ಬೀದರ್, ಜನವರಿ 23: ಜಿಲ್ಲೆಯಲ್ಲಿರುವುದು ಮಾಂಜ್ರಾ ನದಿ (ಮಾಂಜ್ರಾ ನದಿ) ಒಂದೇ. ಈಗ ಇದೆ ನದಿಯ ಒಡಲು ಬರಿದಾಗುತ್ತಿದೆ. ಅಕ್ರಮ ಮರಳು ದಂಧೆಕೋರರು (ಮರಳು ಗಣಿಗಾರಿಕೆ) ನದಿಯ ಒಡಲನ್ನ ಬಗೆಯುತ್ತಿದೆ. ಇಲ್ಲಿ ನಡೆಯುವ ಅಕ್ರಮ ಮರಳು ಸಾಗಾಣಿಕೆ ಹಿಂದೆ ಅಧಿಕಾರಿಗಳು ಕೈಜೋಡಿಸಿದ್ದಾರೆ. ಹೀಗಾಗಿ ಯಾರ ಅಂಜಿಕೆ ಅಳುಕಿಲ್ಲದೆ ಮರಳು ದಂಧೆ ಜೋರಾಗಿ ನಡೆಯುತ್ತಿದೆ.
ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ
ಬೀದರ್ ಜಿಲ್ಲೆಯ ಏಕೈಕ ಜೀವನಾಡಿ ಮಾಂಜ್ರಾದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಯಾವುದೇ ಪರವಾನಿಗೆ ಪಡೆಯದೆಯೇ ಅನಧಿಕೃತವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ನದಿಯಲ್ಲಿ ಟ್ಯಾಕ್ಟರ್ ಭಾರೀ ಪ್ರಮಾಣದಲ್ಲಿ ಮರಳನ್ನು ಹೆಕ್ಕಿ ತೆಗೆಯುತ್ತಿದೆ. ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಹಾಗೂ ಔರಾದ್ ತಾಲೂಕಿನ ಖಾನಾಪುರ ಗ್ರಾಮದ ಸುತ್ತಮುತ್ತ ಎಗ್ಗಿಲ್ಲದೆ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ.
ಇದನ್ನೂ ಓದಿ: ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್‌ನಲ್ಲಿ ನಿಲ್ಲದ ನೀರು: ರೈತರ ನೀರಾವರಿ ಕನಸು ನುಚ್ಚುನೂರು
ಹಗಲು ರಾತ್ರಿಯನ್ನದೇ ಕಪ್ಪು ಮರಳು ಸಾಗಾಟ ಮಾಡಲಾಗುತ್ತಿದೆ, ಅಧಿಕಾರಿಗಳು ಮಾತ್ರ ನಮಗೂ, ಅದಕ್ಕೂ ಸಂಬಂಧವೇ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಟನ್ ಗಟ್ಟಲೇ ಮಾಂಜ್ರಾ ನದಿಯಿಂದ ಉತ್ತಮ ಗುಣಮಟ್ಟದ ಕಪ್ಪು ಮರಳನ್ನ ರಫ್ತು ಮಾಡಲಾಗುತ್ತಿದೆ. ಆದರೆ ಇದಕ್ಕೆ ಗಾಡ್ ಫಾದರ್ ಆಗಿ ನಿಂತಿರುವುದು ಅಧಿಕಾರಿ ವರ್ಗ ಎಂದು ಜನರ ಆರೋಪ.
