ನವದೆಹಲಿ, ಫೆಬ್ರುವರಿ 24: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನಿನ್ನೆ ಸೋಮವಾರ (ಫೆ. 23) ಭಾರತ್ ಟ್ಯಾಕ್ಸಿ (ಭಾರ ಟ್ಯಾಕ್ಸಿ) ಸೇವೆಗೆ ಚಾಲನೆ ನೀಡಿದ್ದಾರೆ. ಅಮೂಲ್ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಸೇರಿ ಕಟ್ಟಿರುವ ಕಂಪನಿ ಇದು. ಅಮೂಲ್ನ ರೀತಿಯಲ್ಲೇ ಭಾರತ್ ಟ್ಯಾಕ್ಸಿಯ ಬ್ಯೂಸಿನೆಸ್ ಮಾಡಲ್ ಇದೆ. ಅಮುಲ್ ನಲ್ಲಿ ಹಾಲು ಉತ್ಪಾದಕರೇ ಮಾಲೀಕರಾಗಿದ್ದಾರೆ. ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಆಗಿರುತ್ತಾರೆ.
ಏನಿದು ಭಾರತ್ ಟ್ಯಾಕ್ಸಿ?
ಓಲಾ, ಊಬರ್, ರಾಪಿಡೋ, ನಮ್ಮ ಯಾತ್ರಿ ರೀತಿಯಲ್ಲಿ ಭಾರತ್ ಟ್ಯಾಕ್ಸಿ ಒಂದು ರೇಡ್ ಹೈಲಿಂಗ್ ಪ್ಲಾಟ್ಫಾರ್ಮ್ ಆಗಿದೆ. ಓಲಾ, ಊಬರ್, ರಾಪಿಡೋ ಕಂಪನಿಗಳು ಡ್ರೈವರ್‌ಗಳಿಂದ ಪ್ರತೀ ರೇಡ್‌ನಲ್ಲಿ ಶೇ. 30ರಷ್ಟು ಕಮಿಷನ್ ಪಡೆಯುತ್ತವೆ. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಈ ಕಮಿಷನ್ ಮಾಡಲ್ ಇರೋದಿಲ್ಲ. ರೆಡ್‌ನಲ್ಲಿ ಬರುವ ಹಣವೆಲ್ಲವೂ ಚಾಲಕರಿಗೆಯೇ ಸಂದಾಯವಾಗುತ್ತದೆ.
ಇದನ್ನೂ ಓದಿ: ನಿಷ್ಕ್ರಿಯ ಐಪಿಎಫ್ ಖಾತೆಯಲ್ಲಿ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ?
ಜೊತೆಗೆ, ಊಬರ್, ಓಲಾ, ರಾಪಿಡೋದಲ್ಲಿ ಚಾಲಕರಿಗೆ ಕನಿಷ್ಠ ದರ (ಮಿನಿಮಮ್ ಬೇಸ್ ರೇಟ್) ನಿಗದಿಪಡಿಸಲಾಗಿಲ್ಲ. ಅಂದರೆ, ಒಂದು ರೆಡ್‌ನಲ್ಲಿ ಕನಿಷ್ಠ ಖಾತ್ರಿ ದರ ಎಂಬುದು ಡ್ರೈವರ್‌ಗೆ ಖಾತ್ರಿ ಇರುವುದಿಲ್ಲ. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಇಂಥ ಫೀಚರ್ ಅನ್ನು ಅಳವಡಿಸಲಾಗಿದೆ.
ಭಾರತ್ ಟ್ಯಾಕ್ಸಿಗೆ ಆದಾಯ ಹೇಗೆ?
ಭಾರತ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ಗೆ ಜೋಡಿತ ಆಗಬಯಸುವ ಚಾಲಕರು 500 ರೂ ಮೌಲ್ಯದ ಷೇರುಗಳನ್ನು ಖರೀದಿಸಬೇಕು. ಇದು ಭಾರತ್ ಟ್ಯಾಕ್ಸಿಯಲ್ಲಿ ಚಾಲಕರಿಗೆ ಒಂದು ಸಣ್ಣ ಪಾಲು ಸಿಗುತ್ತದೆ. ಈ ಮೂಲಕ ಅವರು ಸಹ-ಮಾಲೀಕರಾದಂತೆ.
ಭಾರತ್ ಟ್ಯಾಕ್ಸಿ ಸಂಸ್ಥೆಯು ಮುಂದೆ ಲಾಭ ಗಳಿಸುತ್ತಾ ಹೋದಂತೆ, ಲಾಭದಲ್ಲಿ ಸಿಂಹಪಾಲನ್ನು ಚಾಲಕರಿಗೆ ಮರಳಿಸಲಾಗುವುದು. ನೂರು ರೂ ಲಾಭದಲ್ಲಿ 80 ರೂ ಅನ್ನು ಚಾಲಕರಿಗೆ ಕೊಡದಿದ್ದರೆ. ಉಳಿದ ಶೇ. 20ರಷ್ಟನ್ನು ಪ್ಲಾಟ್‌ಫಾರ್ಮ್ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ.
ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚಾಟ್ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್ ಮ್ಯಾನ್ ಸಲಹೆ ಕೇಳಿ
ಇಲ್ಲಿ ಲಾಭದಲ್ಲಿ ಚಾಲಕರೆಲ್ಲರಿಗೆ ಸಮಾನವಾಗಿ ಹಂಚಲಾಗಿದೆ. ಚಾಲಕರು ಅವರು ಕ್ರಮಿಸಿರುವ ದೂರಕ್ಕೆ ಲಾಭ ಹಂಚಿಕೆಯಾಗುತ್ತದೆ.
ಭಾರತ್ ಟ್ಯಾಕ್ಸಿ ಸದ್ಯ ದೆಹಲಿ ಎನ್ ಸಿಆರ್ ಮತ್ತು ರಾಜಕೋಟ್ ಈ ಎರಡು ನಗರಗಳಲ್ಲಿ ಚಾಲನೆಯಲ್ಲಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿ ಇದರ ಸೇವೆ ಬರಲಿದೆ. ಕೋಟಿಗೂ ಅಧಿಕ ಚಾಲಕರನ್ನು ಈ ಸೇವೆಗೆ ಜೋಡಿಸಿಕೊಳ್ಳುವ ಗುರಿ ಇದೆ. ಜೊತೆಗೆ, ಸಹಕಾರ ತತ್ವದಲ್ಲಿ ಪ್ರಾರಂಭವಾಗಿರುವ ಮೊದಲ ಟ್ಯಾಕ್ಸಿ ಕಂಪನಿ ಇದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