ಯುದ್ಧದಿಂದ ಜೋರ್ಡನ್​ ಅಲ್ಲಿ ‘NTR-Neel’ ಚಿತ್ರಕ್ಕೆ ತೊಂದರೆ? ಸಹಾಯಕ್ಕೆ ಬಂದ್ರಂತೆ ಟ್ರಂಪ್

ಯುದ್ಧದಿಂದ ಜೋರ್ಡನ್​ ಅಲ್ಲಿ ‘NTR-Neel’ ಚಿತ್ರಕ್ಕೆ ತೊಂದರೆ? ಸಹಾಯಕ್ಕೆ ಬಂದ್ರಂತೆ ಟ್ರಂಪ್


ಯುದ್ಧದಿಂದ ಜೋರ್ಡನ್ ಅಲ್ಲಿ 'NTR-ನೀಲ್' ಚಿತ್ರಕ್ಕೆ ತೊಂದರೆ? ಸಹಾಯಕ್ಕೆ ಬಂದ್ರಂತೆ ಟ್ರಂಪ್

ಪ್ರಶಾಂತ್ ನೀಲ್ ಅವರು ಸದ್ಯ ಜೂನಿಯರ್ ಎನ್ ಟಿಆರ್ (JR NTR) ಸಿನಿಮಾ ಕೆಲಸಗಳಲ್ಲಿ ತೊಡಗಿದೆ. ಈ ಚಿತ್ರ ದೊಡ್ಡ ಬಜೆಟ್ ಅಲ್ಲಿ ನಿರ್ಮಾಣ ಆಗುತ್ತಿದೆ, ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾ ಬಗ್ಗೆ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ಅವರು ಜೋರ್ಡನ್ ಶೂಟ್‌ನಲ್ಲಿ ಭಾಗವಹಿಸಿದ್ದಾಗಿ ರಿವೀಲ್ ಮಾಡಿದ್ದಾರೆ.

ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ಉತ್ತರ ಕನ್ನಡದ ಕುಮುಟಾದಲ್ಲಿ ಶೂಟ್ ನಡೆದಿದೆ ಎಂದು ಹೇಳಲಾಗಿದೆ. ಆ ಬಳಿಕ ತಂಡ ವಿವಿಧ ಕಡೆಗಳಲ್ಲಿ ಚಿತ್ರೀಕರಣ ಮಾಡಿದೆ. ವಿದೇಶದಲ್ಲೂ ಶೂಟಿಂಗ್ ನಡೆದಿದೆ. ಈ ಸಿನಿಮಾ ಬಗ್ಗೆ ಈಗ ಕ್ಯಾಮೆರಾಮೆನ್ ಭುವನ್ ಗೌಡ ವಿವರಿಸಿದ್ದಾರೆ.

ಇದನ್ನೂ ಓದಿ: ಜೂ ಎನ್ ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು?

ಇತ್ತೀಚೆಗೆ ಭುವನ್ ಮಾಲ್ ಒಂದರಲ್ಲಿ ಅಂಗಡಿಯ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ‘ಜೋರ್ಡನ್ ಅಲ್ಲಿ ನಾವು ಶೂಟಿಂಗ್ ಗೆ ಹೋಗಿದ್ದೆವು’ ಎಂದು ಭುವನ್ ಹೇಳಿದರು. ‘ಯುದ್ಧದಿಂದ ಚಿತ್ರ ನಿಂತಿತು ಎಂಬ ಮಾತಿದೆಯಲ್ಲ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನಾವು ಇಲ್ಲಿ ಬಂದು ಲ್ಯಾಂಡ್ ಆದ ಬಳಿಕ ಯುದ್ಧ ಶುರುವಾಯಿತು’ ಎಂದು ಭುವನ್ ಹೇಳಿದರು.

‘ಯಾವುದೇ ತೊಂದರೆ ಎದುರಾಗಿಲ್ಲ ಅಲ್ಲವೇ’ ಎಂದು ಕೇಳಿದಾಗ, ‘ಟ್ರಂಪ್ ಕರೆ ಮಾಡಿದ್ರು. ಯಾವಾಗ ಹೊರಡುತ್ತೀರೋ ಆಗ ಫ್ಲೈಟ್ ಕಳಸ್ತೀನಿ ಅಂದ್ರು’ ಎಂದು ಫನ್ ಆಗಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸಿನಿಮಾದ ಹೆಸರನ್ನು ‘ಡ್ರ್ಯಾಗನ್’ ಎಂದು ಕರೆದಾಗ ಅವರು ಯಾವುದೇ ವಿರೋಧವನ್ನು ತೋರಿಸಿಲ್ಲ. ಹೀಗಾಗಿ, ಚಿತ್ರಕ್ಕೆ ಇದೇ ಟೈಟಲ್ ಫೈನಲ್ ಆಯಿತೇ ಎಂಬ ಪ್ರಶ್ನೆಯೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *