ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆ ಆಗಿದ್ದ ಮಾರತಹಳ್ಳಿಯ ಕೃತಿಕಾ ರೆಡ್ಡಿ ಪತಿ ಮಹೇಂದ್ರ ರೆಡ್ಡಿಯಿಂದಲೇ ಕೊಲೆಯಾಗಿರೋದು ನಿನ್ನೆ ಬಯಲಾಗಿತ್ತು. ವಿಕ್ಟೋರಿಯಾದಲ್ಲೇ ವೈದ್ಯನಾಗಿದ್ದ ಮಹೇಂದ್ರ ರೆಡ್ಡಿ ಡೋಸ್ ಅನಸ್ತೇಶಿಯ ಕೊಟ್ಟು ಪತ್ನಿಯನ್ನ ಕೊಂದಿರೋದು ಗೊತ್ತಾಗಿತ್ತು. ಪತ್ನಿಗೆ ಅನಾರೋಗ್ಯ ಕಾಡ್ತಿದ್ರಿಂದ ಕೊಂದಿದ್ದೇನೆ ಅಂತಾ ಮಹೇಂದ್ರ ರೆಡ್ಡಿ ಒಪ್ಪಿಕೊಂಡಿದ್ದಾರೆ.
ಇದೊಂದೇ ವಿಷಯ ಅಲ್ಲ, ತನ್ನ ಸಹಾಯಕ ವೈದ್ಯೆ ಜತೆ ಮಹೇಂದ್ರ ರೆಡ್ಡಿ ಸ್ನೇಹ ಬೆಳಸಿರೋದು ಕೂಡ ಗೊತ್ತಾಗಿದೆ. ಇದೇ ಕಾರಣಕ್ಕೆ ಪತ್ನಿ ಕತೆ ಮುಗಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪತ್ನಿ ಕೊಂದ ಮಹೇಂದ್ರ ಬಗ್ಗೆ ಪೊಲೀಸರು 3 ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮೊಬೈಲ್ ಜಪ್ತಿ ಮಾಡಿದ ಮಾರತ್ತಹಳ್ಳಿ ಪೊಲೀಸರು, ಅಕ್ರಮ ಸಂಬಂಧದ ಶಂಕೆ ಆಧಾರಿತ ತನಿಖೆ ಮಾಡ್ತಿದ್ದಾರೆ. 2ನೇ ಯದಾಗಿ ಹಣಕಾಸಿನ ವಿಚಾರದ ಆಯಾಮ, 3ನೇ ಯದಾಗಿ ಅನಾರೋಗ್ಯ ಪತ್ನಿ ಬೇಡವೆಂದು ಕೊಲೆ ಮಾಡಿರುವ ಶಂಕೆ ಹಿನ್ನೆಲೆ ತನಿಖೆ ತೀವ್ರಗೊಂಡಿದೆ.
ಆರು ತಿಂಗಳ ಹಿಂದೆಯೇ ಕೃತಿಕಾ ಕತೆ ಮುಗಿಸಿದ್ದ ಮಹೇಂದ್ರ ರೆಡ್ಡಿ, ಇದುವರೆಗೂ ಎರಡನೇ ಮದುವೆ ಆಗಿರಲಿಲ್ಲ. ಕೃತಿಕಾ ತಂದೆಯೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದ. ಇದಕ್ಕೆ ಕಾರಣವೇ ನೂರಾರು ಕೋಟಿ ಮೌಲ್ಯದ ಆಸ್ತಿ. ಕೃತಿಕಾ ತಂದೆ ನೂರಾರು ಕೋಟಿ ಆಸ್ತಿ ಒಡೆಯ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಆಸ್ತಿಯ ಅರ್ಧ ಭಾಗದ ಮೇಲೆ ಕಣ್ಣು ಹಾಕಿರುವುದು ಅನುಮಾನವಾಗಿದೆ.
