‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಆದಿ ಮದುವೆ ಆಗಲು ಬಂದ ಮೇಘಾಶ್ರೀ; ಹೊಸ ತಿರುವಿಗೆ ವೇದಿಕೆ

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಆದಿ ಮದುವೆ ಆಗಲು ಬಂದ ಮೇಘಾಶ್ರೀ; ಹೊಸ ತಿರುವಿಗೆ ವೇದಿಕೆ


ಕಲರ್ಸ್ ಕನ್ನಡದಲ್ಲಿ ‘ಭಾಗ್ಯಲಕ್ಷ್ಮೀ’ (ಭಾಗ್ಯಲಕ್ಷ್ಮಿ) ಧಾರಾವಾಹಿ ಪ್ರಸಾರ ಕಾಣುತ್ತಿದೆ. ಹೊಸ ಹೊಸ ತಿರುವುಗಳನ್ನು ಸೇರಿಸು ಧಾರಾವಾಹಿ ಈಗ ಬೇರೆಯದೇ ಹಂತಕ್ಕೆ ಹೋಗಿದೆ ಎಂದರೂ ತಪ್ಪಾಗಲಾರದು. ಆದಿ ಹಾಗೂ ಭಾಗ್ಯ ನಡುವೆ ಬಾಂಧವ್ಯ ಬೆಳೆಯುತ್ತಿದೆ. ಹೀಗಿರುವಾಗಲೇ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ದೊಡ್ಡ ತಿರುವೊಂದು ಬಂದಿದೆ. ಕಿರುತೆರೆ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ. ಅವರು ಧಾರಾವಾಹಿಗೆ ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ.

ಬರಲಿರುವ ಎಪಿಸೋಡ್‌ಗಳಲ್ಲಿ ಆದಿಯ ಕುಟುಂಬವು ಅವನ ಮೇಲೆ ಮದುವೆಯ ಒತ್ತಡ ಹೇರುತ್ತದೆ. ಈ ದಿಸೆಯಲ್ಲಿ ಕುಟುಂಬದವರು ಹುಡುಗಿಯನ್ನು ನೋಡಲು ತೆರಳುತ್ತಾರೆ. ಆದಿಗೆ ಹುಡುಗಿ ನೋಡಲು ಮನಸ್ಸಿರುವುದೇ ಇಲ್ಲ. ಈ ರೀತಿ ಬರುವ ಹುಡುಗಿಯೇ ಮೇಘಾಶ್ರೀ.

ಮೇಘಾಶ್ರೀಯನ್ನು ಕರೆದು ಆದಿ ಮಾತನಾಡುತ್ತಾನೆ. ‘ಈ ಮದುವೆ ಬಗ್ಗೆ ನಿರೀಕ್ಷೆ ಬೇಡ. ನನ್ನ ಜೀವನದಲ್ಲೂ ಒಂದು ಕಹಿ ಘಟನೆ ಇದೆ’ ಎಂದು ಆದಿ ವಿವರಣೆ ನೀಡುತ್ತಾನೆ. ಇದನ್ನು ಭಾಗ್ಯ ಹಾಗೂ ಆಕೆಯ ಅತ್ತೆ ಕೇಳಿಸಿಕೊಳ್ಳುತ್ತಾರೆ. ಇದನ್ನು ಮುಂದೇನು ಮಾಡುತ್ತಾನೆ ಎಂಬ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಈ ಭೇಟಿಯು ಅವನ ಬದುಕಿನಲ್ಲಿ ಹೊಸ ತಿರುವು ತರುತ್ತದೆಯೇ?

ಇದನ್ನೂ ಓದಿ: ಭರ್ಜರಿ ಟಿಆರ್‌ಪಿ ಪಡೆದ ‘ಭಾಗ್ಯಲಕ್ಷ್ಮೀ’; ಬಿಗ್ ಬಾಸ್ ಟಿಆರ್ ಪಿ ಎಷ್ಟು?

ಈ ಸಂದರ್ಭದಲ್ಲಿ ಮೇಘಾಶ್ರೀ ಬಳಿ ಆದಿ ಒಮ್ಮೆ ಮನವಿ ಮಾಡಿಕೊಳ್ಳುತ್ತಾನೆ. ನಾನು ಇಷ್ಟ ಆಗಿಲ್ಲ ಎಂದು ಹೇಳಿಕೊಳ್ಳಿ. ಇವರಿಬ್ಬರ ಜೀವನವೂ ಉಳಿಯುತ್ತದೆ ಎಂಬುದು ಆದಿ ಕೋರಿಕೆಯಾಗಿದೆ. ಆದರೆ, ಇದಕ್ಕೆ ಮೇಘಾಶ್ರೀ ಒಪ್ಪುತ್ತಾರಾ ಎಂಬುದೇ ಸದ್ಯದ ಪ್ರಶ್ನೆ. ಆದಿಗೆ ಭಾಗ್ಯಳ ಮೇಲೆ ಪ್ರೀತಿ ಮೂಡುತ್ತಿದೆ. ಆದರೆ, ಭಾಗ್ಯಾ ಈ ಭಾವನೆಯಲ್ಲಿ ಆತನನ್ನು ನೋಡುತ್ತಿಲ್ಲ ಎನ್ನಬಹುದು. ಮತ್ತೊಂದು ಭಾಗ್ಯಾಳ ಪತಿ ತಾಂಡವ್ಗೆ ಎಲ್ಲ ಕಡೆ ಹಿನ್ನಡೆಯೇ ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ‘ಭಾಗ್ಯಲಕ್ಷ್ಮೀ ಪ್ರಸಾರ ಕಾಣುತ್ತಿದೆ. ಈಗ ಈ ಎಪಿಸೋಡ್ ನಿಂದ ಮತ್ತಷ್ಟು ಕುತೂಹಲ ಹೆಚ್ಚುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:41 am, ಮಂಗಳವಾರ, 18 ನವೆಂಬರ್ 25



Source link

Leave a Reply

Your email address will not be published. Required fields are marked *