Headlines

ಭೀಮಾ vs ಕ್ಯಾಪ್ಟನ್: ಕಾಡಾನೆಗಳ ಕಾದಾಟದ ವಿಡಿಯೋ ವೈರಲ್

ಭೀಮಾ vs ಕ್ಯಾಪ್ಟನ್: ಕಾಡಾನೆಗಳ ಕಾದಾಟದ ವಿಡಿಯೋ ವೈರಲ್


ಹಾಸನ, ಡಿಸೆಂಬರ್ 1: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿಯಲ್ಲಿ ಎರಡು ಮದಗಜಗಳ ನಡುವೆ ನಡೆದಿದ್ದ ಭೀಕರ ಕಾಳಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನವೆಂಬರ್ 9 ರಂದು ಮದವೇರಿದ ಕಾಡಾನೆಗಳಾದ ಭೀಮಾ ಹಾಗೂ ಕ್ಯಾಪ್ಟನ್ ಪರಸ್ಪರ ಎದುರುಬಿದ್ದು ಬಿಗ್ ಫೈಟ್ ನಡೆಸಿದ್ದರು. ಮದವೇರಿದ ಎರಡೂ ಸಲಗಗಳು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತಾ ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಲಾಗಿದೆ. ಪರಸ್ಪರ ಎದುರು ಬಂದಾಗ ಆನೆಗಳು ಭಾರೀ ಶಬ್ದ ಮಾಡುತ್ತಾ ದೀರ್ಘ ಕಾಲ ಕಾಳಗ ನಡೆಸಿಕೊಂಡವು. ಆ ಕಾಳಗದಲ್ಲಿ ಕ್ಯಾಪ್ಟನ್ ಎದುರು ಸೋತ ಭೀಮಾ, ತನ್ನ ಒಂದು ದಂತವನ್ನೇ ಕಳೆದುಕೊಂಡಿತ್ತು. ಆದಾಗ್ಯೂ, ಗಾಯಗಳಿಂದ ಇದೀಗ ಚೇತರಿಸಿಕೊಂಡಿರುವ ಭೀಮಾ ಮತ್ತೆ ಕಾಡಿನಲ್ಲಿ ಸಾಮಾನ್ಯವಾಗಿ ಸಂಚರಿಸುತ್ತಿರುವ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *