ಕೊಪ್ಪಳ, (ಅಕ್ಟೋಬರ್ 28): ಜಿಲ್ಲೆಯ ಕುಕನೂರು ತಾಲೂಕಿನ ಬೆನಕಲ್ ಗ್ರಾಮದಲ್ಲಿ ಇದೇ ಅಕ್ಟೋಬರ್ 27ರಂದು ಇಬ್ಬರು ಮಕ್ಕಳನ್ನ ಕೊಂದು (ಕೊಲೆ) ಆತ್ಮಹತ್ಯೆಗೆ ಶರಣಾಗಿದ್ದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕುಟುಂಬ ಕಲಹದಿಂದಾಗಿ ಮಹಿಳೆ ಈ ನಿರ್ಧಾರ ಮಾಡಬಹುದೆಂದು ಶಂಕಿಸಲಾಗಿದ್ದರೂ ಪೊಲೀಸ್ ತನಿಖೆ ವೇಳೆ ಸ್ಫೋಟಕ ಸತ್ಯ ಹೊರಬಿದ್ದಿದೆ. ಪ್ರಕರಣದ ಹಿಂದೆ ಅಕ್ರಮ ಸಂಬಂಧದ ಕರಾಳ ಮುಖ ಇರುವುದು ಬಟಾಬಯಾಗಿದ್ದರೆ, ತಾಯಿಯ ತಪ್ಪಿಗೆ ಅಮಾಯಕ ಇಬ್ಬರು ಮಕ್ಕಳೂ ಬಲಿಯಾಗಿವೆ. ಇನ್ನು ಮಕ್ಕಳಾದ ರಮೇಶ್(4), ಜಾನು(2) ನೇಣಿಗೆ ಹಾಕಿ ಕೊಂಡು ಬಳಿಕ ತಾಯಿ ಲಕ್ಷ್ಮವ್ವ ಸಹ ನೇಣಿಗೆ ಶರಣಾಗಿದ್ದಳು. ಆದರಂಭದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಇನ್ನು ಈ ಪ್ರಕರಣಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾರೆ.