’ಅಮೃತಧಾರೆ’ ಧಾರಾವಾಹಿಯ ಖಳನಾಯಕ ಜೆಡಿ ಅಲಿಯಾಸ್ ರಾಣವ್ ಗೌಡ, ಹಿಂದೆ ಮಲ್ಲಿ ಪಾತ್ರ ನಿರ್ವಹಿಸಿದ್ದ ರಾಧಾ ಭಗವತಿ ಜೊತೆ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ, ತಮಗೆ ತನ್ನ ಅಮ್ಮನಂತೆ ಸಂಪ್ರದಾಯಸ್ಥ ಹುಡುಗಿ ಬೇಕು ಎಂದು ರಾಣವ್ ಹೇಳಿಕೊಂಡಿದ್ದರು.

ವಿಲನ್ ಆದ್ರೂ ಹೆಣ್ಣುಮಕ್ಕಳ ಫೆವರೇಟ್ ನಟನಲ್ಲಿ ಒಬ್ಬರು ಯಂಗ್ ಆ್ಯಂಡ್ ಹ್ಯಾಂಡಸಮ್ ಆಗಿರೋ ನಟ ರಾಣವ್ ಗೌಡ. ರಾಣವ್ ಎಂದರೆ ಬಹುಶಃ ಬಹುತೇಕರಿಗೆ ಅರ್ಥವಾಗಲಿಕ್ಕಿಲ್ಲ. ಇವರೇ ಅಮೃತಧಾರೆ JD ಉರ್ಫ್ ಜೈ ಉರ್ಫ್ ಜೈದೇವ್. ಜೈದೇವ್ ಕ್ಯಾರೆಕ್ಟರ್ ಅನ್ನು ಶಪಿಸುವವರೂ ಜೈದೇವ್ ನಟನೆಗೆ ಜೈಜೈ ಎನ್ನುತ್ತಲೇ ಅವರ ಫೆವರೆಟ್ ಆಗಿದ್ದಾರೆ. ಇನ್ನು ಯುವತಿಯರಿಗಂತೂ ಜೈದೇವ್ ಅಂದ್ರೆ ರಾಣವ್ ಅವ್ರು ಕ್ರಷ್ ಆಗಿಬಿಟ್ಟಿದ್ದಾರೆ.

ಇನ್ನು, ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial) ಅಕ್ಕಾವ್ರೇ ಅಕ್ಕಾವ್ರೇ ಎನ್ನುತ್ತಲೇ ಎಲ್ಲರನ್ನೂ ಮೋಡಿ ಮಾಡಿದಾಗ ಮಲ್ಲಿ. ಕೊನೆಗೆ ಮನೆ ಮಾಲೀಕನ ಮಗ ಜೈದೇವ್ನ ಮೋಸದ ಜಾಲಕ್ಕೆ ಬಿದ್ದು ಗರ್ಭಿಣಿಯಾಗಿದ್ದು ಸೀರಿಯಲ್ ಪ್ರಿಯರಿಗೆ ತಿಳಿದದ್ದೇ. ಆಗ ಮಲ್ಲಿಯಾಗಿದ್ದವರು ರಾಧಾ ಭಗವತಿ. ಅವರೀಗ ರಿಯಲ್ ಲೈಫ್ನಲ್ಲಿ ಅದೇ ಜೈದೇವ್ ಅರ್ಥಾತ್ ನಟ ರಾಣವ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಮಲ್ಲಿಯ ರೋಲ್ ಸೈಡ್ ರೋಲ್ ಆಗಿದ್ದ ಹಿನ್ನೆಲೆಯಲ್ಲಿ, ಮಲ್ಲಿ ರೋಲ್ನ ಉಲ್ಟಾ ಕ್ಯಾರೆಕ್ಟರ್, ಸ್ಟ್ರಾಂಗ್ ಲೇಡಿ, ಲೇಡಿ ಡಾನ್ ಆಗಿ ನಾಯಕಿಯ ಪಾತ್ರದಲ್ಲಿ ಭಾರ್ಗವಿಯಾಗಿ ರಾಧಾ ಭಗವತಿ ಮಿಂಚುತ್ತಿದ್ದಾರೆ. ಅಮೃತಧಾರೆ ಸೀರಿಯಲ್ನಲ್ಲಿ ಈಗ ಮಲ್ಲಿ ಪಾತ್ರವನ್ನು ಅನ್ವಿತಾ ಸಾಗರ್ ಮಾಡುತ್ತಿದ್ದಾರೆ.

