Headlines

ಮಹಿಳೆಯ ಖಾಸಗಿ ಅಂಗಕ್ಕೆ ಪೊಲೀಸರಿಂದ ಹಲ್ಲೆ: ಟಾಯ್ಲೆಟ್​ಗೂ ಹೋಗಲಾಗದೆ ನರಕಯಾತನೆ

ಮಹಿಳೆಯ ಖಾಸಗಿ ಅಂಗಕ್ಕೆ ಪೊಲೀಸರಿಂದ ಹಲ್ಲೆ: ಟಾಯ್ಲೆಟ್​ಗೂ ಹೋಗಲಾಗದೆ ನರಕಯಾತನೆ


ಬೆಂಗಳೂರು, ನವೆಂಬರ್ 03: ಖಾಸಗಿ ಅಂಗಕ್ಕೆ ಹಲ್ಲೆ ಹಿನ್ನೆಲೆ ಮಲ, ಮೂತ್ರ ವಿಸರ್ಜಿಸಲು ಆಗದೆ ಮಹಿಳೆ (ಮಹಿಳೆ) ನರಕಯಾತನೆ ಅನುಭವಿಸಿದ್ದು, ಬೆಂಗಳೂರಿನ ವರ್ತೂರು ಪೊಲೀಸರು (ಪೊಲೀಸ್) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 34 ವರ್ಷದ ಸುಂದರಿ ಬಿಬಿ ಹಲ್ಲೆಗೊಳಗಾದ ಮಹಿಳೆ. ಬೌರಿಂಗ್ ಆಸ್ಪತ್ರೆಯ ಎಂಎಲ್ ಸಿ ರಿಪೋರ್ಟ್‌ನಲ್ಲಿ ಗಾಯದ ಭೀಕರತೆ ಬಗ್ಗೆ ಉಲ್ಲೇಖಿಸಲಾಗಿದೆ. ಸದ್ಯ ವೈದ್ಯರ ಚಿಕಿತ್ಸೆ ನಂತರ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ.

ನಡೆದದ್ದೇನು?

ಸುಂದರಿ ಬಿಬಿ ನಗರದ ಖಾಸಗಿ ಅಪಾರ್ಟ್‌ಮೆಂಟ್‌ಗೆ ಕೆಲಸಕ್ಕೆ ಸೇರಿದ್ದರು. ಮಹಿಳೆ ಕೆಲಸ ಮಾಡುತ್ತಿರುವ ಫ್ಲ್ಯಾಟ್‌ನಲ್ಲಿ ಅವರ ವಿರುದ್ಧ ಕಳ್ಳತನ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ವರ್ತೂರು ಪೊಲೀಸರಿಗೆ ಮಹಿಳೆ ವಿರುದ್ಧ ದೂರು ಕೂಡ ನೀಡಿದ್ದಾರೆ. ಹೀಗಾಗಿ ವಿಚಾರಣೆಗೆಂದು ಮಹಿಳೆ ಕರೆತಂದು ಖಾಸಗಿ ಆಸ್ಪತ್ರೆ, ಕೈಕಾಲು ಮತ್ತು ತಲೆಗೆ ಮನಸೋಇಚ್ಛೆ ಹಲ್ಲೆ ಮಾಡಿ ಆರೋಪ ಕೇಳಿಬಂದಿದೆ.

ಕಾರಟಗಿ ಬೀದಿ ಬದಿ ವ್ಯಾಪಾರಿ ಮೇಲೆ ಕ್ರಯ

ಕೊಪ್ಪಳ ಜಿಲ್ಲೆಯ ಕಾರಟಗಿ ಬೀದಿ ಬದಿ ವ್ಯಾಪಾರಿ ಮೇಲೆ ಕ್ರೌರ್ಯ ಮೆರೆದಿದ್ದ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ದುರ್ಗೇಶ್ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ನಿವಾಸಿ. ಇದೇ ದುರ್ಗೇಶ್ ಕಾರಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕುರಿ ಕಳ್ಳತನ ಕೇಸ್ ನಲ್ಲಿ ದುರ್ಗೇಶ್ ನನ್ನ ವಶಕ್ಕೆ ಪಡೆದು ಮನಸೋಇಚ್ಛೆ ಥಳಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಪೊಲೀಸ್ ಟಾರ್ಚರ್ ನಿಂದ ಆತ್ಮಹತ್ಯೆಗೆ ಯತ್ನಿಸಿದ ಮಗ: ಠಾಣೆಗೆ ನುಗ್ಗಿ ಪೊಲೀಸರ ಚಳಿಬಿಡಿಸಿದ ತಾಯಿ

ಕಾರಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಗಂಗಾಧರ, ಆನಂದ್ ಹಾಗೂ ಇನ್ನು ಕೆಲವರು ಸೇರಿ ಮೂರು ದಿನ ಕೂಡಿಟ್ಟು ಹಲ್ಲೆ ಮಾಡಿದ್ದಾರಂತೆ. ಜೊತೆಗೆ ದುರ್ಗೇಶ್ ಬಳಿ ಸುಮಾರು 40 ಸಾವಿರ ರೂ. ಹಣ ವಸೂಲಿ ಮಾಡಿದ್ದರಂತೆ. ಎರಡು ತಿಂಗಳ ಬಳಿಕ ದುರ್ಗೇಶ್ ಪೊಲೀಸರ ಕ್ರೌರ್ಯವನ್ನ ಬಿಚ್ಚಿಟ್ಟಿದ್ದರು.

ಹಲ್ಲೆ ಮಾಡಿರುವ ವಿಷಯ ಯಾರಿಗೂ ಹೇಳದಂತೆ ಪೊಲೀಸರು ಧಮ್ಕಿ ಹಾಕಿದ್ದರಂತೆ. ಹೀಗಾಗಿ ಇಷ್ಟು ದಿನ ದುರ್ಗೇಶ್ ಸುಮ್ಮನಿದ್ದ. ಇದೀಗ ಪೊಲೀಸರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಕೊಡಲು ನಿರ್ಧರಿಸಿದ್ದರು. ಜೊತೆಗೆ ಪೊಲೀಸರ ಕಿರುಕುಳದಿಂದ ರೋಸಿಹೋಗಿದ್ದ ದುರ್ಗೇಶ್ ಆತ್ಮಹತ್ಯೆಗೂ ಮುಂದಾಗಿದ್ದರು ಎಂಬ ಶಾಕಿಂಗ್ ಮಾಹಿತಿಯನ್ನೂ ಅವರೇ ಬಾಯಿ ಬಿಟ್ಟಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *