ಪುಟ್ಟ ಸಂಸಾರದಲ್ಲಿ ಅಕ್ರಮ ಸಂಬಂಧದ ವಿಷಗಾಳಿ:

ಮೃತ ಪರಮೇಶ ಒಬ್ಬ ಬಡ ಮೆಕಾನಿಕ್. ತನ್ನ ಹೆಂಡತಿ ಆಶಾ ಮತ್ತು ಇಬ್ಬರು ಮಕ್ಕಳೊಂದಿಗೆ ಸುಖವಾಗಿಯೇ ಜೀವನ ನಡೆಸುತ್ತಿದ್ದ. ಆರ್ಥಿಕವಾಗಿ ಸ್ವಲ್ಪ ಹಿಂದುಳಿದಿದ್ದರೂ ಪರಮೇಶ ತನ್ನ ಕುಟುಂಬವನ್ನು ಪ್ರೀತಿಯಿಂದಲೇ ಸಲಹುತ್ತಿದ್ದ. ಹೆಂಡತಿ ಆಶಾ ಮದುವೆ ಮನೆಗಳಲ್ಲಿ ತಾಂಬೂಲ ನೀಡುವ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಇದೇ ಕೆಲಸದ ಸ್ಥಳದಲ್ಲಿ ಆಕೆಗೆ ಒಬ್ಬ ಅಡುಗೆ ಭಟ್ಟನ ಪರಿಚಯವಾಗಿತ್ತು. ಈ ಪರಿಚಯ ದಿನ ಕಳೆದಂತೆ ಅಕ್ರಮ ಸಂಬಂಧಕ್ಕೆ ತಿರುಗಿತು. ಗಂಡನ ಕಣ್ತಪ್ಪಿಸಿ ಪ್ರಿಯಕರನೊಂದಿಗೆ ಲವ್ವಿ-ಡವ್ವಿ ನಡೆಸುತ್ತಿದ್ದ ಆಶಾಗೆ, ತನ್ನ ಸುಖಕ್ಕೆ ಗಂಡ ಪರಮೇಶ ಅಡ್ಡಿಯಾಗಿದ್ದಾನೆ ಎನಿಸತೊಡಗಿತು.

ಹಾರ್ಟ್ ಅಟ್ಯಾಕ್ ನಾಟಕ ಮತ್ತು ಸಮಾಧಿ:

ತನ್ನ ಪ್ರಿಯಕರನ ಜೊತೆ ಸೇರಿ ಪರಮೇಶನನ್ನು ಹತ್ಯೆ ಮಾಡಲು ಆಶಾ ಸಂಚು ರೂಪಿಸಿದಳು. ಒಂದು ರಾತ್ರಿ ಪರಮೇಶ ಗಾಢ ನಿದ್ರೆಯಲ್ಲಿದ್ದಾಗ, ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಆಶಾ, ಇಬ್ಬರೂ ಸೇರಿ ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದರು. ಮರುದಿನ ಬೆಳಗ್ಗೆ ಏನೂ ಅರಿಯದವಳಂತೆ ‘ನನ್ನ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ’ ಎಂದು ಚೀರಾಡಿ ನಾಟಕವಾಡಿದಳು. ಸಂಬಂಧಿಕರು ಮತ್ತು ಗೆಳೆಯರು ಇದನ್ನು ನಂಬಿ, ಪರಮೇಶನ ಅಂತ್ಯಕ್ರಿಯೆ ನಡೆಸಿ ಮಣ್ಣು ಮಾಡಿದರು.

ಸಂದೇಹ ಹುಟ್ಟಿಸಿದ 19ನೇ ದಿನದ ಮದುವೆ:

ಯಾವುದೇ ಹೆಣ್ಣುಮಗಳು ಗಂಡ ಸತ್ತಾಗ ಕನಿಷ್ಠ ತಿಂಗಳ ಕಾಲ ಶೋಕದಲ್ಲಿರುತ್ತಾಳೆ. ಆದರೆ ಆಶಾ ಮಾತ್ರ ತನ್ನ ಗಂಡ ಸತ್ತು 20ನೇ ದಿನಕ್ಕೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಾಳೆ. ಇದರಿಂದ ಅನುಮಾನಗೊಂಡ ಮೃತ ಗಂಡನ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಆಗ ಹೂಳಲಾಗಿದ್ದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಜೊತೆಗೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಂಡತಿ, ಆಕೆಯ ಹೊಸ ಗಂಡ ಹಾಗೂ ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೃದಯಾಘಾತದ ಸಾವಲ್ಲ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಅಂಶ ತಿಳಿದುಬಂದಿದೆ. ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ಬೆಂಡೆತ್ತಿದಾಗ ಹೆಂಡತಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಗಂಡ ಪರಮೇಶನನ್ನು ಪರಲೋಕಕ್ಕೆ ಕಳಿಸಿದ ಬಗ್ಗೆ ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಇದೀಗ ಸುಂದರ ಕುಟುಂಬದ ಯಜಮಾನ ಸತ್ತು ಮಸಣ ಸೇರಿದರೆ, ಹೆಂಡತಿ ಅನೈತಿಕ ಸಂಬಂಧಕ್ಕೆ ಬಿದ್ದು, ಗಂಡನನ್ನೇ ಕೊಲೆಗೈದು ಜೈಲು ಸೇರಿದ್ದಾಳೆ.



Source link

Leave a Reply

Your email address will not be published. Required fields are marked *