BESCOM Power Cut: ಫೆಬ್ರವರಿ 11, 12ರಂದು ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಪವರ್ ಕಟ್

BESCOM Power Cut: ಫೆಬ್ರವರಿ 11, 12ರಂದು ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಪವರ್ ಕಟ್


ಬೆಂಗಳೂರು, ಫೆಬ್ರವರಿ 10: ಕೆಪಿಟಿಸಿಲ್ ತುರ್ತು ನಿರ್ವಹಣೆ ಮತ್ತು ಇತರ ಕಾಮಗಾರಿಗಳನ್ನು ಹೊಂದಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವಿವಿಧ ಪ್ರದೇಶಗಳಲ್ಲಿ ಫೆಬ್ರವರಿ 11 ಹಾಗೂ 12 ರಂದು ಪವರ್ ಕಟ್ (ವಿದ್ಯುತ್ ಕಡಿತ) ಇರಲಿದೆ. ಈ ಬಗ್ಗೆ ಪ್ರಕಟಣೆ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.

ಚಿತ್ರದುರ್ಗ ಜಿಲ್ಲೆ ತಳಕು ಬೆಸ್ಕಾಂ ಉಪ ವಿಭಾಗ ‘ತಳಕು 66/11’ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆಬ್ರವರಿ 11 ರ ಬುಧವಾರ ಕೆಪಿಟಿಸಿಎಲ್ ವತಿಯಿಂದ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಹೀಗಾಗಿ, ಬೇಡರಡ್ಡಿ-ಹಳ್ಳಿ, ತಿಮ್ಮಪ್ಪಯನಹಳ್ಳಿ, ಎನ್.ದೇವರಹಳ್ಳಿ, ತಳಕು, ಮೊನ್ನೆಕೋಟೆ, ದೇವರೆಡ್ಡಿಹಳ್ಳಿ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ಗಂಟೆಯವರೆಗೂ ನಿರಂತರ ಜ್ಯೋತಿ, ಕೃಷಿ ವಿದ್ಯುತ್ ಸಂಪರ್ಕ ಸ್ಥಗಿತ ಎಂದು ಬೆಸ್ಕಾಂನಲ್ಲಿದೆ.

ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಇಇ ಎನ್‌ಜಿ ಮಮತಾ ಹಾಗೂ ವೆಂಕಟೇಶ್ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಫೆಬ್ರವರಿ 12ಕ್ಕೆ ತುಮಕೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್

ತುಮಕೂರಿನಲ್ಲಿ ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ಯೋಜನೆ ತ್ರೈಮಾಸಿಕ ಕಾಮಗಾರಿಯನ್ನು ಫೆ.12 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ 66/11 ಕೆವಿ ಅಂಕಸಂದ್ರ ಉಪಸ್ಥಾವರದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್

ಕೆಪಿಟಿಸಿಎಲ್ ವತಿಯಿಂದ ಜಾಲಹಳ್ಳಿ ವಿಭಾಗ 66/11 ಕೆವಿ ಎಂಐಐ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಹಣ ಕಾರ್ಯ ಹಮ್ಮಿಕೊಂಡಿರುವ ಕಾರಣ ಈ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಟ್ರೇಡಿಂಗ್ ಅಡಿಕ್ಷನ್: ಡ್ರಗ್ಸ್ ಅಡಿಕ್ಷನ್‌ನಂತೆಯೇ ಸಿಟಿ ಜನರಿಗೆ ಈಗ ಟ್ರೇಡಿಂಗ್ ಖಯಾಲಿ

ಎಜಿಬಿಜಿ-ಲೇಔಟ್, ಭೈರವೇಶ್ವರ ಹೋಟೆಲ್, ಕಾವೇರಿ ಲೇಔಟ್, ಬೋನ್‌ವಿಲ್ ಏರಿಯಾ ಚಿಕ್ಕಸಂದ್ರ ಐರ್ ಲೇಔಟ್, ಗಣೇಶ ಸಾ ಮಿಲ್, ಕೆಂಪೇಗೌಡ ನಗರ, ಬೃಂದಾವನ ಲೇಔಟ್, ಕಲ್ಯಾಣನಗರ ಬಾಗಲಗುಂಟೆ, ಸೌರ ಲೇಔಟ್, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವು ಕಡೆ ಪವರ್ ಕಟ್ ಆಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *