ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡು ಜನಪ್ರಿಯವಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ, ‘ಭಾರ್ಗವಿ ಎಲ್ಎಲ್ಬಿ’ ಸೀರಿಯಲ್ ಖ್ಯಾತಿಯ ರಾಧಾ ಭಗವತಿ ಮತ್ತು ಮನೋಜ್ ಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರ ನಾಳೆ ಅಂದರೆ ಡಿಸೆಂಬರ್ 25ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ಚಿತ್ರದ ಮಸ್ತ್ ಮಲೈಕಾ ಹಾಡು ಇದಾಗಲೇ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ. ಕೆಲವರು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.

ಆದರೆ ಚಿತ್ರದ ಪ್ರಮೋಷನ್ ಆಗಬೇಕು ಎಂದರೆ ಕಿರುತೆರೆಯ ಸೆಲೆಬ್ರಿಟಿಗಳಿಂದ ಹಾಡುಗಳಿಗೆ ಸ್ಟೆಪ್ ಹಾಕಿಸಲಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಸಿನಿಮಾಗಳು ಹಿಟ್ ಆಗಬೇಕು ಎಂದರೆ ಮೊದಲು ಅವುಗಳ ಹಾಡುಗಳು ಕ್ರೇಜ್ ಹುಟ್ಟಿಸಬೇಕು. ಇದೇ ಕಾರಣಕ್ಕೆ ಜನರಿಗೆ ಅತ್ಯಂತ ಹತ್ತಿರವಾಗಿರುವ ಕಿರುತೆರೆ ಕಲಾವಿದರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತದೆ.

ಇದೀಗ ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಹಾಡಿಗೆ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಖ್ಯಾತಿಯ ಭಾರ್ಗವಿ ಮತ್ತು ಅರ್ಜುನ್ ಜೋಡಿ ಅರ್ಥಾತ್ ರಾಧಾ ಭಗವತಿ ಮತ್ತು ಮನೋಜ್ ಕುಮಾರ್ ಅವರು ಸಕತ್ ಸ್ಟೆಪ್ ಹಾಕಿದ್ದಾರೆ.

ಇವರಿಬ್ಬರೂ ಒರಿಜಿನಲ್ ಡಾನ್ಸ್ನಂತೆಯೇ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಒರಿಜಿನಲ್ ಸಾಂಗ್ನಲ್ಲಿ ನಿಶ್ವಿಕಾ ನಾಯ್ಡು ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರೆ, ಇಲ್ಲಿ ಭಾರ್ಗವಿ ಅರ್ಥಾತ್ ರಾಧಾ ಭಗವತಿ ಅವರು ಸೀರೆಯುಟ್ಟು ಹೆಜ್ಜೆ ಹಾಕಿದ್ದಾರೆ.

Source link
Mark ಚಿತ್ರದ 'ಮಸ್ತ್ ಮಲೈಕಾ' ಹಾಡಿಗೆ Bhargavi LLB ಭಾರ್ಗವಿ-ಅರ್ಜುನ್ ಭರ್ಜರಿ ಸ್ಟೆಪ್