
ಬೆಂಗಳೂರು, (ಏಪ್ರಿಲ್ 08): ನಗರದ ಡಿಜೆ ಹಳ್ಳಿ (ಡಿ.ಜೆ.ಹಳ್ಳಿ) ಬಳಿ ಇರುವ ಶಾಂಪುರ ರಸ್ತೆಯಲ್ಲಿ ನಿನ್ನೆ (ಏಪ್ರಿಲ್ 07) ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಆರು ಹಸುಗಳು (ಹಸುಗಳು) ಸಾವನ್ನಪ್ಪಿವೆ. ಶೆಡ್ನಲ್ಲಿದ್ದ 20 ಹಸುಗಳ ಮೇಲಿರುವ ಆರು ಮೂಕಜೀವಿಗಳು ಬೆಂಕಿಯ (ಬೆಂಕಿ) ಜ್ವಾಲೆಗೆ ನರಳಿ ಪ್ರಾಣ ಬಿಟ್ಟಿದ್ದಾವೆ. ಮೊದಲು ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೇಕಂತಲೇ ಕಿರಾತಕನೊಬ್ಬ ಹಸುಗಳಿದ್ದ ಶೆಡ್‌ಗೆ ಬೆಂಕಿ ಇಟ್ಟು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. . ಸದ್ಯ ಸಂಬಂಧ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದ ಘಟನೆ, ಬೆಂಕಿ ಇಟ್ಟು ಮೂಕಪ್ರಾಣಿಗಳನ್ನ ಬಲಿಪಡೆದ ವಿಕೃತನಿಗೆ ಬಲೆ ಬೀಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.