
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ಕಟ್ಟುವಾಗ ಅಡಿಪಾಯ ಯಾವ ದಿನ ಕಾಯಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯ ಪ್ರಕಾರ, ಮನೆಯ ನಿರ್ಮಾಣ ಕಾರ್ಯವನ್ನು (ಗೃಹಾರಂಭ) ಪ್ರಾರಂಭಿಸುವ ಸಮಯ ಬಹಳ ಮಹತ್ವಪೂರ್ಣವಾಗಿದೆ. ಸರಿಯಾದ ಮಾಸದಲ್ಲಿ ಗೃಹಾರಂಭವು ನಿರ್ವಿಘ್ನವಾಗಿ ಮಾಡಿದರೆ ಮನೆಯ ನಿವಾಸಿಗಳಿಗೆ ಶುಭ ಫಲ ದೊರೆಯುತ್ತದೆ. ವೈಶಾಖ, ಫಾಲ್ಗುಣ, ಶ್ರಾವಣ ಮತ್ತು ಮಾಘ ಮಾಸಗಳು ಗೃಹಾರಂಭಕ್ಕೆ ಅತ್ಯಂತ ಶುಭಕರ ಎಂದು ಬಾದರಾಯಣರು ತಮ್ಮ ಗ್ರಂಥಗಳಲ್ಲಿ ಹೇಳಿದ್ದಾರೆ. ನಾರದ ಮಹರ್ಷಿಗಳು ಪುಷ್ಯ ಮಾಸವನ್ನೂ ಶುಭ ಎಂದು ಪರಿಗಣಿಸಿದ್ದಾರೆ ಎಂದು ಗುರೂಜಿ ಹೇಳಿದ್ದಾರೆ.