Gold And Silver Price:ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, 1 ಕೆಜಿ ಬೆಳ್ಳಿ ಬೆಲೆ 1,26,000 ರೂ. ಆಗಿದೆ.

ಇಂದು ಬೆಳಗ್ಗೆಯೇ ಜನರಿಗೆ ಎಲ್‌ಪಿಜಿ ದರ ಇಳಿಕೆಯ ಗುಡ್‌ನ್ಯೂಸ್ ಸಿಕ್ಕಿತ್ತು. ಮೊದಲು ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿತ್ತು. ಇದರ ಬೆನ್ನಲ್ಲೇ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ತಲೆ ಗಿರ್ ಅನ್ನುವಷ್ಟು ಚಿನ್ನದ ಬೆಲೆ ಹೆಚ್ಚಳವಾಗಿದೆ.

ಚಿನ್ನವನ್ನು ಸುರಕ್ಷಿತ ಹೂಡಿಕೆ ಮತ್ತು ಆಪತ್ಕಾಲದ ನೆಂಟ ಎಂದು ಕರೆಯಲಾಗುತ್ತದೆ. ಈ ಹಿನ್ನೆಲೆ ದರ ಎಷ್ಟೇ ಏರಿಕೆಯಾದ್ರೂ ಚಿನ್ನದ ಬೇಡಿಕೆ ಮಾತ್ರ ಕಡಿಮೆಯಾಗಲ್ಲ. ಇತ್ತೀಚಿನ ದಿನಗಳಲ್ಲಿ ಚಿನ್ನದ ಜೊತೆ ಬೆಳ್ಳಿ ಮೇಲಿನ ಹೂಡಿಕೆಯೂ ಹೆಚ್ಚಾಗುತ್ತಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,705 ರೂಪಾಯಿ

8 ಗ್ರಾಂ: 77,640 ರೂಪಾಯಿ

10 ಗ್ರಾಂ: 97,050 ರೂಪಾಯಿ

100 ಗ್ರಾಂ: 9,70,500 ರೂಪಾಯಿ

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 10,588 ರೂಪಾಯಿ

8 ಗ್ರಾಂ: 84,704 ರೂಪಾಯಿ

10 ಗ್ರಾಂ: 1,05,880 ರೂಪಾಯಿ

100 ಗ್ರಾಂ: 10,58,800 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ ಈ ರೀತಿಯಾಗಿದೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 97,050 ರೂಪಾಯಿ, ಮುಂಬೈ: 97,050 ರೂಪಾಯಿ, ದೆಹಲಿ: 97,200 ರೂಪಾಯಿ, ಕೋಲ್ಕತ್ತಾ: 97,050 ರೂಪಾಯಿ, ಅಹಮದಾಬಾದ್: 97,100 ರೂಪಾಯಿ, ವಡೋದರ: 97,100 ರೂಪಾಯಿ, ಬೆಂಗಳೂರು: 97,050 ರೂಪಾಯಿ, ಹೈದರಾಬಾದ್: 97,050 ರೂಪಾಯಿ, ಪುಣೆ: 97,050 ರೂಪಾಯಿ.

ದೇಶದಲ್ಲಿಂದು ಬೆಳ್ಳಿ ಬೆಲೆ

ಭಾನುವಾರ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿರಲಿಲ್ಲ. ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚಾದ ಹಿನ್ನೆಲೆ ದರವೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 1 ಲಕ್ಷ ರೂ.ಗೂ ಅಧಿಕ ಏರಿಕೆಯಾಗಿದೆ. ಇಂದಿನ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.

10 ಗ್ರಾಂ: 1,260 ರೂಪಾಯಿ

100 ಗ್ರಾಂ: 12,600 ರೂಪಾಯಿ

1000 ಗ್ರಾಂ: 1,26,000 ರೂಪಾಯಿ

ಎಷ್ಟು ದರ ಏರಿಕೆ ಆಗಿದೆ?

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 850 ರೂ.ಗಳಷ್ಟು ಹೆಚ್ಚಳವಾಗಿದೆ

24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 930 ರೂ.ಗಳಷ್ಟು ಏರಿಕೆ ಕಂಡು ಬಂದಿದೆ.

ಇನ್ನು 1 ಕೆಜಿ ಬೆಳ್ಳಿ ದರದಲ್ಲಿ 1,000 ರೂ.ಗಳಷ್ಟು ಏರಿಕೆಯಾಗಿದೆ.

Source link
ಚಿನ್ನಾಭರಣ ಪ್ರಿಯರಿಗೆ ಬಿಗ್ ಶಾಕ್; ತಲೆ ಗಿರ್ ಅನ್ನುವಷ್ಟು ಏರಿಕೆಯಾದ ಬೆಲೆ