ಒಂದು ಕಡೆ ಕಾಯಿಲೆ ಬಿದ್ದವಳ ಜೊತೆಗೆ ಬದುಕಲು ಇಷ್ಟವಿಲ್ಲ. ಆದರೆ ಆಕೆಯ ಕುಟುಂಬವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ ಮಾವನಿಗೆ ಇಬ್ಬರೇ ಹೆಣ್ಣುಮಕ್ಕಳಿದ್ದು ನೂರಾರು ನೋಟಿ ಒಡೆಯರಾಗಿದ್ರು. ಹೀಗಾಗಿ ಕೊಲೆಗೆ ಭಯಾನಕ ಸಂಚು ರೂಪಿಸಿದ್ದ ಆರೋಪಿ, ಕಾಲಿಗೆ ಐವಿ ಸಿರಿಂಜ್ ಹಾಕಿ ಮೆಡಿಸಿನ್ ಕೊಟ್ಟಿದ್ದ. ಅಷ್ಟಲ್ಲದೇ ಕೊಲೆ ನಡೆಸಿ ಆರು ತಿಂಗಳ ತನಕ ಕುಟುಂಬದ ಜೊತೆಗೆ ಚನ್ನಾಗಿತ್ತು, ಬೇರೆ ಮದುವೆಯೂ ಮಾಡಿಕೊಂಡಿರಲಿಲ್ಲ.
ಬದಲಾಗಿ ತನಗೆ ಸರ್ಜರಿ ಮಾಡಲು ಆಗುವುದಿಲ್ಲ ಎಂದು ನೆಪ ಹೇಳಿ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಕೆಲಸ ಬಿಟ್ಟಿದ್ದ. ಬಳಿಕ ಸೂಳ್ಯದ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡಿದ್ದಾರೆ. ಹೀಗೆ ಪತ್ನಿಯಿಂದ ಮುಕ್ತಿ ಬೇಕು. ಆದರೆ ಆಕೆಯ ಕುಟುಂಬದ ಆಸ್ತಿ ಕೈ ತಪ್ಪಿ ಹೋಗಬಾರದು ಎಂದು ಮಹೇಂದ್ರನ ಯೋಜನೆ ಬಗ್ಗೆ ತನಿಖೆ ವೇಳೆ ಗೊತ್ತಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
29 ವರ್ಷದ ವೈದ್ಯೆ ಕೃತಿಕಾ ರೆಡ್ಡಿ ಬೆಂಗಳೂರಿನ ವರ್ತೂರು ಬಳಿಯ ಮುನೇನಕೊಳಲು ನಿವಾಸಿ ಮುನಿ ದಂಪತಿಗೆ ಜನಿಸಿದ್ದರು. ವೈದ್ಯೆ ಕೃತಿಕಾಗೆ ಒಬ್ಬ ಸಹೋದರಿ ಕೂಡ ಇದ್ದಾರೆ. ಅವರು ಸಹ ಡೆಂಟಿಸ್ಟ್ ಆಗಿದ್ದಾರೆ. ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಕೃತಿಕಾ, ನಂತರ ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಡರ್ಮಟಾಲಜಿ ವಿಷಯದಲ್ಲಿ ಎಂ.ಡಿ ಪದವಿಯನ್ನು ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಕಲ್ಯಾಣನಗರದಲ್ಲಿರುವ ರೂಟ್ಸ್ ಇನ್ಸಿಟಿಟ್ಯೂಟ್ ಡರ್ಮಟಾಲಜಿಯಲ್ಲಿ ಫೆಲೋಶಿಫ್ ಸಹ ಮುಗಿಸಿದ್ದಾರೆ. ಮದುವೆಗೂ ಮುನ್ನಾ ಸ್ಕಿನ್ ಸ್ಪೆಷಲಿಸ್ಟ್ ಸಹ ಆಗಿದ್ದರು.
ಬೆಂಗಳೂರಿನ ಗುಂಜೂರಿನ ನಿವಾಸಿಗಳಾದ ಬಿಲ್ಡರ್ ಶ್ರೀನಿವಾಸ್ ರೆಡ್ಡಿ ದಂಪತಿಗೆ ಆರೋಪಿ ಡಾ. ಮಹೇಂದ್ರ ಜನಿಸಿದ್ದಾರೆ. ಮೂವರು ಮಕ್ಕಳ ಮೇಲಕ್ಕೆ ಮಹೇಂದ್ರ ಎರಡನೇಯವರಾಗಿದ್ದಾರೆ. ಇನ್ನೂ ಇವರ ತಮ್ಮ ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದು, ಅಣ್ಣ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಆರೋಪಿ ಡಾಕ್ಟರ್ ಮಹೇಂದ್ರ ಜನರಲ್ ಫಿಶಿಯನ್ ನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದು, ಗ್ಯಾಸ್ಟ್ರೋ ಸರ್ಜರಿಯಲ್ಲಿ ಎಂ.ಎಸ್ ಪದವಿ ಪಡೆದಿದ್ದಾರೆ. 2024 ಮೇ 06 ರಂದು ಗುಂಜೂರಿನ ಮಂತ್ರ ಕಲ್ಯಾಣಮಂಟಪದಲ್ಲಿ ಕೃತಿಕಾ ಹಾಗೂ ಮಹೇಂದ್ರ ಅವರ ವಿವಾಹವಾಗಿತ್ತು. 2025 ಏಪ್ರಿಲ್ 24 ರಂದು ವೈದ್ಯೆ ಸಾವನ್ನಪ್ಪಿದ್ದರು. ಪತ್ನಿ ಸಾವಿನ ನಂತರ ಉಡುಪಿಯ ಮಣಿಪಾಲದಲ್ಲಿ ಗ್ಯಾಸ್ಟ್ರೋ ಸರ್ಜರಿ ಸರ್ಜನ್ ಆಗಿ ಕೊಲೆ ಆರೋಪಿ ಮಹೇಂದ್ರ ಸೇವೆ ಸಲ್ಲಿಸುತ್ತಿದ್ದ.
