ಬೆಂಗಳೂರು, ನ.15: ಬೆಂಗಳೂರಿನಲ್ಲಿ ವಾಹನಗಳು ಇಳಿದರೆ ಸಾಕು, ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಒಂದು ಟ್ರಾಫಿಕ್ (ಬೆಂಗಳೂರು ಸಂಚಾರ) ಸಮಸ್ಯೆ, ಮತ್ತೊಂದು ಅಪಘಾತ, ಇದು ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯವಾಗಿದೆ. ಇದೀಗ ಬೈಯಪ್ಪನಹಳ್ಳಿ ಫ್ಲೈಓವರ್ ಬಳಿಯ ರಸ್ತೆಬದಿಯಲ್ಲಿ ಒಂದು ಅಪಘಾತ ಸಂಭವಿಸಿದೆ. ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರಾಂಗ್ ಸೈಡ್‌ನಲ್ಲಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದು ಆಟೋ ಚಾಲಕನೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಇದೀಗ ಈ ವಿಚಾರವಾಗಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದು, ಬೆಂಗಳೂರಿನಲ್ಲಿ ಜನ, ವಾಹನ ದಟ್ಟಣೆ ಹೆಚ್ಚಿರುವ ಕಾರಣ ರಾಂಗ್ ಸೈಡ್, ರಸ್ತೆ ಶಿಸ್ತಿನ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದ ಪ್ರಕಾರ, ಮಹಿಳೆ ಸಂಚಾರ ನಿಯಮವನ್ನು ಉಲ್ಲಂಘಿಸಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ಬಂದು ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ದೃಶ್ಯದಲ್ಲಿ ತಪ್ಪು ಮಾಡಿದ ಮಹಿಳೆ ಆಟೋ ಚಾಲಕನಿಗೆ ರಸ್ತೆ ಮಧ್ಯೆ ನಿಂದಿಸಿದ್ದಾರೆ. ಈ ವೇಳೆ ಸಂಚಾರಿ ಪೊಲೀಸರು ಒಳಗೆ ಪ್ರವೇಶಿಸಿ, ಮಹಿಳೆಯನ್ನು ಸುಮ್ಮನಿರುವಂತೆ, ಅವರ ತಪ್ಪಿನ ಬಗ್ಗೆ ಹೇಳಿದ್ರು, ಕೇಳಿಸಿಕೊಳ್ಳಬೇಡಿ, ಆಟೋ ಚಾಲಕನಿಗೆ ಬಾಯಿಗೆ ಬಂದಂತೆ ಬೈಯುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಆಟೋ ಚಾಲಕ ಕೂಡ ವಾದಿಸಿದ್ದು, “ನಾನು ಸರಿಯಾದ ಸೈಡ್‌ನಲ್ಲಿ ಬಂದಿದ್ದೇನೆ. ನೀವು ರಾಂಗ್‌ಸೈಡ್‌ನಿಂದ ಬಂದ ಡಿಕ್ಕಿ ಹೊಡೆದದ್ದು” ಎಂದು ಹೇಳಿದ್ದರು, ಮಹಿಳೆ ಮಾತ್ರ ತನ್ನ ತಪ್ಪನ್ನು ಸರಿ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಬೈಯಪ್ಪನಹಳ್ಳಿ ಫ್ಲೈಓವರ್ನಲ್ಲಿ ಟ್ರಾಫಿಕ್ ಅಸ್ತವ್ಯಸ್ತತೆ: ಮಹಿಳೆ ದಾರಿ ತಪ್ಪಿ, ಆಟೋಗೆ ಡಿಕ್ಕಿ ಹೊಡೆದು, ನಂತರ ಕಿರುಚುತ್ತಾ, ನಿಂದಿಸಿ ಮತ್ತು ಆರೋಪವನ್ನು ನಿರಾಕರಿಸಿದಳು. ಪೋಲೀಸ್ ಉಲ್ಬಣವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾನೆ, ಆಟೋ ಡ್ರೈವರ್ ದೃಢವಾಗಿ ನಿಂತಿದ್ದಾನೆ – ಅಹಂಕಾರಕ್ಕಾಗಿ 1 ಕಿಮೀ ಜಾಮ್. ರಸ್ತೆಗಳಿಗೆ ಹೆಮ್ಮೆಯ ಇಳುವರಿ ಚಿಹ್ನೆಗಳು ಬೇಕು.
ಇಬ್ಬರೂ ಕನ್ನಡಿಗರು, ಆದ್ದರಿಂದ ಓಲಾಟಗಳು ಮೌನವಾಗಿರುತ್ತಾರೆ. pic.twitter.com/ofCe5d0eg8
— ಸನಾತನ (@sanatan_kannada) ನವೆಂಬರ್ 14, 2025
ಇನ್ನು ಈ ಗಲಾಟೆಯಿಂದ ಈ ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ಸಂಚಾರ ದಟ್ಟಣೆ ಇದೆ. ಈ ಕಿರಿದಾದ ರಸ್ತೆಯಲ್ಲಿ ಸಾಲು ಸಾಲು ವಾಹನಗಳು ಜಾಮ್ ಆಗಿದ್ದು, ಇವರ ಜಗಳದಿಂದ ಇತರ ವಾಹನ ಸವಾರರು ಪರದಾಡುತ್ತಿದ್ದರು. ಈ ಸಾಮಾಜಿಕ ವಿಡಿಯೋದಲ್ಲಿ ವೈರಲ್ ಆಗಿದ್ದು ಪೊಲೀಸರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಸತಿ ದರ, 2ಬಿಹೆಚ್‌ಕೆ ಮನೆಗೆ 1 ಕೋಟಿ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:
ಮಹಿಳೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಒಮ್ಮೆ ಕಠಿಣ ಶಿಕ್ಷೆಯನ್ನು ನೀಡಿ, ಮುಂದೆ ಯಾರು ಕೂಡ ಇಂತಹ ತಪ್ಪು ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, ರಾಂಗ್‌ಸೈಡ್‌ನಲ್ಲಿ ಬಂದ ಮಹಿಳೆಗೆ ಯಾಕೆ ದಂಡ ವಿಧಿಸಿಲ್ಲ, ತಪ್ಪು ಮಾಡದ ಆಟೋ ಚಾಲಕನಿಗೆ ನಿಂದಿಸುವ ಅಧಿಕಾರ ಆ ಮಹಿಳೆಗೆ ಯಾರು ನೀಡಿದ್ದು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