Headlines

Bengaluru: ಪ್ರೇಯಸಿ ಜನ್ಮ ದಿನದ ಹಿನ್ನೆಲೆ 26 ಕಿ.ಮೀ. ಓಡಿದ ಯುವಕ; ವಿಡಿಯೋ ವೈರಲ್​​

Bengaluru: ಪ್ರೇಯಸಿ ಜನ್ಮ ದಿನದ ಹಿನ್ನೆಲೆ 26 ಕಿ.ಮೀ. ಓಡಿದ ಯುವಕ; ವಿಡಿಯೋ ವೈರಲ್​​


ಬೆಂಗಳೂರು, ಜನವರಿ 15: ಪ್ರೇಯಸಿಯ ಜನ್ಮ ದಿನಕ್ಕೆ ಹುಡುಗರು ಹೂವು, ಚಾಕೊಲೇಟ್, ದುಬಾರಿ ಗಿಫ್ಟ್ ಅಥವಾ ಸರ್ಪ್ರೈಸ್ ಡಿನ್ನರ್ ಕೊಡೋದನ್ನ ನಾವು ನೋಡಿದ್ದೇವೆ. ಆದರೆ ಬೆಂಗಳೂರು ಮೂಲದ ಯುವಕನೋರ್ವ ಗರ್ಲ್ ಫ್ರೆಂಡ್ ಜನ್ಮ ದಿನದ ಹಿನ್ನೆಲೆ 26 ಕಿಲೋ ಮೀಟರ್ ದೂರವನ್ನು ಓಡಿಸಿದ್ದಾನೆ. ಆಶ್ಚರ್ಯವೆನಿಸಿದರೂ ಇದು ಸತ್ಯ. ಅವಿಕ್ ಭಟ್ಟಾಚಾರ್ಯ ಎಂಬ ವ್ಯಕ್ತಿ, ತನ್ನ ಪ್ರೇಯಸಿಯ 26ನೇ ಜನ್ಮದಿನದ ಹಿನ್ನೆಲೆ ಈ ಕೆಲಸ ಮಾಡಿದ್ದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

ಅವಿಕ್ ಭಟ್ಟಾಚಾರ್ಯ ಮತ್ತು ಅವರ ಗರ್ಲ್‌ಫ್ರೆಂಡ್ ಸಿಮ್ರಾನ್ ಇಬ್ಬರೂ ಜಂಟಿಯಾಗಿ ನಿರ್ವಹಿಸುವ @simranxavik ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ತಕ್ಷಣ ಸೆಳೆದಿದ್ದಾರೆ, ರಿಲೇಶನ್‌ಶಿಪ್ ಸ್ಟ್ಯಾಂಡರ್ಡ್‌ನಲ್ಲಿ ಅವರು ಎತ್ತಿ ಹಿಡಿದಿದ್ದಾರೆ ಎಂದು ಅನೇಕರು ಪ್ರಶಂಸಿಸಿದ್ದಾರೆ. ಆರಂಭದಲ್ಲಿ ಸಿಮ್ರಾನ್ ಮಾತನಾಡುತ್ತಾ, ತನ್ನ ಜನ್ಮದಿನದಂದು ತಾನೇ 26 ಕಿಲೋಮೀಟರ್ ವೀಡಿಯೊ ಓಡಲು ಬಯಸಿದ್ದೆ. ಆದರೆ ಅನಾರೋಗ್ಯದಿಂದ ಸಾಧ್ಯವಾಗಲಿಲ್ಲ. ಜೊತೆಗೆ ಅವಿಕ್ ಮಾಡಿದ ಈ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು ವಧು, ಆದರೆ ಎಲ್ಲರೂ ನೋಡಿದ್ದು ಫೋಟೋಗ್ರಾಫರ್!

ನಂತರ ಅವಿಕ್ ಓಡುತ್ತಾ ಮಾತನಾಡುವ ದೃಶ್ಯಗಳು ವಿಡಿಯೋದಲ್ಲಿವೆ. ನನ್ನ ಗೆಳತಿಗೆ ಈಗ 26 ವರ್ಷ ತುಂಬಿದೆ, ಅವಳ ಜನ್ಮದಿನದ ಪ್ರಯುಕ್ತ ನಾನು 26 ಕಿಲೋಮೀಟರ್ ಓಡುತ್ತಿದ್ದೇನೆ. ತಾನು ಇಯರ್‌ಫೋನ್ ಇಲ್ಲದೆ ಓಡುವುದು, ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ನೆಮ್ಮದಿ ಇಟ್ಟುಕೊಳ್ಳುವ ಜೊತೆಗೆ ಸಿಮ್ರಾನ್ ಜೊತೆಗಿನ ಸಂತೋಷದ ಕ್ಷಣಗಳನ್ನು ನೆನಪಿಸಿಕೊಳ್ಳಲು ಸಾಧ್ಯ ಎಂದು ವಿವರಿಸುತ್ತಾರೆ. ಜೊತೆಗೆ, ತಾನು ಮತ್ತು ಸಿಮ್ರಾನ್ ಇಬ್ಬರೂ ಇನ್ನೂ ಎರಡು ವಾರಗಳಲ್ಲಿ ನಡೆಯಲಿರುವ ಮುಂಬೈ ಮ್ಯಾರಥಾನ್‌ಗೆ ತಯಾರಿ ನಡೆಸುತ್ತಿರುವ ವಿಷಯವಿದ್ದರೆ ಅವಿಕ್ ಅವರು ಬಹಿರಂಗಪಡಿಸಿದ್ದಾರೆ.

ಇನ್ನು ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನನ್ನ ಮಾನಸಿಕ ಶಾಂತಿಗಾಗಿ ಇದನ್ನು AI ಅಂತನೇ ಭಾವಿಸುತ್ತೇನೆ ಎಂದು ಒಬ್ಬರು ಹೇಳಿದ್ದರೆ, ಈಗ ನಾನು ‘ನೋ ವೇ’ ಅನ್ನು 26 ಬಾರಿ ಬರೆಯಬೇಕಾ? ಇಂಥ ಹುಡುಗನನ್ನು ಈ ಭೂಮಿಯಲ್ಲಿ ಎಲ್ಲಿಂದ ಹುಡುಕಬೇಕು? ಎಂದು ಪ್ರಶ್ನಿಸಿದ್ದಾರೆ. ಈ ವೀಡಿಯೊವನ್ನು 2026 ರ ಜನವರಿ 5 ರಂದು ಹಂಚಿಕೊಂಡಿದೆ, ಇದುವರೆಗೆ 7.5 ಮಿಲಿಯನ್ ವೀಕ್ಷಣೆಗಳು ಮತ್ತು 6.8 ಲಕ್ಷ ಲೈಕ್‌ಗಳು ಲಭ್ಯವಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 11:33 am, ಗುರುವಾರ, 15 ಜನವರಿ 26





Source link

Leave a Reply

Your email address will not be published. Required fields are marked *