
ಯಾದಗಿರಿ, (ಮಾರ್ಚ್ 19): ಜಿಲ್ಲೆಯ ಗೋನಾಳ ಗ್ರಾಮದ ಮಗನಿಂದಲೇ ತಂದೆ ಕೊಲೆ ಪ್ರಕರಣಕ್ಕೆ (ಗೋನಾಳ್ ಪಂಪಣ್ಣ ಕೊಲೆ ಪ್ರಕರಣ) ಟ್ವಿಸ್ಟ್ ಸಿಕ್ಕಿದೆ. 75 ವಯಸ್ಸಾಗಿದ್ರೂ ಕಾಮದಾಟಕ್ಕಾಗಿ ಮಹಿಳೆಯರ ಜೊತೆ ಸಂಬಂಧ (ಅಕ್ರಮ ಸಂಬಂಧ)ಇಟ್ಟುಕೊಂಡು, ಸೊಸೆಯನ್ನೂ ಬಿಡದ ತಂದೆಯನ್ನು ಕಂಡು ಮಾರ್ಯಾದೆಗೆ ಹೆದರಿ ಮಗನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ. ಹೌದು… ಗೋನಾಳ ಗ್ರಾಮದಲ್ಲಿ 6 ದಿನಗಳ ಹಿಂದೆ ಅಂದ್ರೆ ಮಾರ್ಚ್ 12 ರ ರಾತ್ರಿ 74 ವರ್ಷದ ಪಂಪಣ್ಣ ಸಜ್ಜನ ಎಂಬಾತನ ಕೊಲೆಯಾಗಿತ್ತು. ಕೊಲೆ ನಡೆದ ಬಳಿಕ ಹಂಪಣ್ಣ ಸಜ್ಜನ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಬಳಿಕ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಈ ಪೊಲೀಸರನ್ನು ಹತ್ಯೆಗೈದಿದ್ದು ಯಾರಿಗೆ ಎಂದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಕೊಲೆ ನಡೆದ ನಾಲ್ಕು ದಿನಗಳ ಬಳಿಕ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ತಂದೆಯನ್ನು 75 ವರ್ಷದ ಹಂಪಣ್ಣ ಸಜ್ಜನ್ ಹಾಗೂ ಸುಪಾರಿ ಮಗನನ್ನು ನರಸರೆಡ್ಡಿ, ಹಂತಕರಾದ ರಮೇಶ್, ಜಿ.ವಿರೇಶ್, ಎಂ.ವಿರೇಶ್ ಹಾಗೂ ಕೃಷ್ಟನನ್ನು ವಡಗೇರಾ ಪೊಲೀಸರು ಬಂಧಿಸಿದ್ದಾರೆ.
ಮಗನೇ ತಂದೆ ಹತ್ಯೆಗೆ ಸುಪಾರಿ
ಆರೋಪಿಗಳನ್ನು ಬಂಧಿಸಿದ ಬಳಿಕ 74 ವರ್ಷ ವೃದ್ದ ಹಂಪಣ್ಣನ ಕೊಲೆ ಹಿಂದಿನ ರಹಸ್ಯ ಬಯಲಿಗೆ ಬಂದಿದೆ. ಕೊಲೆ ಮಾಡಿದ್ದು ಮಾತ್ರ ತಿರುಪತಿ ಮೂಲದ ನಾಲ್ಕು ಜನರು. ಆದರೆ, ಕೊಲೆಗೆ ಸುಪಾರಿ ಕೊಟ್ಟಿದ್ದು ಮಾತ್ರ ಹಂಪಣ್ಣ ಸಜ್ಜನ ಪುತ್ರ ನರಸರೆಡ್ಡಿ. ಮಗನೆ ತಂದೆಯನ್ನ ಸುಪಾರಿ ಕೊಟ್ಟು ಕೊಲೆ ಮಾಡಿದರ ಹಿಂದೆ ಒಂದು ಕಾರಣವೂ ಸಹ ಇದೆ. ಅದನ್ನೂ ಹಂತಕರಿಂದ ಕಕ್ಕಿಸಿದ್ದಾರೆ. ಮೊದಲು ಆಸ್ತಿಗಾಗಿ ಕೊಲೆ ಮಾಡಿ ಶಂಕಿಸಿದ್ದರು. ಆದರೆ ತನಿಖೆ ವೇಳೆ, ಕೊಲೆಯಾದ ತಂದೆಯ ಮೊಬೈಲ್‌ನಲ್ಲಿ ಇಂಟರೆಸ್ಟಿಂಗ್ ಫೋಟೋಗಳು ಸಿಕ್ಕಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: 76ರ ವಯಸ್ಸಿನಲ್ಲಿ ಅಕ್ರಮ ಸಂಬಂಧ?: ಒಬ್ಬಂಟಿಯಾಗಿದ್ದ ವೃದ್ಧನ ಭೀಕರ ಹತ್ಯೆ
ಮೊಬೈಲ್ ನಲ್ಲಿ ಸಿಕ್ಕಿದ್ದೇನು?
ಮೃತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಜೊತೆ ಫೋಟೋ ಸಿಕ್ಕಿದ್ದು, ಅನೈತಿಕ ಸಂಬಂಧ ಹೊಂದಿದ್ದ ಎಂದು ಸೂಚಿಸಿದ್ದಾರೆ. ಕೊಲೆಯಾದ ವ್ಯಕ್ತಿ ತನ್ನ ಮಕ್ಕಳ ಜೊತೆಯಲ್ಲಿ ಇರದೇ ಕಾಮದಾಟಕ್ಕಾಗಿ ಹೊಲದಲ್ಲಿ ವಾಸವಾಗಿದ್ದರು. 48 ಜಮೀನು ಹೊಂದಿದ್ದು, ತನ್ನ ಮೂರು ಜನ ಮಕ್ಕಳಿಗೆ ತಲಾ 4 ಎಂಬಂತೆ 12 ಜಮೀನು ನೀಡಿದ್ದಾನೆ. ಇನ್ನುಳಿದ 36 ಚಿನ್ನದ ಜಮೀನು ತನ್ನ ಹೆಸರಿಗೆ ಇಟ್ಟುಕೊಂಡು ಬಂದ ಆದಾಯದಲ್ಲಿ ಶೋಕಿ ಮಾಡುತ್ತಿದೆ.
ಸೊಸೆಯನ್ನೂ ಬಿಡದೆ ಸಿಕ್ಕ ಸಿಕ್ಕ ಮಹಿಳೆಯರ ಜತೆ ಕಾಮದಾಟ
ಮೂರ ಜನ ಮಕ್ಕಳ ಮನೆಯಲ್ಲಿ ಕಳೆದ 15 ವರ್ಷಗಳಿಂದ ಜಮೀನಿನಲ್ಲಿ ಶೆಡ್ ಹಾಕಿಕೊಂಡು ಪತ್ನಿ ಜೊತೆ ವಾಸವಾಗಿದ್ದರು. ಆದರೆ, ಕಳೆದ 8 ವರ್ಷಗಳ ಹಿಂದೆ ಪತ್ನಿ ಮೃತಪಟ್ಟ ಬಳಿಕವೂ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ. ಮದ್ಯವ್ಯಸನಿಯೂ ಕೂಡ ಆಗಿದ್ದ. ತನ್ನ ಕಾಮತೃಷೆ ಒಪ್ಪಿಕೊಂಡಳು ದುಡ್ಡು ಕೊಟ್ಟು ಬೇರೆ ಮಹಿಳೆಯರನ್ನು ಶೆಡ್‌ಗೆ ಕರೆಸಿಕೊಳ್ಳುತ್ತಿದ್ದಳು. ಅದೇ ರೀತಿ ಮಗನ ಹೆಂಡ್ತಿ ಅಂದರೆ ಸೊಸೆ, ಜಮೀನಿಗೆ ಕೆಲಸಕ್ಕೆ ಬಂದವರನ್ನೂ ಬಿಡಬೇಕು. ಕೊನೆಗೆ ತನ್ನ ಪತ್ನಿಯ ಜೊತೆಗೆ ತಂದೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಗೊತ್ತಾಗಿದ್ದೇ ತಡ ನರಸರೆಡ್ಡಿ ರೊಚ್ಚಿಗೆದ್ದಿದ್ದು, ತಂದೆಯನ್ನೇ ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದ. ಕಾಮಿಷ್ಟ ತಂದೆಯಿಂದ ಬೇಸತ್ತು ಹೋಗಿದ್ದ ಮಗ ನಾಲ್ವರನ್ನು ಕರೆಸಿ, 2 ಲಕ್ಷ ರೂ. ನೀಡಿ ಕೊಲೆ ಮಾಡುವಂತೆ ಸುಪಾರಿ ಕೊಟ್ಟಿದ್ದ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.
ಒಟ್ಟಿನಲ್ಲಿ 74 ವಯಸ್ಸಾಗಿದ್ದರೂ ಸಹ ಹಂಪಣ್ಣ ತನ್ನ ಕಾಮದಾಹ ತೀರಿಸಿಕೊಳ್ಳಲು ಹಣದ ಆಮೀಷ ತೋರಿಸಿ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಸಾಲದಕ್ಕೆ ತನ್ನ ಮಗನ ಪತ್ನಿಯನ್ನೂ ಸಹ ತನ್ನ ಕಾಮದಾಟಕ್ಕೆ ಕೊಲೆಯಾಗಿದ್ದಾನೆ.