ಶ್ರೇಷ್ಠಾಳ ನಿಜ ಬಣ್ಣ ಬಯಲಾಗುತ್ತಿದ್ದಂತೆ ತಾಂಡವ್ ಭಾಗ್ಯಳಲ್ಲಿ ಕ್ಷಮೆ ಕೋರಿದ್ದಾನೆ. ಇನ್ನೊಂದೆಡೆ ಅತ್ತೆ ಕುಸುಮಾ, ಆದಿ ಜೊತೆ ಭಾಗ್ಯಳ ಮದುವೆಗೆ ಮುಂದಾಗಿದ್ದು, ಈ ನಡುವೆ ತಾಂಡವ್ ಜೊತೆಗಿನ ಭಾಗ್ಯಳ ವಿಡಿಯೋವೊಂದು ವೈರಲ್ ಆಗಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್ ಮುಗಿಯುವ ಹಂತಕ್ಕೆ ಬಂದಂತೆ ಕಾಣಿಸುತ್ತಿದ್ದರೂ ಇದರ ಅಂತ್ಯವನ್ನು ಊಹಿಸಿಕೊಳ್ಳುವುದೂ ಕಷ್ಟವಾಗಿದೆ.

ತಾಂಡವ್ಗೆ ಶ್ರೇಷ್ಠಾಳ ದುಷ್ಟಬುದ್ಧಿ ತಿಳಿದಿದೆ. ಇದೇ ಕಾರಣಕ್ಕೆ, ಆತ ಭಾಗ್ಯಳ ಕಾಲುಬಿದ್ದು ಕ್ಷಮೆ ಕೋರುತ್ತಿದ್ದಾನೆ. ಅದೇ ಇನ್ನೊಂದೆಡೆ ಆದಿ ಭಾಗ್ಯಳ ಮೇಲೆ ಅಪಾರ ಪ್ರೀತಿಯನ್ನೇ ಇಟ್ಟುಕೊಂಡಿದ್ದಾನೆ. ಭಾಗ್ಯಂಗೆ ಕೂಡ ಆದಿಯ ಮೇಲೆ ಪ್ರೀತಿ ಹುಟ್ಟಿದರೂ, ಈ ವಯಸ್ಸಿನಲ್ಲಿ 2ನೇ ಮದ್ವೆಯಾದ್ರೆ ಯಾರು ಏನು ಹೇಳ್ತಾರೆ ಎನ್ನುವ ಚಿಂತೆ.

ತಾಂಡವ್ ಎಷ್ಟೇ ನೀಚನಾದರೂ, ಆತನ ಜೊತೆ ಸಂಸಾರ ಮಾಡಿಕೊಂಡು ಹೋಗುವುದು ಭಾಗ್ಯಳ ಕರ್ತವ್ಯ ಎನ್ನುವುದು ಹಲವು ತಾಯಂದಿರ ರೀತಿಯಲ್ಲಿ ಭಾಗ್ಯಳ ಅಮ್ಮ ಸುನಂದಾ ಯೋಚಿಸುತ್ತಿದ್ದರೆ, ಆದಿಯ ಜೊತೆ ಭಾಗ್ಯಳ ಮದುವೆ ಮಾಡಿಸಲು ಅತ್ತೆ ಕುಸುಮಾ ಮುಂದಾಗಿದ್ದಾಳೆ.

ಮುಂದೆ ಏನಾಗುತ್ತದೆಯೋ ಎನ್ನುವ ಕುತೂಹಲವಿದೆ. ಭಾಗ್ಯ ತಾಂಡವ್ನನ್ನು ಆಯ್ಕೆ ಮಾಡಿಕೊಳ್ಳಬಾರದು. ಆದಿನೇ ಬೆಸ್ಟ್ ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಇದರ ನಡುವೆಯೇ, ಭಾಗ್ಯಳ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಆಕೆ ತಾಂಡವ್ ಜೊತೆ ಜಾಲಿಮೂಡ್ನಲ್ಲಿ ಇರುವಂತೆ ಕಾಣಿಸುತ್ತಿದೆ.

ಅಷ್ಟಕ್ಕೂ ಇದೇನು ಸೀರಿಯಲ್ ವಿಷಯವಲ್ಲ. ಬದಲಿಗೆ ಭಾಗ್ಯಲಕ್ಷ್ಮಿ ಪಾತ್ರಧಾರಿ ಸುಷ್ಮಾ ಕೆ. ರಾವ್ ಅವರು ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಅವರ ಜೊತೆ ಶೂಟಿಂಗ್ ಬಿಡುವಿನ ಸಮಯದಲ್ಲಿ ಮಾಡುತ್ತಿರುವ ತಮಾಷೆಯಷ್ಟೇ. ಇದರ ವಿಡಿಯೋ ವೈರಲ್ ಆಗುತ್ತಲೇ, ಆದಿಯನ್ನು ಬಿಡಬೇಡಿ ಪ್ಲೀಸ್ ಎಂದು ನೆಟ್ಟಿಗರು ಕಮೆಂಟ್ ಹಾಕುತ್ತಿದ್ದಾರೆ.

Source link
ಬದಲಾಯ್ತು Bhagyalakshmi ಗೆಟಪ್: ಇದೇನಿದು, ಆದಿಗೆ ಕೈಕೊಟ್ಟು ತಾಂಡವ್ ಜೊತೆ ಹೋಗಿಬಿಟ್ಟಳಾ?