ರೊಮಾನ್ಸ್​, ಕಿಸ್​, ಸ್ಕಿನ್​ ಷೋ ಬ್ಯಾನ್​: Amrthadhaare ಜೈ ಭಾವಿ ಪತ್ನಿ ನಟಿ ರಾಧಾ ಭಗವತಿ ಹೇಳಿದ್ದೇನು

ರೊಮಾನ್ಸ್​, ಕಿಸ್​,  ಸ್ಕಿನ್​ ಷೋ ಬ್ಯಾನ್​:  Amrthadhaare ಜೈ ಭಾವಿ ಪತ್ನಿ ನಟಿ ರಾಧಾ ಭಗವತಿ ಹೇಳಿದ್ದೇನು

ರೊಮಾನ್ಸ್​, ಕಿಸ್​,  ಸ್ಕಿನ್​ ಷೋ ಬ್ಯಾನ್​:  Amrthadhaare ಜೈ ಭಾವಿ ಪತ್ನಿ ನಟಿ ರಾಧಾ ಭಗವತಿ ಹೇಳಿದ್ದೇನು

’ಅಮೃತಧಾರೆ’ ಖ್ಯಾತಿಯ ರಾಣವ್ ಗೌಡ ಅವರನ್ನು ವರಿಸಲಿರುವ ‘ಭಾರ್ಗವಿ ಎಲ್ಎಲ್​ಬಿ’ ನಟಿ ರಾಧಾ ಭಗವತಿ, ತಮ್ಮ ಸಿನಿಮಾ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ. ಮದುವೆಯ ನಂತರ ಸಿನಿಮಾಗಳಲ್ಲಿ ರೊಮ್ಯಾನ್ಸ್, ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಪ್ರಶ್ನೆ ಎದುರಾದಾಗ ನಟಿ ಹೇಳಿದ್ದೇನು?

ಭಾರ್ಗವಿ ಎಲ್​ಎಲ್​ಬಿಯಲ್ಲಿ ಭಾರ್ಗವಿ ಆಗಿ ಮಿಂಚುತ್ತಿರೋ ನಟಿ ರಾಧಾ ಭಗವತಿ ಅವರು ಇನ್ನು ಕೆಲವೇ ದಿನಗಳಲ್ಲಿ ಅಮೃತಧಾರೆ ಜೈದೇವ್​ ಉರ್ಫ್​ ರಾಣವ್​ ಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದಾಗಲೇ ಇವರಿಬ್ಬರೂ ಲವ್​ ಮಾಡಿ, ಎಂಗೇಜ್​ಮೆಂಟ್ ಕೂಡ ಆಗಿದ್ದು, ಮದುವೆಯ ಡೇಟ್​ ಫಿಕ್ಸ್​ ಆಗಿದೆ. ಅದಿನ್ನೂ ಸಾರ್ವಜನಿಕವಾಗಿ ರಿವೀಲ್ ಆಗಬೇಕಿದೆಯಷ್ಟೇ.

ಅಷ್ಟಕ್ಕೂ ಹಿಂದೊಮ್ಮೆ ರಾಣವ್​ ಅವರು ತಮಗೆ ಎಂಥ ಹುಡುಗಿ ಬೇಕು ಎಂದು ಸಂದರ್ಶನವೊಂದರಲ್ಲಿ ಹೇಳುವಾಗ, ಆಕೆಯನ್ನು ನೋಡಿದರೆ ಅಮ್ಮನನ್ನೇ ಕಾಣಬೇಕು ಎಂದಿದ್ದರು. ಜೊತೆಗೆ ಈಗಿನ ಹುಡುಗಿಯರು ದೇವಸ್ಥಾನಕ್ಕೆ ಹೋಗುವಾಗ ಷಾರ್ಟ್ಸ್​ ಹಾಕಿ ಹೋಕ್ತಾರೆ. ಆ ಸೆನ್ಸ್​ ಕೂಡ ಇರಲ್ಲ ಎನ್ನುವ ಮೂಲಕ ತಮಗೆ ಯಾವ ರೀತಿಯ ಹುಡುಗಿ ಬೇಕು ಎಂದು ಹೇಳಿದ್ದರು.

