17

Image Credit : jiohotstar
ಇನ್ನೂ ನಾಲ್ಕೈದು ವರ್ಷ
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ವೀಕ್ಷಕರಿಗೆ ತಿಳಿದಿರುವಂತೆ ಸದ್ಯದ ಪರಿಸ್ಥಿತಿ ನೋಡಿದರೆ, ಇನ್ನೂ ನಾಲ್ಕೈದು ವರ್ಷ ಈ ಸೀರಿಯಲ್ ಮುಗಿಯುವಂತೆ ಕಾಣಿಸುವುದಿಲ್ಲ. ಕಥೆ ಬೆಳೆಯುತ್ತಲೇ ಸಾಗಿದೆ.
27
Image Credit : jiohotstar
ಎಳೆಯುತ್ತಿರುವ ಸ್ಟೋರಿ
ಟಿಆರ್ಪಿ ಹೆಚ್ಚಿರುವ ಕಾರಣದಿಂದ ಕಥೆಯನ್ನು ಎಳೆಯಲಾಗುತ್ತಿದೆ ಎನ್ನುವುದು ಸತ್ಯವಾದರೂ, ಟ್ವಿಸ್ಟ್ ಮೇಲೆ ಟ್ವಿಸ್ಟ್ ತಂದು ಈ ಸೀರಿಯಲ್ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿರುವುದೂ ಅಷ್ಟೇ ಸತ್ಯ.
37
Image Credit : Instagram
ಅತಿಯಾದ ಗೋಳು
ಭಾಗ್ಯಳ ಅತಿಯಾದ ಗೋಳು, ತಾಂಡವ್ನ ಅತಿಯಾದ ಕ್ರೂರತನ ಹಲವು ಬಾರಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವುದು ಇದೆ. ಇನ್ನೇನು ಒಳ್ಳೆಯದಾಗುತ್ತದೆ ಎಂದಾಗ ಮತ್ತದೇ ಕೆಟ್ಟ ಸ್ಥಿತಿ. ಅದೇ ಇನ್ನೊಂದೆಡೆ ವಿಲನ್ ಆಗಿರೋ ತಾಂಡವ್ನ ಅತಿಯಾದ ಕ್ರೂರತನ.
47
Image Credit : Instagram
ನಿಷ್ಕಲ್ಮಷ ಸ್ನೇಹ
ಇದರ ನಡುವೆಯೇ ಆದಿ ಎಂಟ್ರಿ ಆಗಿದೆ. ಆದಿ ಮತ್ತು ಭಾಗ್ಯ ಮದುವೆಯಾಗಬೇಕು ಎಂದು ಕೆಲವರು ಬಯಸಿದರೆ, ಇವರ ನಿಷ್ಕಲ್ಮಷ ಸ್ನೇಹ ಹಾಗೆಯೇ ಮುಂದುವರೆಯಲಿ ಎಂದು ಹಾರೈಸುವವರು ಇನ್ನು ಕೆಲವರು.
57
Image Credit : Instagram
ಎಲ್ಲರೂ ಒಟ್ಟಿಗೇ…
ಇದರ ನಡುವೆಯೇ ಈಗ ಭಾಗ್ಯ, ಆದಿ, ತಾಂಡವ್, ಶ್ರೇಷ್ಠಾ ಎಲ್ಲರೂ ಒಟ್ಟಿಗೇ ಇರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಸೀರಿಯಲ್ ಮುಗಿದಿದೆ ಎಂದುಕೊಳ್ಳಬೇಡಿ ಮತ್ತೆ. ಇದು ರೀಲ್ಸ್ ಅಷ್ಟೇ.
67
Image Credit : Instagram
ಭಾಗ್ಯ ರೀಲ್ಸ್
ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಅವರು ಬಿಡುವಿನ ಸಂದರ್ಭದಲ್ಲಿ ತಮ್ಮ ಸೀರಿಯಲ್ ತಂಡದಿಂದ ತರ್ಲೆ ಮಾಡುತ್ತಲೇ ರೀಲ್ಸ್ ಮಾಡುವುದು, ಹಾಡಿಗೆ ಸ್ಟೆಪ್ ಹಾಕುವುದು ಇದೆ. ಅದೇ ರೀತಿ ಇನ್ನೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಅಷ್ಟೇ.
77
Image Credit : Instagram
ತಾಂಡವ್ ತರ್ಲೆ
ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್, ಈ ಸೀರಿಯಲ್ನಲ್ಲಿ ಎಷ್ಟು ಕ್ರೂರಿಯೋ, ಸೀರಿಯಲ್ ಆಚೆಗೆ ಬಂದಾಗ ಅಷ್ಟೇ ಜಾಲಿ ಮೂಡ್ನಲ್ಲಿ ಇರುತ್ತಾರೆ. ರೀಲ್ಸ್ ಮಾಡುವಾಗಲೆಲ್ಲಾ ತರ್ಲೆ ಮಾಡುತ್ತಲೇ ಇರುತ್ತಾರೆ. ಇದನ್ನೂ ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.