ಅದ್ಯಾವಾಗ ಮರಣೋತ್ತರ ಪರೀಕ್ಷೆಯಲ್ಲಿ ಅನಸ್ತೇಷಿಯಾದಿಂದ ಕೃತಿಕಾ ಸಾವನ್ನಪ್ಪಿರುವುದು ದೃಢಪಟ್ಟಿದೆ, ವರದಿ ನಂತರ ಕೃತಿಕಾ ಪೋಷಕರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಕೃತಿಕಾ ಸಾವಿನ ಹಿಂದಿನ ದಿನ ಅಳಿಯ ಮಹೇಂದ್ರ ಮಗಳಿಗೆ ಇಂಜೆಕ್ಷನ್ ನೀಡಿದ್ದ ಅನ್ನೋದನ್ನ ವಿಶೇಷ ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಆ್ಯಕ್ಟೀವ್ ಆದ ಮಾರತ್ ಹಳ್ಳಿ ಪೊಲೀಸರು, ಉಡುಪಿಯ ಮಣಿಪಾಲ್ ನಲ್ಲಿ ಆರೋಪಿ ಮಹೇಂದ್ರನನ್ನು ಬಂಧಿಸಿದ್ದಾರೆ.
ಒಬ್ಬರಿಗೂ ಅನುಮಾನ ಬಾರದಂತೆ ಮಹೇಂದ್ರ ರೆಡ್ಡಿ, ತನ್ನ ಪತ್ನಿಯ ಕತೆ ಮುಗಿಸಿದ್ದ. ಎಲರೂ ಕೈಗೆ ಐವಿ ಹಾಕಿದ್ರೆ, ಇವನು ಮಾತ್ರ ಪತ್ನಿ ಕಾಲಿಗೆ ಐವಿ ಅಂದ್ರೆ ಡ್ರಿಪ್ ಹಾಕಿದ್ದ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಆವತ್ತೇ ಐವಿ, ಸಿರಂಜ್ನ ಸ್ಯಾಂಪಲ್ ಪಡೆದು ತನಿಖೆಗೆ ಒಳಪಡಿಸಿದ್ರು. ಅದರಲ್ಲಿ ಅನಸ್ತೇಶಿಯಾ ಕೊಟ್ಟಿರುವುದು ಗೊತ್ತಾಗಿತ್ತು. ಸೀರಂಜ್ನಲ್ಲಿ ವೈದ್ಯಕೀಯ ವರದಿ ಹಾಗೂ, ಆಕೆಯ ಡೆಡ್ಬಾಡಿಯಲ್ಲಿದ್ದ ಒಂದೇ ಎಂದು ಬರ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡ, ಉಡುಪಿಯ ಮಣಿಪಾಲದಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದರು.
ತನಿಖೆಯನ್ನು ತೀವ್ರಗೊಳಿಸಿರುವ ಆರೋಪಿ ಡಾ.ಮಹೇಂದ್ರ ಅವರ ಎರಡೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ರಿಲೇಶನ್ ಶಿಪ್ ನಲ್ಲಿದ್ದವಳ ಜೊತೆ ಮಾತನಾಡಲು ಆರೋಪಿ ಬೇರೆ ಮೊಬೈಲ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಅದೇ ಇರಲಿ ಆಸ್ತಿ ಹಾಗೂ ಪ್ರೇಯಸಿಗಾಗಿ ಮಹೇಂದ್ರ ರೆಡ್ಡಿ, ತನ್ನ ಪತ್ನಿಯನ್ನೇ ಕೊಂದಿದ್ದು ನಿಜಕ್ಕೂ ದುರಂತ.









