ಬೆಂಗಳೂರು ದಕ್ಷಿಣ(ರಾಮನಗರ), (ನವೆಂಬರ್ 02): ನಲ್ಲಿ ನೀರು ಬದಲು ಹೊಗೆ ಬರುತ್ತಿರುವ ವಿಚಿತ್ರ ಘಟನೆ ಬೆಂಗಳೂರು ದಕ್ಷಿಣ ರಾಮನಗರದ ಎಂಜಿ ರಸ್ತೆಯಲ್ಲಿ ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ನಲ್ಲಿ ಹೊಗೆ ಬರುತ್ತಿತ್ತು, ಇದನ್ನು ನೋಡಿ ಜನ ಶಾಕ್ ಆಗಿದ್ದಾರೆ. ಈ ವಿಷಯ ತಿಳಿಯದಂತೆ ಸ್ಥಳಕ್ಕೆ ಜಲಮಂಡಳಿ ಹಾಗೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ನೀರು ಬದಲಿಗೆ ನಲ್ಲಿ ಏಕೆ ಹೊಗೆ ಬರುತ್ತಿದೆ ಎಂಬ ಬಗ್ಗೆ ಬೆಸ್ಕಾಂ ಅಧಿಕಾರಿ ಮಾತನಾಡಿದ್ದಾರೆ. ಹಾಗದ್ರೆ, ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.