
ಹುಬ್ಬಳ್ಳಿ, (ಏಪ್ರಿಲ್ 03): ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ (ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ) ಸ್ಫೋಟಕ ತಿರುವು ಸಿಕ್ಕಿದೆ. ಅಜ್ಞಾತ ಸ್ಥಳದಿಂದ ಸಂತ್ರಸ್ತ ಯುವತಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಜಿಮ್ ಟ್ರೈನರ್ (ಜಿಮ್ ಟ್ರೈನರ್) ಸಮೀರ್ ನ ಕಾಮುಕ ಮುಖ ಬಿಚ್ಚಿಟ್ಟಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು, ಬೊಬೈಲ್ ವಶಕ್ಕೆ ಪಡೆಯಲು ಪರಿಶೀಲನೆ ನಡೆಸಿದಾಗ ಸಮೀರ್ ಮತ್ತಷ್ಟು ಬಂಡಾಯ ಬಟಾಬಯಲಾಗಿದೆ. ಸಮೀರ್ನ ಮೊಬೈಲ್ ನಲ್ಲಿ ಬೇರೆ ಬೇರೆ ಯುವತಿಯ ಜೊತೆ ಇದ್ದ ಫೋಟೋಗಳು ಇವೆ. ಗರ್ಭನಿರೋಧಕ ಮಾತ್ರ ಫೋಟೋ ಸಹ ಸಿಕ್ಕಿದೆ. ಇನ್ನು ಸಮೀರ್ ತನ್ನ ಅರೆಬೆತ್ತಲೆ ಫೋಟೋಗಳನ್ನ ಯುವತಿಯರಿಗೆ ಕಳುಹಿಸುತ್ತಿದ್ದನಂತೆ. ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.