
<p>ದೇಹದ ತೂಕ ಇಳಿಸೋಕೆ ಬರೀ ವ್ಯಾಯಾಮ ಮಾಡಿದ್ರೆ ಸಾಲದು, ಸರಿಯಾದ ಆಹಾರ ಕ್ರಮ ಕೂಡ ಮುಖ್ಯ. ರಾತ್ರಿ ಹೊತ್ತು ಕೆಲವು ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಸುಲಭವಾಗಿ ಕರಗುತ್ತೆ, ಜೊತೆಗೆ ಒಳ್ಳೆ ನಿದ್ದೆ ಕೂಡ ಬರುತ್ತೆ.</p><img>ದೇಹದ ತೂಕ ಇಳಿಸೋಕೆ ಬರೀ ವ್ಯಾಯಾಮ ಮಾಡಿದ್ರೆ ಸಾಲದು, ಸರಿಯಾದ ಆಹಾರ ಕ್ರಮ ಕೂಡ ಮುಖ್ಯ. ರಾತ್ರಿ ಹೊತ್ತು ಕೆಲವು ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಸುಲಭವಾಗಿ ಕರಗುತ್ತೆ, ಜೊತೆಗೆ ಒಳ್ಳೆ ನಿದ್ದೆ ಕೂಡ ಬರುತ್ತೆ.<img>ಮಲಗುವ ಮುನ್ನ ಕೆಲವು ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದು ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ನೀವು ನಿದ್ದೆ ಮಾಡುವಾಗ ಕೊಬ್ಬು ಇಳಿಸಲು ನೆರವಾಗುವ ಕೆಲವು ಆಹಾರಗಳ ಲಿಸ್ಟ್ ಇಲ್ಲಿದೆ.<img>ಬೇಯಿಸಿದ ಮೊಟ್ಟೆಗಳಲ್ಲಿ ಕ್ಯಾಲೋರಿ ಕಡಿಮೆ ಮತ್ತು ಪ್ರೊಟೀನ್ ಹೆಚ್ಚಾಗಿರುತ್ತದೆ. ಇದು ರಾತ್ರಿ ಹೊತ್ತಿನ ಹಸಿವನ್ನು ಕಡಿಮೆ ಮಾಡುತ್ತದೆ. ಜೊತೆಗೆ ನಿದ್ದೆಯಲ್ಲಿ ಸ್ನಾಯುಗಳ ಆರೋಗ್ಯವನ್ನು ಕಾಪಾಡುತ್ತದೆ.<img>ಮೊಟ್ಟೆಯಲ್ಲಿರುವ ಪ್ರೊಟೀನ್ ಅಂಶವು ಕ್ಯಾಲೋರಿ ಸೇವನೆಯನ್ನು ಹೆಚ್ಚಿಸದೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯ ತೊಂದರೆ ತಪ್ಪಿಸಲು, ಮಲಗುವ 1-2 ಗಂಟೆಗಳ ಮೊದಲು 1-2 ಮೊಟ್ಟೆಗಳನ್ನು ತಿನ್ನಿ. ಇದು ತೂಕ ಇಳಿಕೆಗೆ ಸಹಕಾರಿ.<img>ಆಪಲ್ ಸೈಡರ್ ವಿನೆಗರ್‌ನಲ್ಲಿರುವ ಅಸಿಟಿಕ್ ಆಸಿಡ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ವಿಭಜಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ರಾತ್ರಿ ಹೊತ್ತು ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಲು ಇದು ಸಹಕಾರಿ. ಮಲಗುವ 30 ನಿಮಿಷಗಳ ಮೊದಲು 1-2 ಟೀಸ್ಪೂನ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ.<img>ರಾತ್ರಿ ಊಟದಲ್ಲಿ ಹಾಗಲಕಾಯಿ ಸೇರಿಸುವುದರಿಂದ ಲಿಪಿಡ್ ಮೆಟಬಾಲಿಸಂ ಮತ್ತು ಇನ್ಸುಲಿನ್ ಸೆನ್ಸಿಟಿವಿಟಿ ಸುಧಾರಿಸುತ್ತದೆ. ಇದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಸಂಜೆ ಹೊತ್ತು ಹಾಗಲಕಾಯಿ ಜ್ಯೂಸ್ ಕುಡಿದರೆ, ನಿದ್ದೆ ಮಾಡುವಾಗ ಗ್ಲೂಕೋಸ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಗೆ ಅನುಕೂಲವಾಗುತ್ತದೆ.<img>ದಾಲ್ಚಿನ್ನಿ ಟೀ ರಾತ್ರಿ ಹೊತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಇದು ಕಾರ್ಟಿಸೋಲ್‌ನಿಂದ ಉಂಟಾಗುವ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆ, ಉರಿಯೂತ ಕಡಿಮೆ ಮಾಡಲು ಮತ್ತು ಒಳ್ಳೆ ನಿದ್ದೆಗೂ ಇದು ಸಹಕಾರಿ.
Source link
Fat Burning Foods: ರಾತ್ರಿ ಈ ಆಹಾರಗಳನ್ನು ತಿಂದರೆ ಹೊಟ್ಟೆಯ ಕೊಬ್ಬು ಕರಗುತ್ತೆ, ನಿದ್ದೆಯೂ ಚೆನ್ನಾಗಿ ಬರುತ್ತೆ