Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಯಾರ ಜೊತೆ ಬದುಕುತ್ತಾಳೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಹೀಗಿರುವಾಗ ಅವಳ ಪ್ರಾಣಕ್ಕೆ ಅಪಾಯ ಬಂದಿದೆ. ಹೌದು, ತಾಂಡವ್ ತನ್ನ ಜೊತೆಗಿಲ್ಲ ಎಂದು ಶ್ರೇಷ್ಠ ಅವಳನ್ನು ಕೊಲ್ಲಲು ನೋಡುತ್ತಿದ್ದಾಳೆ.

ತಾಂಡವ್ ಬದಲಾಗಿದ್ದಾನೆ, ಸೂರ್ಯವಂಶಿ ಮನೆಯನ್ನು ಅವನು ಭಾಗ್ಯ ಹೆಸರಿಗೆ ಬರೆದಿದ್ದಾನೆ. ಎಷ್ಟೇ ಪರೀಕ್ಷೆ ಮಾಡಿದರೂ ಕೂಡ ಅವನು ಮಾತ್ರ ಕುಸುಮಾ ಕಣ್ಣಲ್ಲಿ ಸೋತಿಲ್ಲ. ಆದರೂ ಕೂಡ ಯಾರಿಗೂ ಅವನ ಮೇಲೆ ನಂಬಿಕೆ ಇಲ್ಲದಂತಾಗಿದೆ.

ಯಾರು ಎಷ್ಟೇ ಟೀಕೆ ಮಾಡಿದರೂ, ವ್ಯಂಗ್ಯ ಮಾಡಿದರೂ ಕೂಡ ಸುನಂದಾ, ತನ್ವಿ ಮಾತ್ರ ತಾಂಡವ್‌ನನ್ನು ಬಿಟ್ಟುಕೊಡ್ತಿಲ್ಲ. ಈ ಮಧ್ಯೆ ಮಗಳ ನಂಬಿಕೆ ಉಳಿಸಿಕೊಳ್ಳಬೇಕು, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು, ಶಿಕ್ಷೆ ಆಗಬೇಕು ಎಂದು ತಾಂಡವ್ ಮನಸ್ಸಿನಲ್ಲಿಯೇ ಕೊರಗುತ್ತಿದ್ದಾನೆ.

ತಾಂಡವ್ ತನ್ನ ಜೊತೆ ಬಂದಿಲ್ಲ, ಅವನು ಭಾಗ್ಯ ಜೊತೆ ಬದುಕ್ತಾನೆ ಅಂತ ಶ್ರೇಷ್ಠ ಸಿಟ್ಟಾಗಿದ್ದಾಳೆ. ಒಮ್ಮೆ ಅವಳು ಆತ್ಮ*ಹತ್ಯೆ ಮಾಡಲು ಯೋಚನೆ ಮಾಡಿದ್ದಳು. ಈಗ ಅವಳು ಭಾಗ್ಯಳನ್ನು ಕೊ*ಲ್ಲಲು ನೋಡುತ್ತಿದ್ದಾಳೆ. ಇದು ತಾಂಡವ್‌ಗೆ ಗೊತ್ತಾಗಿದೆ. ಹೊರಗಡೆ ಹೋದ ಭಾಗ್ಯಳನ್ನು ಅವನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಆಗ ಅವಳ ಸ್ಕೂಟರ್ ಹಾಳಾಗಿರೋದು ನೋಡಿ ಸರಿ ಮಾಡುತ್ತಿದ್ದಾನೆ. ಆಗ ಲಾರಿಯೊಂದು ಗುದ್ದಲು ಬಂದಿದೆ. ಭಾಗ್ಯಳನ್ನು ಬದುಕಿಸಲು ಹೋಗಿ ತಾಂಡವ್‌ಗೆ ಅಪಘಾತ ಆಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ.

ತಾಂಡವ್‌ಗೆ ಅಪಘಾತ ಆದರೆ, ಭಾಗ್ಯ ಮನಸ್ಸು ಕೂಡ ಬದಲಾಗಬಹುದು, ಅವಳು ತಾಂಡವ್ ಜೊತೆ ಬದುಕಲು ನೋಡಬಹುದು, ಭಾಗ್ಯಗೆ ಅಪಘಾತ ಆದರೂ ಆಶ್ಚರ್ಯ ಇಲ್ಲ. ಭಾಗ್ಯ ಸಾವಿನೊಂದಿಗೆ ಈ ಸೀರಿಯಲ್ ಅಂತ್ಯ ಆಗತ್ತಾ ಎಂಬ ಪ್ರಶ್ನೆ ಕೂಡ ಇದೆ.

ಭಾಗ್ಯ- ಸುಷ್ಮಾ ಕೆ ರಾವ್

ತಾಂಡವ್- ಸುದರ್ಶನ್ ರಂಗಪ್ರಸಾದ್

ಆದಿ- ಹರೀಶ್ ರಾಜ್

Source link
Bhagyalakshmi Serial: ಭಾಗ್ಯ ಸಾವಿನೊಂದಿಗೆ ಧಾರಾವಾಹಿ ಮುಗಿಸ್ತಾರಾ? ಜ್ಯೋತಿಷಿ ಹೇಳಿದಂತೆ ನಡೀತಿದೆ!