ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯಳ ಜೀವನ ಹೊಸ ತಿರುವು ಪಡೆದಿದೆ. ಒಂದೆಡೆ ಪಶ್ಚಾತ್ತಾಪದಿಂದ ತಾಂಡವ್ ಕ್ಷಮೆ ಕೇಳುತ್ತಿದ್ದರೆ, ಇನ್ನೊಂದೆಡೆ ಆದಿ ಪ್ರೀತಿ ನಿವೇದನೆಗೆ ಸಿದ್ಧನಾಗಿದ್ದಾನೆ. ಈ ಇಬ್ಬರ ನಡುವೆ, ಭಾಗ್ಯ ಒಂಟಿಯಾಗಿ ಬದುಕು ಸಾಗಿಸುವ ನಿರ್ಧಾರ ತೆಗೆದುಕೊಳ್ಳಬಹುದೆ?

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ಒಂದು ಸಾವಿರ ಕಂತುಗಳನ್ನು ಪೂರೈಸಿದೆ. ಇಲ್ಲಿಯವರೆಗೂ ಹೆಜ್ಜೆ ಹೆಜ್ಜೆಗೂ ಭಾಗ್ಯಳಿಗೆ ಅವಮಾನವೇ ಕಾದಿದ್ದು, ಅದೂ ಗಂಡನಿಂದಾಗಿ.

ತೀರಾ ಗಡಿ ಮೀರಿದಂಥ ಭಾಗ್ಯಳ ಗೋಳು ನೋಡಿ ವೀಕ್ಷಕರೂ ರೊಚ್ಚಿಗೆದ್ದು ಹೋಗಿದ್ದು ಇದೆ. ಆದರೆ ಆದಿಯ ಎಂಟ್ರಿಯ ಬಳಿಕ ಭಾಗ್ಯಳ ಲೈಫ್ನಲ್ಲಿ ಒಂದೊಳ್ಳೆ ದಿನಗಳು ಬರುತ್ತಿವೆ. ಅದರಲ್ಲಿಯೂ ಭಾಗ್ಯಳ ಅತ್ತೆ ಕುಸುಮಾ ಆದಿ ಮತ್ತು ಭಾಗ್ಯಳ ಮದುವೆ ಮಾಡಿಸೋ ಕನಸು ಕಾಣುತ್ತಿದ್ದಾಳೆ.

ಭಾಗ್ಯಳ ಮೇಲೆ ಆದಿಗೆ ಲವ್ ಮೂಡುವಂತೆ ಮಾಡುವಲ್ಲಿ ಕುಸುಮಾ ಸಕ್ಸಸ್ ಕೂಡ ಆಗಿದ್ದಾಳೆ. ಆದಿ ಇನ್ನೇನು ತನ್ನ ಲವ್ ಸ್ಟೋರಿ ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ತಾಂಡವ್ ಭಾಗ್ಯಳ ಕಾಲಿಗೆ ಬಿದ್ದು ಕ್ಷಮೆ ಕೋರಿ ಮತ್ತೆ ಒಂದಾಗೋಣ ಎಂದಿದ್ದಾನೆ.

ಅತ್ತ ಆದಿಯ ಅಪ್ಪ, ಭಾಗ್ಯಳ ಬಳಿ ಕಂಡು ಕೈಮುಗಿದು ಬೇಡಿಕೊಂಡು ಆದಿಗೆ ಇನ್ನೊಂದು ಮದುವೆಗೆ ಮನವೊಲಿಸು ಎಂದು ಹೇಳಿದ್ದಾನೆ. ಆದಿಯ ಲೈಫ್ ಸೆಟ್ಲ್ ಆಗಬೇಕು ಎಂದರೆ ಆತ ಇನ್ನೊಂದು ಮದುವೆಯಾಗಬೇಕು. ಆತನಿಗೆ ಮದುವೆಗೆ ಮನವೊಲಿಸಲು ನಿನ್ನಿಂದ ಮಾತ್ರ ಸಾಧ್ಯ ಎಂದಿದ್ದಾನೆ!

ಆದಿ ಅಪ್ಪನಿಗೆ ಭಾಗ್ಯ ಮಾತು ಕೊಟ್ಟರೆ, ಅವಳಂತೂ ಮದುವೆಯಾಗಲ್ಲ, ತಾಂಡವ್ಗೆ ಇದಾಗಲೇ ಶ್ರೇಷ್ಠಾ ಜೊತೆ ಮದುವೆಯಾಗಿರುವ ಹಿನ್ನೆಲೆಯಲ್ಲಿ ಅವರಿಬ್ಬರ ಲೈಫ್ ಸೆಟ್ಲ್ ಮಾಡುವುದು ಗ್ಯಾರೆಂಟಿ.

ಹಾಗಿದ್ದರೆ ಆದಿ ಮತ್ತು ತಾಂಡವ್ ಲೈಫ್ ಸೆಟ್ಲ್ ಮಾಡಿ ಭಾಗ್ಯ ಒಂಟಿಯಾಗಿಯೇ ಜೀವನ ನಡೆಸುವ ಟ್ವಿಸ್ಟ್ ಬಹುಶಃ ಈ ಸೀರಿಯಲ್ಗೆ ಬರುವಂತೆ ಕಾಣಿಸುತ್ತಿದೆ. ಒಂಟಿಯಾಗಿಯೇ ಹೋರಾಟ ಮಾಡಿ, ಒಂಟಿಯಾಗಿಯೇ ಜೀವನ ಸಾಗಿಸುವ ಹೆಣ್ಣೊಬ್ಬಳ ಛಲವನ್ನು ತೋರಿಸುವ ಉದ್ದೇಶ ಈ ಸೀರಿಯಲ್ಗೆ ಇರುವ ಹಿನ್ನೆಲೆಯಲ್ಲಿ, ಹಾಗಾದರೆ ಸಂದೇಹವೇ ಇಲ್ಲ.

Source link
Bhagyalakshmi ರೋಚಕ ಟ್ವಿಸ್ಟ್: ಆದಿ- ತಾಂಡವ್ ಜೀವನ ಸೆಟ್ಲ್ ಮಾಡಿ ಭಾಗ್ಯ ಕೊನೆಗೂ ಒಂಟಿ?