ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?

ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?


ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?

ಬೀದರ್, ಜನವರಿ 02: ಹೊಸ ವರ್ಷ ಹಿನ್ನೆಲೆ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ವಿಶೇಷ ಬಜ್ಜಿ ಮತ್ತು ಕಟಕ್ ರೊಟ್ಟಿ ಊಟ ಸವಿದರು. ಮುಖ್ಯೋಪಾಧ್ಯಾಯ ಮಂಜುನಾಥ್, ಶಿಕ್ಷಕರಾದ ಚಂದ್ರಕಾಂತ್ ಹಿಂದೊಡ್ಡಿ, ವಿಷ್ಣುಕಾಂತ್ ಠಾಕೂರ್ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದರು. ಕಾರಹುಣ್ಣಿಮೆ ದಿನ ರೈತರು ಹೊಲಕ್ಕೆ ಹೋಗಿ ಭೂತಾಯಿಗೆ ಪೂಜೆ ಮಾಡಿ ಬಜ್ಜಿ ಊಟ ಸವಿಯುವುದು ಇಲ್ಲಿನ ವಾಡಿಕೆ. ಹೀಗಾಗಿ ಈ ಹೊಸ ವರ್ಷದಂದು ಹೊಸತನದಿಂದ ಕೂಡಿರಲೆಂದು ಬಜ್ಜಿ ಊಟದ ವ್ಯವಸ್ಥೆ ಮಾಡಲಾಗಿದೆ. ಅವರೆಕಾಯಿ, ಕಡಲೆ, ತೊಗರೆ, ಶೇಂಗಾ ಹೀಗೆ ವಿವಿಧ ಬಗೆಯ ತರಕಾರಿ ಸೇರಿಸಿ ಬಜ್ಜಿ ತಯಾರಿಸಿದರು, ಮಕ್ಕಳು ಚಪ್ಪರಿಸಿ ತಿಂದರು. ಶಿಕ್ಷಕರು ಈ ಕಾರ್ಯಕ್ಕೆ ಮಕ್ಕಳು ಫುಲ್ ಖುಷಿಪಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *