Headlines

Bhagyalakshmi ಯಾರೂ ಊಹಿಸದ ಟ್ವಿಸ್ಟ್​: ಬಹು ದೊಡ್ಡ ತೀರ್ಮಾನ ತೆಗೆದುಕೊಂಡ ಆದಿ- ಏನದು? | Bhagyalakshmi Serial Twist Adi Handover His Office To Sister Suc

Bhagyalakshmi ಯಾರೂ ಊಹಿಸದ ಟ್ವಿಸ್ಟ್​: ಬಹು ದೊಡ್ಡ ತೀರ್ಮಾನ ತೆಗೆದುಕೊಂಡ ಆದಿ- ಏನದು? | Bhagyalakshmi Serial Twist Adi Handover His Office To Sister Suc


17

ರೋಲ್​ ಮಾಡೆಲ್​

Image Credit : Instagram

ರೋಲ್​ ಮಾಡೆಲ್​

ಭಾಗ್ಯಲಕ್ಷ್ಮಿ (Bhagyalakshmi) ಸೀರಿಯಲ್​ನಲ್ಲಿ ಸದ್ಯ ಆದಿ ತನ್ನ ಹಿಂದಿನ ನೋವನ್ನೆಲ್ಲಾ ಮರೆತು ಮುಂದುವರೆಯಲು ಇಷ್ಟಪಡುತ್ತಿದ್ದಾನೆ. ಭಾಗ್ಯಳೇ ಆತನಿಗೆ ರೋಲ್​ ಮಾಡೆಲ್​. ಆಕೆಯಂತೆಯೇ ಬದುಕುವ ಪಣ ತೊಟ್ಟಿದ್ದಾನೆ ಆದಿ!

27

ಅಮ್ಮನ ಪ್ರೀತಿ

Image Credit : Instagram

ಅಮ್ಮನ ಪ್ರೀತಿ

ಭಾಗ್ಯಳಲ್ಲಿ ತನ್ನ ಸತ್ತುಹೋಗಿರುವ ಅಮ್ಮನ ಪ್ರೀತಿ ಕಾಣುತ್ತಿದ್ದಾನೆ ಆದಿ. ಆಕೆಯಂತೆಯೇ ಸ್ವಾವಲಂಬನೆಯ ಬದುಕು ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಇದೇ ಕಾರಣಕ್ಕೆ ಇದೀಗ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾನೆ.

37

ತಂಗಿಗೆ ಕಂಪೆನಿ

Image Credit : Instagram

ತಂಗಿಗೆ ಕಂಪೆನಿ

ತನ್ನ ಸಾವಿರಾರು ಕೋಟಿ ರೂಪಾಯಿಗಳ ಕಂಪೆನಿಯನ್ನು ತಂಗಿ ಕನ್ನಿಕಾಗೆ ಬಿಟ್ಟುಕೊಟ್ಟು ಜೀರೋದಿಂದ ಹೀರೋ ಆಗುತ್ತೇನೆ ಎಂದು ಹೊರಟೇ ಬಿಟ್ಟಿದ್ದಾನೆ ಆದಿ.

47

ಸ್ವಾವಲಂಬಿ ಬದುಕು

Image Credit : Instagram

ಸ್ವಾವಲಂಬಿ ಬದುಕು

ನನಗೆ ಭಾಗ್ಯಳೇ ಇನ್​ಸ್ಪಿರೇಷನ್​. ಯಾರ ಸಹಾಯವೂ ಇಲ್ಲದೇ ಆಕೆ ಹೇಗೆ ಬದುಕುತ್ತಿದ್ದಾರೆ, ಅದೇ ರೀತಿ ನಾನೂ ಸ್ವಾವಲಂಬಿಯಾಗಿ ಬದುಕಬೇಕು ಎಂದಿದ್ದಾನೆ ಆದಿ.

57

ಕನ್ನಿಕಾ ಖುಷಿ

Image Credit : Instagram

ಕನ್ನಿಕಾ ಖುಷಿ

ಕಂಪೆನಿಯನ್ನು ತನ್ನ ಹೆಸರಿಗೆ ಬಿಟ್ಟುಕೊಟ್ಟಿದ್ದಕ್ಕೆ ಕನ್ನಿಕಾ ಖುಷಿಯಿಂದ ಕುಣಿದಾಡುತ್ತಿದ್ದಾಳೆ. ಇನ್ನು ಆಕೆಯ ಕಂಪೆನಿಯ ಒಡತಿ ಎಂದು ತಿಳಿದರೆ ಶ್ರೇಷ್ಠಾ ಮತ್ತು ತಾಂಡವ್​ ಕಂಪೆನಿಗೆ ವಾಪಸ್​ ಆಗುವ ಸಾಧ್ಯತೆಯೂ ಇದೆ. ಆದರೆ ಭಾಗ್ಯನೇ ಇಲ್ಲ ಎಂದ ಮೇಲೆ ಕನ್ನಿಕಾ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಾಳೋ ಕಾದು ನೋಡಬೇಕಿದೆ.

67

ಭಾಗ್ಯಳ ಹಿಂದೆ ಆದಿ

Image Credit : Instagram

ಭಾಗ್ಯಳ ಹಿಂದೆ ಆದಿ

ಅದೇ ಇನ್ನೊಂದೆಡೆ, ವಾಹಿನಿ ಶೇರ್​ ಮಾಡಿರುವ ಪ್ರೊಮೋದಲ್ಲಿ ಭಾಗ್ಯ ಟೂ ವ್ಹೀಲರ್​ ಓಡಿಸಿಕೊಂಡು ಹೋಗುತ್ತಿದ್ದರೆ, ಆದಿ ಹಿಂದೆ ಕುಳಿತಿದ್ದಾನೆ. ಅಲ್ಲಿಗೆ ಅವರಿಬ್ಬರ ಹೊಸ ಅಧ್ಯಾಯ ಆರಂಭವಾಗಲಿದೆ.

77

ಮದುವೆ ಬೇಡ

Image Credit : Instagram

ಮದುವೆ ಬೇಡ

ಅಷ್ಟಕ್ಕೂ ಇವರಿಬ್ಬರೂ ಹೀಗೆ ಸ್ನೇಹಿತರಾಗಿದ್ದರೆ ಚೆನ್ನ. ಅವರನ್ನು ಮದುವೆ ಮಾಡಬೇಡಿ ಎಂದು ಇದಾಗಲೇ ವೀಕ್ಷಕರು ಕೂಡ ಅಭಿಪ್ರಾಯ ಪಡುತ್ತಿದ್ದಾರೆ. ಇವರ ಸ್ನೇಹ ನೋಡುವುದಕ್ಕೆ ಖುಷಿಯಾಗುತ್ತದೆ. ಮದುವೆ ಎನ್ನುವ ಬಂಧದಲ್ಲಿ ಕಟ್ಟಿಹಾಕಿ ಸಂಬಂಧ ಹಾಳು ಮಾಡಬೇಡಿ ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *