
ಬಾಗಲಕೋಟೆ, ಮಾರ್ಚ್ 13: ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಕನ್ನಡಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ವೇಳೆ ದಲಿತ ಯುವಕ ಸಾವನ್ನಪ್ಪಿದ್ದಾರೆ (ಸಾವು) ಘಟನೆ ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ವಿದ್ಯಾರ್ಥಿನಿಯರಿಗೆ ಕಲ್ಲು ಹೊಡೆದಿದ್ದಕ್ಕೆ ಸ್ಥಳೀಯರು ಬಡಿದು ಕೊಂದಿದ್ದಾರೆ ಎಂಬ ಆರೋಪವಿದೆ. ಇನ್ನೊಂದೆಡೆ ಯುವಕ ಕಲ್ಲು ಎಸೆದಿಲ್ಲ ದಲಿತ ನಾಯಕರ ಮಾತು. ಮಲಗಿದ್ದ ದಲಿತ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿದೆ. ಹೀಗಾಗಿ ಈ ಪ್ರಕರಣ ಗೊಂದಲಮಯವಾಗಿದೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳು ಪ್ರಸಾರವಾಗುತ್ತಿವೆ. ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುತ್ತಿದ್ದಾಗ ಕದ್ದು ನೋಡಿದನೆಂದು ಸ್ಥಳೀಯರು ಥಳಿಸಿದ ಪರಿಣಾಮ ಆತ ಹೃದಯಾಘಾತದಿಂದ ಸಾವನ್ನಪ್ಪಿದನೆಂದು, ಕಾಲ್ತುಳಿತಕ್ಕೆ ಸಾವನ್ನಪ್ಪಿದ್ದಾನೆ. ಆದರೆ ಮಲಗಿದ್ದ ಯುವಕನನ್ನು ಎಳೆದು ತಂದು ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ಮೂಲಕ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಾವಳಗಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಮಾರ್ಚ 11ರ ರಾತ್ರಿ 9ಗಂಟೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಕಾರಣ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಮಕ್ಕಳು, ಶಾಲೆಯ ಸಿಬ್ಬಂದಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಭ್ರಮದಲ್ಲಿ ತೊಡಗಿದ್ದರು. ಗ್ರಾಮಸ್ಥರು ಕೂಡು ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಕೆಲ ಯುವಕರು ಗ್ರಾಮ ಪಂಚಾಯಿತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಕುಳಿತು ಕ್ರಾರ್ಯಕ್ರಮ ನೋಡುತ್ತಿದ್ದರು.
ಮೂವರ ವಿರುದ್ಧ ಎಫ್ ಐಆರ್ ದಾಖಲು
ಈ ವೇಳೆ ಮೇಲಿಂದ ಕೆಳಗಡೆ ಕುಳಿತವರ ಮೇಲೆ ಯುವಕರ ಒಂದು ಗುಂಪು ಚಿಕ್ಕಚಿಕ್ಕ ಕಲ್ಲುಗಳನ್ನು ಎಸೆದು ಚೂಡಾಯಿಸಿದೆ. ಈ ಮಧ್ಯೆ ಕೆಳಗೆ ಕುಳಿತವರು ಹಾಗೂ ಮೇಲೆ ಕುಳಿತ ಯುವಕರ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದೆ. ನಂತರ ದಲಿತ ಯುವಕ ಸುದೀಪ್ ಪಾಂಗೆ (೧೯) ಪ್ರಾಣಬಿಟ್ಟಿದ್ದಾನೆ. ಈ ಬಗ್ಗೆ ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೈಂ ನಂ.47/2026 ರಂತೆ ಕೊಲೆ ಪ್ರಕರಣದೊಂದಿಗೆ ಎಸ್.