ಪಣತ್ತೂರು ರಸ್ತೆ ಡರ್ಟ್ ಬೈಕ್: ಇದು ಬೆಂಗಳೂರಿನ ರಸ್ತೆ ಸ್ಥಿತಿ ವಿಡಿಯೋ ವೈರಲ್

ಪಣತ್ತೂರು ರಸ್ತೆ ಡರ್ಟ್ ಬೈಕ್: ಇದು ಬೆಂಗಳೂರಿನ ರಸ್ತೆ ಸ್ಥಿತಿ ವಿಡಿಯೋ ವೈರಲ್


ಬೆಂಗಳೂರು, ನ.7: ಬೆಂಗಳೂರಿನ ಪಣತ್ತೂರುನಲ್ಲಿ (ಬಿಬೆಂಗಳೂರಿನ ಪಾಣತ್ತೂರು) ‘ಡರ್ಟ್ ಬೈಕ್’ ರೈಡ್ ಸಾಹಸ ಶುರುವಾಗಿದೆ. ಇದರ ವಿಡಿಯೋ ಎಕ್ಸ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬೆಂಗಳೂರಿನ ರಸ್ತೆಗಳ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ ಎಂದು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ರಸ್ತೆಗಳ ಬಗೆಗಿನ ವಿಡಿಯೋ ಟ್ರೋಲ್ ಆಗುತ್ತಿದೆ. ಆದರೆ ಈ ವಿಡಿಯೋ ಮಾತ್ರ ತುಂಬಾ ತಮಾಷೆಯಾಗಿದೆ. ಕಾಡುಬೀಸನಹಳ್ಳಿ-ಪಣತ್ತೂರು ಮುಖ್ಯ ಮಾರ್ಗದಲ್ಲಿ ವೈಟ್-ಟಾಪಿಂಗ್ ಕಾಮಗಾರಿಗಾಗಿ ರಸ್ತೆ ಮುಚ್ಚಲಾಗಿದೆ. ಇದರಿಂದ ವಾಹನ ದಟ್ಟಣೆ ಉಂಟಾಗಿದ್ದು, ಬೈಕ್ ಸವಾರರು ರಸ್ತೆ ಬದಿಯಲ್ಲಿ ತೆರೆದ ಚರಂಡಿ, ಕಂದಕದಲ್ಲಿ ಸಂಚರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಂಗಳೂರಿನ ‘ಡರ್ಟ್ ಬೈಕ್’ ರೈಡ್ ಎಂದು ನೆಟ್ಟಿಗರು ಕರೆದಿದ್ದಾರೆ.

ಈ ಬೆಂಗಳೂರಿನಲ್ಲಿ ಮೂಲಸೌಕರ್ಯದ ಕೊರತೆ ಎಷ್ಟಿದೆ ಎಂದು ತೋರಿಸುತ್ತಿದೆ. ಅಕ್ಟೋಬರ್ 10 ರಂದು ಕಾಡುಬೀಸನಹಳ್ಳಿ-ಪಣತ್ತೂರು ಮುಖ್ಯ ಮಾರ್ಗದಲ್ಲಿ ವೈಟ್-ಟಾಪಿಂಗ್ ಕೆಲಸ ಪ್ರಾರಂಭವಾಗಿದ್ದು, ತಿಂಗಳ ಒಳಗೆ ಇದರ ಕೆಲಸ ಮುಗಿಯಬೇಕಿತ್ತು. ಆದರೆ ಕೆಲಸ ಪೂರ್ಣಗೊಳ್ಳುವ ಮೊದಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಈ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ದ್ವಿಚಕ್ರ ಸವಾರರು ರಸ್ತೆ, ಕಂದಕದ ಸಂದಿಗಳಲ್ಲಿ ಸಾಗಿದ್ದಾರೆ.

ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಮನುಷ್ಯರ ಬಳಿಯೇ ಸಲಹೆ ಕೇಳಿದ ಎಐ ಇನ್ಫ್ಲುಯೆನ್ಸರ್ ನೈನಾ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ನೆಟ್ಟಿಗರು ಈ ವಿಡಿಯೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ. ಇದು ಬೆಂಗಳೂರಿನ ಡರ್ಟ್ ಬೈಕಿಂಗ್ ಈವೆಂಟ್ ಎಂದು ಹೇಳಿದ್ದಾರೆ. ಇನ್ನೂ ಕೆಲವು, ಬೆಂಗಳೂರು ಮೂಲಸೌಕರ್ಯಕ್ಕಿಂತ, ಇಂತಹ ವಿಚಾರಗಳಲ್ಲಿ ಮುಂದಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸರ್ಕಾರ ಇತ್ತಿಚೇಗೆ ಸಾರ್ವಜನಿಕರಿಗೆ ಇಂಥಹ ಅನುಭವವನ್ನು ನೀಡುತ್ತಿದೆ. ಅದರಲ್ಲಿ ಒಬ್ಬ ಎಂದು ಒಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:28 pm, ಶುಕ್ರ, 7 ನವೆಂಬರ್ 25





Source link

Leave a Reply

Your email address will not be published. Required fields are marked *