ಅದೇ ರೀತಿಯ ಹುಡುಗಿಯೇ ರಾಧಾ ಭಗವತಿ ಅವರು. ರಾಧಾ ಅವರು ಇದಾಗಲೇ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ. ʻನಾನು ಕರುಣಾಕರʼ ಸಿನಿಮಾದಲ್ಲಿ ರಾಧಾ ಭಗವತಿ ನಟಿಸಿದ್ದಾರೆ. ಏಪ್ರಿಲ್‌ 3ಕ್ಕೆ ಈ ಸಿನಿಮಾ ರಿಲೀಸ್‌ ಆಗ್ತಿದೆ. ಈ ಹಿಂದೆ ʻಅಪಾಯವಿದೆ ಎಚ್ಚರಿಕೆʼ ಸಿನಿಮಾದಲ್ಲಿ ರಾಧಾ ಭಗವತಿ ನಟಿಸಿದ್ದರು.

ಸಿನಿಮಾದಲ್ಲಿ ನೆಲೆಯೂರಬೇಕು ಎಂದರೆ ಎಲ್ಲದ್ದಕ್ಕೂ ನಟಿಯರು ರೆಡಿಯಾಗಿರಬೇಕು ಎನ್ನುವ ಮಾತಿದೆ. ಎಲ್ಲದ್ದಕ್ಕೂ ಎನ್ನುವ ಹಿಂದೆ ವಿಶಾಲ ಅರ್ಥವಿದೆ. ಅದರಲ್ಲಿ ಒಂದು ಧಾರಾಳ ದೇಹ ಪ್ರದರ್ಶನವೂ ಆಗಿದ್ದು, ಇದಾಗಲೇ ಜಿದ್ದಿಗೆ ಬಿದ್ದವರಂತೆ ಹಲವು ನಟಿಯರು ದೇಹ ಪ್ರದರ್ಶನದಲ್ಲಿ ಪೈಪೋಟಿ ಒಡ್ಡುತ್ತಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ನಟಿ ರಾಧಾ ಭಗವತಿ ಅವರಿಗೆ ಅದೇ ಪ್ರಶ್ನೆ ಎದುರಾಗಿದೆ. ರೊಮಾನ್ಸ್​, ಕಿಸ್ಸಿಂಗ್​ ದೃಶ್ಯಗಳಿಗೆ ಭಾವಿ ಪತಿ ರಾಣವ್ ಅವರು ಏನಾದರೂ ರಿಸ್ಟ್ರಿಕ್ಷನ್​ ಮಾಡಿದ್ದಾರಾ ಎನ್ನುವ ಪ್ರಶ್ನೆಗೆ ರಾಧಾ ಅವರು ನೇರವಾಗಿ, ಅವರಲ್ಲ, ನಾನೇ ಅಂಥ ದೃಶ್ಯ ಮಾಡುವುದಿಲ್ಲ ಎಂದಿದ್ದಾರೆ.

ರೊಮಾನ್ಸ್, ಕಿಸ್ಸಿಂಗ್​, ದೇಹ ಪ್ರದರ್ಶನ ಇದ್ಯಾವುದನ್ನೂ ನಾನು ಒಪ್ಪುವವಳಲ್ಲ. ಅಂಥ ದೃಶ್ಯಗಳು ಇದ್ದರೆ ಸಿನಿಮಾಕ್ಕೆ ಹೋಗುವುದಿಲ್ಲ. ನನಗೆ ನಾನೇ ಈ ಎಲ್ಲವುಗಳಿಂದ ರಿಸ್ಟ್ರಿಕ್ಷನ್​ ಹಾಕಿಕೊಂಡಿದ್ದೇನೆ. ಅಷ್ಟಕ್ಕೂ ಯಾವ ಪತಿಗೂ ಅಂಥದ್ದು ಇಷ್ಟವಾಗಲ್ಲ. ಆದರೆ ನಾನೇ ಆ ರೀತಿ ನಿರ್ಬಂಧ ವಿಧಿಸಿಕೊಂಡಿರೋ ಕಾರಣ, ರಾಣವ್​ ಅವರು ಈ ಬಗ್ಗೆಹೇಳುವ ಮಾತೇ ಇಲ್ಲ ಎಂಮದಿದ್ದಾರೆ.

Source link

Leave a Reply

Your email address will not be published. Required fields are marked *