ಸಿ, ಎಸ್.ಟಿ (ಅತ್ಯಾಚಾರ ನಿರೋಧ)ಕಾಯ್ದೆಯ ಕಲಂ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಆರೋಪಿಗಳಾದ ವಿಜಯ್, ರಾಜು ಮತ್ತು ಮಲ್ಲಿಕಾರ್ಜುನ ವಿರುದ್ಧ ಎಫ್ ಐಆರ್ ದಾಖಲಾಗಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವಾಗ ಕದ್ದು ನೋಡಿದ ಆರೋಪದಲ್ಲಿ ಥಳಿಸಿದ ಸ್ಥಳೀಯರು: ಹೃದಯಾಘಾತದಿಂದ ಯುವಕ ಸಾವು
ಇನ್ನು ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದ ವೇಳೆ ಯುವಕರ ಒಂದು ಗುಂಪು ಚಿಕ್ಕ ಕಲ್ಲು ಎಸೆದು ಚುಡಾಯಿಸುವ ಸಂದರ್ಭದಲ್ಲಿ ಸ್ಥಳೀಯ ಎಸ್ ಡಿಎಂಸಿ ಸದಸ್ಯ ವಿಜಯ್ ಹಾಗೂ ಸ್ಥಳೀಯರಾದ ರಾಜು ಮತ್ತು ಮಲ್ಲಿಕಾರ್ಜುನ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ವಿಜಯ್, ರಾಜು, ಮಲ್ಲಿಕಾರ್ಜುನ ಸುದೀಪ್ ಪಾಂಗೆ(19) ಎಂಬ ಯುವಕನ ಮೇಲೆ ಹಲ್ಲೆ ಮಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಮೃತನ ಕುಟುಂಬಸ್ಥರು ಸಾವಳಗಿ ಠಾಣೆಯಲ್ಲಿ ದಾಖಲಾಗಿದ್ದಾರೆ. ಅವರನ್ನ ಬಂಧಿಸಲಾಗಿದೆ, ಸದ್ಯ ತನಿಖೆ ಮುಂದುವರೆದಿದೆ.
ದಲಿತ ಸೇರಿದಂತೆ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಮಾತನಾಡಿದ ಸಾವಳಗಿ ಗ್ರಾಮದ ದಲಿತ ಮುಖಂಡ ರಾಜು ಮೇಲಿನಕೇರಿ, ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳು ಪ್ರಸಾರವಾಗುತ್ತಿವೆ. ಯುವಕ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವುದನ್ನು ನೋಡಿ ಕಲ್ಲು ಹಾಕುತ್ತಿದ್ದ, ಇನ್ನು ಕೆಲ ಮಾಧ್ಯಮಗಳಲ್ಲಿ ಕಾಲ್ತುಳಿತಕ್ಕೆ ಬಲಿಯಾಗುತ್ತಿದೆ. ಅದೆಲ್ಲವು ಸತ್ಯಕ್ಕೆ ದೂರವಾದದ್ದು. ಆತ ಗ್ರಾಮ ಪಂಚಾಯಿತಿ ಮೇಲೆ ಕುಡಿದು ಮಲಗಿದ್ದ. ಯಾರು ಕಲ್ಲು ಎಸೆದಿದ್ದಾರಾ ಗೊತ್ತಿಲ್ಲ. ಮಲಗಿದ್ದ ದಲಿತ ವ್ಯಕ್ತಿಯನ್ನು ಎಳೆದು ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿದೆ. ಎಫ್‌ಐಆರ್ ಪ್ರಕಾರ ವರದಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯನ್ನು ಲವ್ ಮಾಡಿ ಮತಾಂತರಗೊಂಡ ವಿವಾಹಿತ ಮಹಿಳೆ: ಈಗ ಅಸಲಿ ರೂಪ ತೋರಿಸಿದ ಪತಿ
ಒಟ್ಟಾರೆ ಗ್ರಾಮದಲ್ಲಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಸಡಗರದಿಂದ ಸಮಾರೋಪವಾಗಬೇಕಿತ್ತು. ಆದರೆ ಯುವಕರ ನಡುವಿನ ಕ್ಷುಲ್ಲಕ ಜಗಳ ಕೊಲೆಗೆ ಕಾರಣವಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.