Headlines

ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿಗೆ ಶಾಕ್,ಶಿಕ್ಷೆಗೆ ಗುರಿಯಾದ ಟಿಮ್ ಡೇವಿಡ್

ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿಗೆ ಶಾಕ್,ಶಿಕ್ಷೆಗೆ ಗುರಿಯಾದ ಟಿಮ್ ಡೇವಿಡ್

ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿಗೆ ಶಾಕ್,ಶಿಕ್ಷೆಗೆ ಗುರಿಯಾದ ಟಿಮ್ ಡೇವಿಡ್

ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿಗೆ ಶಾಕ್,ಶಿಕ್ಷೆಗೆ ಗುರಿಯಾದ ಟಿಮ್ ಡೇವಿಡ್, ಮುಂಬೈ ವಿರುದ್ದ ಗೆದ್ದ ಆರ್‌ಸಿಬಿಗೆ ಸಮಸ್ಯೆಗಳು ಎದುರಾಗಿದೆ. ಮುಂದಿನ ಪಂದ್ಯಕ್ಕೆ ಟಿಮ್ ಡೇವಿಡ್ ಲಭ್ಯರಿದ್ದಾರಾ?

ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವಿನ ಮೂಲಕ ಮತ್ತೆ ಲಯ ಕಂಡುಕೊಂಡಿದೆ. ಈ ಮೂಲಕ ಟೂರ್ನಿಯಲ್ಲಿ ಘರ್ಜನೆ ಜೊತೆಗೆ ಎದುರಾಳಿಗಳಿಗೆ ವಾರ್ನಿಂಗ್ ನೀಡಿದೆ. ಇತ್ತ ಮುಂಬೈ ಇಂಡಿಯನ್ಸ್ ಸತತ ಸೋಲಿನೊಂದಿಗೆ ಕಂಗಾಲಾಗಿದೆ. ಮುಂಬೈ ವಿರುದ್ದ ಗೆದ್ದ ಆರ್‌ಸಿಬಿಗೆ ಆತಂಕ ಎದುರಾಗಿದೆ. ಪಂದ್ಯ ಗೆದ್ದ ಬೆನ್ನಲ್ಲೇ ಆರ್‌ಸಿಬಿ ಕೀ ಪ್ಲೇಯರ್ ಟಿಮ್ ಡೇವಿಡ್ ಶಿಕ್ಷೆಗೆ ಗುರಿಯಾಗಿದ್ದಾರೆ.

ಆರ್‌ಸಿಬಿ ಬ್ಯಾಟಿಂಗ್ ನಡುವೆ ಅನಿವಾರ್ಯವಾಗಿ ಬಾಲ್ ಬದಲಿಸಬೇಕಾಗಿ ಬಂದಿತ್ತು. 17.2ನೇ ಎಸೆತದ ಬಳಿಕ ಬಾಲ್ ಬದಲಿಸಲಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಟಿಮ್ ಡೇವಿಡ್ ಬಾಲ್ ಚೆಕ್ ಮಾಡಲು ಅಂಪೈರ್‌ನಿಂದ ಪಡೆದುಕೊಂಡಿದ್ದಾರೆ. ನಿಯಮದ ಪ್ರಕಾರ ಕ್ರೀಸ್‌ನಲ್ಲಿರುವ ಕ್ರಿಕೆಟಿಗ ಬಾಲ್ ಪರಿಶೀಲಿಸಿ ಕೆಲವೇ ಸೆಕೆಂಡ್‌ಗಳಲ್ಲಿ ಹಿಂದಿರುಗಿಸಬೇಕು.

ಟಿಮ್ ಡೇವಿಡ್ ಬಾಲ್ ಪಡೆದು ಚೆಕ್ ಮಾಡಿದ್ದಾರೆ. ಬಳಿಕ ಪದೇ ಪದೇ ಮೇಲಕ್ಕೆ ಎಸೆದು ಪರಿಶೀಲಿಸಿದ್ದಾರೆ. ಟಿಮ್ ಡೇವಿಡ್ ನಡೆಯನ್ನು ಅಂಪೈರ್ ಖಂಡಿಸಿದ್ದು ಮಾತ್ರವಲ್ಲ, ಇದಕ್ಕೆ ಅವಕಾಶವಿಲ್ಲ ಬಾಲ್ ಹಿಂದಿರುಗಿಸುವಂತೆ ಸೂಚಿಸಿದ್ದಾರೆ. ಅಂಪೈರ್ ಹತ್ತಕ್ಕೂ ಹೆಚ್ಚು ಬಾರಿ ಕೇಳಿದರೂ ಟಿಮ್ ಡೇವಿಡ್ ಬಾಲ್ ಹಿಂದಿರುಗಿಸದೆ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ಟಿಮ್ ಡೇವಿಡ್ ಐಪಿಎಲ್ ಕೋಡ್ ಆಫ್ ಕಂಡಕ್ಟ್‌ನ 2.4 ಆರ್ಟಿಕಲ್ ಉಲ್ಲಂಘಿಸಿದ್ದಾರೆ. ಇದು ಮೊದಲ ಹಂತದ ಉಲ್ಲಂಘನೆಯಾಗಿದೆ. ಲೆವಲ್ 1 ಉಲ್ಲಂಘನೆಯಾಗಿದೆ. ಹೀಗಾಗಿ ಟಿಮ್ ಡೇವಿಡ್‌ಗೆ ಪಂದ್ಯದ ಸಂಭಾವನೆಯ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ.

ಟಿಮ್ ಡೇವಿಡ್ ಲೆವಲ್ 1 ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯ ಆಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಇದೇ ರೀತಿ ಉಲ್ಲಂಘನೆ ಮುಂದುವರಿದರೆ ದಂಡ ಕಠಿಣವಾಗಲಿದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕಾಗುತ್ತದೆ. ಪ್ರಮುಖವಾಗಿ ಟಿಮ್ ಡೇವಿಡ್ ಆರ್‌ಸಿಬಿ ತಂಡ ಕೀ ಬ್ಯಾಟರ್ ಆಗಿರುವ ಕಾರಣ ಪ್ರತಿ ಪಂದ್ಯಕ್ಕೂ ಲಭ್ಯತೆ ಪ್ರಮುಖವಾಗಿದೆ.

ಮ್ಯಾಚ್ ಅಂಪೈರ್ಸ್ ಪಂದ್ಯ ಮುಗಿದ ಬೆನ್ನಲ್ಲೇ ಟಿಮ್ ಡೇವಿಡ್ ವಿರುದ್ಧ ಶಿಕ್ಷೆಗೆ ಮ್ಯಾಚ್ ರೆಫ್ರಿಗೆ ಶಿಫಾರಸ್ಸು ಮಾಡಿದ್ದರು. ಇತ್ತ ಮ್ಯಾಚ್ ರೆಫ್ರಿ, ಟಿಮ್ ಡೇವಿಡ್ ನಿಯಮ ಉಲ್ಲಂಘನೆ ಕುರಿತು ವಿವರಣೆ ನೀಡಿದ್ದಾರೆ. ಇದೇ ವೇಳೆ ಟಿಮ್ ಡೇವಿಡ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.

ತಪ್ಪು ಒಪ್ಪಿಕೊಂಡ ಟಿಮ್ ಡೇವಿಡ್

Source link

Leave a Reply

Your email address will not be published. Required fields are marked *