ಭೀಮ್ ಯುಪಿಐ ಆ್ಯಪ್​ನಲ್ಲಿ ಪೇಮೆಂಟ್​ಗೆ ಪಿನ್ ಕೋಡ್ ಬದಲು ಫಿಂಗರ್ ಪ್ರಿಂಟ್ ಮತ್ತು ಫೇಸ್ ಅನ್​ಲಾಕ್ ಸಿಸ್ಟಂ

ಭೀಮ್ ಯುಪಿಐ ಆ್ಯಪ್​ನಲ್ಲಿ ಪೇಮೆಂಟ್​ಗೆ ಪಿನ್ ಕೋಡ್ ಬದಲು ಫಿಂಗರ್ ಪ್ರಿಂಟ್ ಮತ್ತು ಫೇಸ್ ಅನ್​ಲಾಕ್ ಸಿಸ್ಟಂ


ಭೀಮ್ ಯುಪಿಐ ಆಯಪ್ ನಲ್ಲಿ ಪೇಮೆಂಟ್ ಗೆ ಪಿನ್ ಕೋಡ್ ಬದಲಿಗೆ ಫಿಂಗರ್ ಪ್ರಿಂಟ್ ಮತ್ತು ಫೇಸ್ ಅನ್ಲಾಕ್ ಸಿಸ್ಟಂ

ಜನವರಿ 24: ಭೀಮ್ (BHIM) ಪೇಮೆಂಟ್ ಆಯಪ್ನಲ್ಲಿ ಯುಪಿಐ ಪಾವತಿಗೆ ಪಿನ್ ಕೋಡ್ ಜೊತೆಗೆ ಬಯೋಮೆಟ್ರಿಕ್ ದೃಢೀಕರಣದ ಅವಕಾಶವನ್ನೂ ಕೊಡಲಾಗುತ್ತಿದೆ. ಯುಪಿಐಐ ಸಿಸ್ಟಂ ರೂಪಿಸಿದ ಎನ್ಪಿ ಸಂಸ್ಥೆಯ ಅಂಗಸಂಸ್ಥೆಯಾದ ಭೀಮ್ ಸರ್ವೀಸ್ ಲಿಮಿಟೆಡ್ (BHIM Payments App) ಈ ಹೊಸ ಫೀಚರ್ ಅನಾವರಣಗೊಳಿಸಿರುವುದನ್ನು ಇಂದು ಪ್ರಕಟಿಸಲಾಗಿದೆ. ಭೀಮ್ ಆಯಪ್ ಬಳಕೆದಾರರು 5,000 ರೂ.

ಫಿಂಗರ್ ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಶನ್ ಸೌಲಭ್ಯ ಇರುವಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ಭೀಮ್ ಆಯಪ್ ಬಳಕೆದಾರರು ಈ ಫೀಚರ್ ಅನ್ನು ಬಳಸಬಹುದು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಬಯೋಮೆಟ್ರಿಕ್ ಫೀಚರ್ ಎನೇಬಲ್ ಆಗಿದ್ದಾರೆ, 5,000 ರೂ ಪಾವತಿಗೆ ಪಿನ್ ಹಾಕುವ ಅವಶ್ಯಕತೆ ಇರುವುದಿಲ್ಲ. ಅದಕ್ಕೂ ಮೇಲ್ಪಟ್ಟ ಮೊತ್ತದ ಪಾವತಿಗೆ ಮಾತ್ರ ಪಿನ್. ಉಳಿದಂತೆ, ಫಿಂಗರ್ ಪ್ರಿಂಟ್ ಅಥವಾ ಮುಖ ಚಹರೆ ಕಾಣಿಸಿದರೆ ಸಾಕಾಗುತ್ತದೆ.

ಯುಪಿಐ ಪಾವತಿ ಸಿಸ್ಟಂಗೆ ಬಯೋಮೆಟ್ರಿಕ್ ಅಥೆಂಟಿಕೇಶನ್ ಹೆಚ್ಚುವರಿ ಭದ್ರತೆ. ಫಿಂಗರ್‌ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಶನ್‌ನ ದತ್ತಾಂಶವು ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಸಂಗ್ರಹವಾಗಿದೆ. ಹೀಗಾಗಿ, ಬೇರೆಯವರು ನಿಮ್ಮ ಐಡೆಂಟಿಟಿಯನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಪಾವತಿ ಕಾರ್ಯವೂ ಸುಲಭ.

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿಯವರೆಗೆ, ಮಾರ್ಚ್ 31ಕ್ಕೆ ಡೆಡ್ಲೈನ್ ​​ಇರುವ ಕೆಲವು ಪ್ರಮುಖ ಹಣಕಾಸು ಕಾರ್ಯಗಳು

ಭೀಮ್ ಪೇಮೆಂಟ್ಸ್ ಆಯಪ್ನಲ್ಲಿ ಬಯೋಮೆಟ್ರಿಕ್ ಅಥೆಂಟಿಕೇಶನ್ ಸಕ್ರಿಯಗೊಳಿಸುವ ಕ್ರಮ

  • ಭೀಮ್ ಪೇಮೆಂಟ್ಸ್ ಆಯಪ್ ತೆರೆಯಿರಿ
  • ಪ್ರೊಫೈಲ್ಗೆ ಹೋಗಿ
  • ನಿಮ್ಮ ಬ್ಯಾಂಕ್ ಖಾತೆ ಆಯ್ಕೆ ಮಾಡಿಕೊಳ್ಳಿ
  • ಬಯೋಮೆಟ್ರಿಕ್ ಟ್ರಾನ್ಸಾಕ್ಷನ್ಸ್ ಸಕ್ರಿಯಗೊಳಿಸಿ
  • ಫಿಂಗರ್ ಪ್ರಿಂಟ್ ಮೂಲಕ 5,000 ರೂ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *