ನಟಿ ಭಾವನಾ ರಾಮಣ್ಣ ಮಗಳ ನಾಮಕರಣ ಸಂಭ್ರಮ: ಶಾಸ್ತ್ರದ ಕ್ಯೂಟ್​ ಫೋಟೋಗಳು ವೈರಲ್​

ನಟಿ ಭಾವನಾ ರಾಮಣ್ಣ ಮಗಳ ನಾಮಕರಣ ಸಂಭ್ರಮ: ಶಾಸ್ತ್ರದ ಕ್ಯೂಟ್​ ಫೋಟೋಗಳು ವೈರಲ್​

ನಟಿ ಭಾವನಾ ರಾಮಣ್ಣ ಮಗಳ ನಾಮಕರಣ ಸಂಭ್ರಮ: ಶಾಸ್ತ್ರದ ಕ್ಯೂಟ್​ ಫೋಟೋಗಳು ವೈರಲ್​
ನಟಿ ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ಪಡೆದ ತಮ್ಮ ಮುದ್ದಿನ ಮಗಳಿಗೆ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರೆ. ಆಪ್ತರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ, ತಮ್ಮ ಅಜ್ಜಿಯ ನೆನಪಿನಲ್ಲಿ ಮಗಳಿಗೆ ‘ರುಕ್ಮಿಣಿ’ ಎಂದು ಹೆಸರಿಟ್ಟಿದ್ದಾರೆ. ಈ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಟಿ ಭಾವನಾ ರಾಮಣ್ಣ ಅವರು ಗರ್ಭಿಣಿಯಾದಾಗಿನಿಂದಲೂ ಸಕತ್​ ಸದ್ದು ಮಾಡುತ್ತಲೇ ಇದ್ದಾರೆ. ಮದುವೆಯಾಗಲೇ ಐವಿಎಫ್​ ಮೂಲಕ ಮಕ್ಕಳನ್ನು ಹೆರುವ ಬಗ್ಗೆ ನಟಿ ತಿಳಿಸಿದಾಗಿನಿಂದಲೂ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೇ ಇತ್ತು. ಅವಳಿ ಮಕ್ಕಳು ಹುಟ್ಟಬೇಕಿತ್ತು. ಆದರೆ ದುರದೃಷ್ಟವಶಾತ್​ ಒಂದು ಮಗುವನ್ನು ಹೆರಿಗೆಯ ವೇಳೆಯೇ ನಟಿ ಕಳೆದುಕೊಂಡಿದ್ದು, ಇದೀಗ ಮಗಳ ಜೊತೆ ಸಂಭ್ರಮದಿಂದ ಕಾಲ ಕಳೆಯುತ್ತಿದ್ದಾರೆ ನಟಿ ಭಾವನಾ ರಾಮಣ್ಣ (Bhavana Ramanna).

ಕಳೆದ ಆಗಸ್ಟ್​ನಲ್ಲಿ ಮಗಳನ್ನು ಪಡೆದಿರುವ ನಟಿ ಭಾವನಾ ಇದೀಗ ಮಗಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದ್ದು, ಅದರ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಆಪ್ತರ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರ ನಡೆದಿದೆ.

ದೊಡ್ಡ ಮನೆ, ಪುಟ್ಟ ಕುಟುಂಬ… ಈಗ ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ. ಹಕ್ಕಿಗಳ ಹಾಡಿಗೆ ಹೊಸ ಸರಿಗಮ ಸೇರಿಸಿದ ಈ ಪುಟ್ಟ ಜೀವ, ನಮ್ಮ ಬದುಕಿಗೆ ಹೊಸ ಪ್ರೀತಿಯ ಅಲೆ ತಂದುಕೊಟ್ಟಿದೆ. ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಮಗಳು ಮುದ್ದು ಮುಖವನ್ನು ಹಿಂದೊಮ್ಮೆ ನಟಿ ರಿವೀಲ್​ ಮಾಡಿದ್ದರು. ಇದೀಗ ನಾಮಕರಣದ ಫೋಟೋ ವೈರಲ್​ ಆಗಿದೆ.

ಗರ್ಭಿಣಿಯಾಗಿದ್ದಾಗಲೇ ಭಾವನಾ ಅವರು ತಮ್ಮ ಮಗುವಿನ ಹೆಸರನ್ನು ರಿವೀಲ್​ ಮಾಡಿದ್ದರು. ಅಚ್ಚರಿ ಎಂದರೆ ಅವರು, ಇಬ್ಬರು ಮಕ್ಕಳ ಹೆಸರಿನ ಬಗ್ಗೆ ಯೋಚಿಸಿಲ್ಲ. ಮಗಳ ಹೆಸರಿನ ಬಗ್ಗೆಯಷ್ಟೇ ಯೋಚಿಸಿರುವುದಾಗಿ ತಿಳಿಸಿ, ತಮ್ಮ ಅಜ್ಜಿಯ ಹೆಸರು ರುಕ್ಮಿಣಿ ಇಡುವುದಾಗಿ ಹೇಳಿದರು.

ಅದೇನು ವಿಧಿ ಲಿಖಿತವೋ ಗೊತ್ತಿಲ್ಲ. ಭಾವನಾ ಅವರಿಗೆ ಹೆಣ್ಣು ಪುತ್ರಿಯೇ ಜನಿಸಿ ಅದು ಆರೋಗ್ಯವಾಗಿದೆ. ಅದಕ್ಕೀಗ ಅಂದುಕೊಂಡಂತೆ ರುಕ್ಮಿಣಿ ಎಂದೇ ನಾಮಕರಣ ಮಾಡಲಾಗಿದೆ ಎನ್ನಲಾಗಿದೆ.

ಇದು ತುಂಬಾ ಹಳೆಯ ಹೆಸರಾಯಿತು, ಮಗು ದೊಡ್ಡವಳಾದ ಮೇಲೆ ಇದನ್ನು ಕೇಳಬಹುದು ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು, ಅರ್ಥವೇ ಇಲ್ಲದ ಹೆಸರುಗಳನ್ನು ಇಡುವುದು ಇಂದಿನ ಫ್ಯಾಷನ್​ ಆಗಿಬಿಟ್ಟಿದೆ. ಆದರೆ ಅರ್ಥಗರ್ಭಿತವಾಗಿ ತಮ್ಮ ಅಜ್ಜಿಯ ಹೆಸರನ್ನೇ ಇಟ್ಟು ಭಾವನಾ ಅವರು ಸಂಪ್ರದಾಯವನ್ನು ಮರೆತಿಲ್ಲ ಎಂದು ಭೇಷ್​ ಎನ್ನುತ್ತಿದ್ದಾರೆ.

Source link

Leave a Reply

Your email address will not be published. Required fields are marked *