ಕಣ್ಣೆತ್ತಿ ನೋಡಿದ ಅಧಿಕಾರಿಗಳು
ಈ ತಿಂಗಳ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಇಲ್ಲಿಯ ಹಿಂದೆ ತಾಲೂಕಿನ ಖಾನಾಪುರ ಹಾಗೂ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮ ಬಳಿಯ ಮಾಂಜ್ರಾ ನದಿಯಿಂದ ಮರಳು ತೆಗೆಯಲಾಗುತ್ತಿದೆ ಎಂದು ಮಾಹಿತಿ ನೀಡಲಾಯಿತು. ಆದರೆ ಈವರೆಗೆ ಮರಳು ತೆಗೆಯುವುದು ನಿಂತಿಲ್ಲ. ಮಾಂಜ್ರಾ ನದಿಯಲ್ಲಿ ಬರಪುರ ನೀರಿದೆ, ಎಲ್ಲಿ ನೀರನ ಹರಿವು ಕಡಿಮೆ ಇದೆಯೇ ಅದನ್ನೇ ಬಂಡಾಯವಾಳ ಮಾಡಿಕೊಂಡು ಕಾರ್ಮಿಕರ ಮೂಲಕ ಮರಳನ್ನ ತೆಗೆದು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಹಗಲು-ರಾತ್ರಿ ಎನ್ನದೇ ಮರಳು ಸಾಗಿಸಲು ಪೊಲೀಸರಾಗಲಿ, ಗಣಿ ಮತ್ತು ಭೂ ವಿಜ್ಜನ ಅಧಿಕಾರಿಗಳಾಗಲಿ ಇತ್ತ ಕಡೆ ಕಣ್ಣೆತ್ತಿ ನೋಡುತ್ತಿಲ್ಲ.
ಇನ್ನು ಮರಳನ್ನ ಸಾಗಿಸುವ ವೇಳೆ ಕೆಲಟರ್ ಟ್ರ್ಯಾಕ್‌ಗಳ ನಂಬರ್ ಪ್ಲೇಟ್ ಕೂಡ ಇರುವುದಿಲ್ಲ. ಹತ್ತಾರು ವಾಹನಗಳು ಹಗಲು ರಾತ್ರಿ ಎನ್ನದೇ ಮರಳು ಸಾಗಾಟ ಮಾಡುತ್ತಿರುವುದರಿಂದ ಹಲವು ಗ್ರಾಮಗಳಲ್ಲಿ ಜನರು ರಾತ್ರಿ ನಿದ್ದೆ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮರಳುಗಾರಿಕೆಯಿಂದ ನದಿಗಳ ಅಂತರ್ಜಲ ಬತ್ತಿ ಹೋಗುತ್ತಿದೆ. ಆರಂಭವಾದರೆ ನದಿಯಲ್ಲಿ ನೀರು ಕಡಿಮೆಯಾದರೆ ಕುಡಿಯಲು ನೀರು ಸಿಗದ ವಾತಾವರಣವಾಗುವ ಸ್ಥಿತಿ ಕೂಡ ಇದ್ದು, ಕೂಡಲೇ ನಿರ್ಮಾಣ ಕ್ರಮಕೈಗೊಳ್ಳಬೇಕು ಅನ್ನೋದು ಹೋರಾಟಗಾರ ಅಂಬಾದಾಸ್ ಆಗ್ರಹ.
ಇದನ್ನೂ ಓದಿ: ಎರಡು ಕಿ.ಮೀ ದೂರದ ಜಮೀನಿಗೆ 20 ಕಿ.ಮೀ ಸುತ್ತಿಕೊಂಡು ಹೋಗ್ಬೇಕು: ರೈತರ ಗೋಳು ಕೇಳೋರ್ಯಾರು?
ನದಿ ದಡದಲ್ಲಿ ನಿತ್ಯವೂ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಇಷ್ಟಾಗಿಯೂ ಅಧಿಕಾರಿಗಳು ಮೌನ ವಹಿಸುತ್ತಿರುವುದನ್ನು ನೋಡಿದರೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋದು ರಹಸ್ಯಮಯವಾಗಿ ಉಳಿದಿಲ್ಲ. ಒಟ್ಟಾರೆ ಅಧಿಕಾರಿಗಳು ಮತ್ತು ಲೂಟಿಕೋರರ ಹಣದಾಸೆಗೆ ನದಿಪಾತ್ರ ಬರಿದಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.