ಎಂಗೇಜ್ಮೆಂಟ್ ಬೆನ್ನಲ್ಲೇ ಇದೀಗ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ ನಟಿ ರಾಧಾ ಭಗವತಿ. ಅಪ್ಪಟ ಭಾರತೀಯ ನಾರಿಯಾಗಿ ಇರುವ ರಾಧಾ ಅವರನ್ನೇ ರಾಣವ್ ಹುಡುಕಿ ಕೊಂಡಿದ್ದು ವಿಶೇಷವೇ. ಏಕೆಂದರೆ ಈ ಹಿಂದೆ ರಾಣವ್ ಅವರು ತಮ್ಮ ಕನಸಿನ ಕನ್ಯೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಅದೀಗ ಮತ್ತೆ ವೈರಲ್ ಆಗ್ತಿದೆ.

ನಾವೆಲ್ಲಾ 90s ಮಕ್ಕಳಾಗಿರೋ ಕಾರಣ, ನಮಗೆ ನಮ್ಮ ಅಮ್ಮನ ರೀತಿಯ ಪತ್ನಿಯೇ ಬೇಕು ಎಂದುಕೊಳ್ಳುವುದು ಸಹಜ. ನಮ್ಮ ಅಮ್ಮ ತುಂಬಾ ಇನ್ನೋಸೆಂಟ್. ಅವರಿಗೆ ಆಡಂಬರ, ಮೋಸ ಎಲ್ಲಾ ಗೊತ್ತಿಲ್ಲ. ಅದೇ ರೀತಿಯ ಹುಡುಗಿ ನನ್ನ ಲೈಫ್ನಲ್ಲಿಯೂ ಬರಲಿ ಎನ್ನೋದು ನನ್ನ ಆಸೆ ಎಂದಿದ್ದರು ನಟ. ನಾವು ಹೇಗೆ ನೋಡಿಕೊಳ್ಳಬೇಕೋ ಹಾಗೆ ನೋಡಿಕೊಳ್ತೇನೆ ಎಂದಿದ್ದರು.

ಲಕ್ಷಣವಾಗಿ ಸೀರೆ ಉಟ್ಟುಕೊಂಡು ಬೊಟ್ಟು ಇಟ್ಟುಕೊಂಡಿರಬೇಕು. ಅದರಲ್ಲಿಯೂ ಮುಖ್ಯವಾಗಿ ಯಾವ ಜಾಗಕ್ಕೆ ಯಾವ ರೀತಿಯ ಡ್ರೆಸ್ ಹಾಕಬೇಕು ಎನ್ನುವ ಸೆನ್ಸ್ ಇರಬೇಕು ಎಂದಿದ್ದರು. ಈಗ ನೋಡಿ ಎಷ್ಟೋ ಮಂದಿ ಹುಡುಗಿಯರು ದೇವಸ್ಥಾನಕ್ಕೆ ಚಡ್ಡಿ ಹಾಕ್ಕೊಂಡು ಹೋಗ್ತಾರೆ. ಅವರಿಗೆ ಏನು ಹೇಳೋದು ಹೇಳಿ. ಅದಕ್ಕಾಗಿಯೇ ಒಂದು ಹುಡುಗಿಯ ಅದರಲ್ಲಿಯೂ ಕನ್ನಡದ ಹುಡುಗಿಯ ಸಂಸ್ಕೃತಿಯನ್ನು ಆಕೆ ತಿಳಿದುಕೊಂಡಿರಬೇಕು ಎಂದು ರಾಣವ್ ಹೇಳಿದ್ದರು.

Source link
ಚಡ್ಡಿ ಹಾಕ್ಕೊಂಡ್ ಹೋಗೋಳು ಬೇಡ ಅಂದಿದ್ದ Amrthadhaare ಜೈ: ಡ್ರೀಮ್ ಗರ್ಲ್ ಜೊತೆ ಎಂಜಾಯ್