Bhagyalakshmi ಸೀರಿಯಲ್​ನಲ್ಲಿ ಮುಂದೇನಾಗತ್ತೆ? ಮದ್ವೆ ಬಳಿಕ ಲೈವ್​ಗೆ ಬಂದು ನಟಿ ಸುಷ್ಮಾ ಹೇಳಿದ್ದೇನು

Bhagyalakshmi ಸೀರಿಯಲ್​ನಲ್ಲಿ ಮುಂದೇನಾಗತ್ತೆ? ಮದ್ವೆ ಬಳಿಕ ಲೈವ್​ಗೆ ಬಂದು ನಟಿ ಸುಷ್ಮಾ ಹೇಳಿದ್ದೇನು

Bhagyalakshmi ಸೀರಿಯಲ್​ನಲ್ಲಿ ಮುಂದೇನಾಗತ್ತೆ? ಮದ್ವೆ ಬಳಿಕ ಲೈವ್​ಗೆ ಬಂದು ನಟಿ ಸುಷ್ಮಾ ಹೇಳಿದ್ದೇನು
ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಭಾಗ್ಯ, ತಾಂಡವ್ ಬಂಡವಾಳ ಬಯಲು ಮಾಡಿ ಆದಿಯನ್ನು ಮದುವೆಯಾಗಿದ್ದಾಳೆ. ಆದರೆ, ಮಗಳು ತನ್ವಿ ಈ ಮದುವೆಯನ್ನು ಒಪ್ಪಿಲ್ಲ, ಇದು ಭಾಗ್ಯಳ ಮುಂದಿರುವ ದೊಡ್ಡ ಸವಾಲಾಗಿದೆ. ಈ ಕುರಿತು ನಟಿ ಸುಷ್ಮಾ ರಾವ್ ಲೈವ್‌ನಲ್ಲಿ ಮಾತನಾಡಿ, ಮುಂದಿನ ಕಥೆಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ನಲ್ಲಿ ಸದ್ಯ ಭಾಗ್ಯ ಮತ್ತು ಆದಿಯ ಮದುವೆಯಾಗಿದೆ. ತಾಂಡವ್​ ಜೊತೆ ಮದುವೆಗೆ ರೆಡಿಯಾಗಿದ್ದ ಭಾಗ್ಯ, ಎಲ್ಲರ ಎದುರೇ ಆತನ ಬಂಡವಾಳ ಬಯಲು ಮಾಡಿ ಆದಿ ಜೊತೆ ಮದುವೆಯಾಗಿದ್ದಾಳೆ.

ಆದರೆ ಇನ್ನೂ ತನ್ವಿ ಅಮ್ಮನನ್ನು ಒಪ್ಪುತ್ತಿಲ್ಲ. ಭಾಗ್ಯ ಇದಾಗಲೇ ಶ್ರೇಷ್ಠಾಗೆ ಮಾತುಕೊಟ್ಟು ಆಗಿತ್ತು. ಶ್ರೇಷ್ಠಾ ಗರ್ಭಿಣಿ ಇರುವ ಕಾರಣ, ನಾನು ನಿನಗೆ ಮೋಸ ಮಾಡುವುದಿಲ್ಲ ಎಂದಿದ್ದಳು. ಆದರೆ ತಾಂಡವ್​ ಶ್ರೇಷ್ಠಾಳನ್ನು ಕಿಡ್​ನ್ಯಾಪ್ ಮಾಡಿಸಿದ್ದ. ಆದಿ ಹೋಗಿ ಬಿಡಿಸಿಕೊಂಡು ಬಂದ.

ಹಾಗೆಂದು ಸದ್ಯ ಸೀರಿಯಲ್​ ಸುಖಾಂತ್ಯ ಎಂದು ಹೇಳಲು ಆಗದು. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಮುಂದೆ ಏನು ಆಗುತ್ತದೆ ಎನ್ನುವುದು ಮುಖ್ಯ. ಭಾಗ್ಯ ಆದಿಯ ಜೊತೆ ಹೊಸ ಜೀವನ ಸರಿಯಾಗಿ ಶುರು ಮಾಡ್ತಾಳೋ ಅಥ್ವಾ ಅವಳ ಗೋಳು ಇನ್ನೂ ಮುಂದುವರೆಯುತ್ತದೆಯೋ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

ಇದರ ನಡುವೆಯೇ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ ಅವರು ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅವರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಈ ವೇಳೆ ಅವರಿಗೆ ಮುಂದೇನಾಗುತ್ತದೆ ಎನ್ನುವ ಪ್ರಶ್ನೆ ಕೇಳಲಾಗಿದೆ. ಜೊತೆಗೆ ತನ್ವಿ ನಿಮ್ಮನ್ನು ಒಪ್ಪುತ್ತಾಳಾ ಎನ್ನುವ ಪ್ರಶ್ನೆಯನ್ನೂ ಕೇಳಲಾಗಿದೆ. ಅದಕ್ಕೆ ನಟಿ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಮುಂದೆ ಏನಾಗುತ್ತದೆ ಎನ್ನೋದು ನನಗೂ ಗೊತ್ತಿಲ್ಲ. ನನಗೂ ಕುತೂಹಲವಿದೆ. ವೀಕ್ಷಕರೇ ದೇವರು. ಅವರು ಹೇಳಿದಂತೆಯೇ ನಡೆಯುತ್ತದೆ ಎಂದಿದ್ದಾರೆ.

ಮಗಳು ತನ್ವಿ ಇನ್ನೂ ಮದುವೆ ಒಪ್ಪಿಕೊಂಡಿಲ್ಲ. ಈ ವಯಸ್ಸಿನಲ್ಲಿ ಅವಳಿಗೆ ಅದನ್ನುಒಪ್ಪಿಕೊಳ್ಳುವುದು ಕಷ್ಟ. ನಿಧಾನವಾಗಿ ಅವಳ ಮನಸ್ಸನ್ನು ಬದಲಿಸುವ ದೊಡ್ಡ ಚಾಲೆಂಜ್​ ಭಾಗ್ಯ ಎದುರು ಇದೆ ಎಂದಿದ್ದಾರೆ ಸುಷ್ಮಾ ರಾವ್​.

Source link

Leave a Reply

Your email address will not be published. Required fields are marked *